ಮಾಸ್ಕೋ: ಯುದ್ಧ ನಿಲ್ಲಿಸಲು ರಷ್ಯಾ ಎರಡು ಷರತ್ತುಗಳನ್ನು ಉಕ್ರೇನ್ ಮುಂದಿಟ್ಟಿದೆ. ಕ್ರಿಮಿಯಾವನ್ನು ರಷ್ಯಾದ ಭೂಭಾಗವೆಂದು, ಡೋನ್ಯಸ್ಕ್, ಲುಹಾನ್ಸ್‍ಕ್ ಪ್ರಾಂತ್ಯಗಳನ್ನು ಸ್ವಾತಂತ್ರ್ಯ ದೇಶಗಳೆಂದು ಉಕ್ರೇನ್ ಪರಿಗಣಿಸಬೇಕು ಎಂಬ ಷರತ್ತು ಒಡ್ಡಿದೆ.
Advertisement
ಈ ಮಧ್ಯೆ ರಷ್ಯಾ ಮೇಲೆ ವಿಶ್ವದ ದಿಗ್ಬಂಧನ ಮತ್ತಷ್ಟು ಹೆಚ್ಚುತ್ತಿದೆ. ಐಬಿಎಂ ಸಂಸ್ಥೆ ರಷ್ಯಾದಲ್ಲಿ ಚಟುವಟಿಕೆ ನಿಲ್ಲಿಸುವುದಾಗಿ ಘೋಷಿಸಿದೆ. ಈ ಮೂಲಕ ಜಗತ್ತಿನಲ್ಲೇ ಅತ್ಯಧಿಕ ದಿಗ್ಬಂಧನಗಳಿಗೆ ಒಳಗಾಗಿರುವ ದೇಶ ಎಂಬ ಕೆಟ್ಟ ದಾಖಲೆಗೆ ರಷ್ಯಾ ಪಾತ್ರವಾಗಿದೆ. ಈ ಬೆಳವಣಿಗೆ ಜಾಗತಿಕ ಮಹಾ ಪಲ್ಲಟಕ್ಕೆ ದಾರಿ ಮಾಡಿಕೊಡುವಂತೆ ಕಾಣುತ್ತಿದೆ. ಇದನ್ನೂ ಓದಿ: ಅಜ್ಜಿ ತವರು ಉಕ್ರೇನ್‌ಗೆ 77.07 ಕೋಟಿ ನೆರವು ನೀಡಿದ ʼಟೈಟಾನಿಕ್ʼ ಹೀರೋ
Advertisement
Advertisement
ರಷ್ಯಾ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಈಗ ಚೀನಾ ಮೇಲೆ ಹೆಚ್ಚು ಅವಲಂಬಿತವಾಗುತ್ತಿದೆ. ಅಲ್ಲದೇ ವಿಶ್ವದ ದೊಡ್ಡಣ್ಣ ಅಮೆರಿಕಾ ಅಲ್ಲ, ಚೀನಾ ಎಂದು ರಷ್ಯಾ ಬಿಂಬಿಸತೊಡಗಿದೆ. ಜೊತೆಗೆ ದೇಶಿಯ ತಂತ್ರಜ್ಞಾನಗಳ ಬಳಕೆಗೆ ಮುಂದಾಗಿದೆ. ಇಷ್ಟಕ್ಕೆ ಸುಮ್ಮನಾಗಿಲ್ಲ ರಷ್ಯಾ, ಉಕ್ರೇನ್‍ಗೆ ಬೆಂಬಲ ನೀಡೋದನ್ನು ಮುಂದುವರೆಸಿದರೆ, ಇನ್ನಷ್ಟು ದಿಗ್ಬಂಧನ ವಿಧಿಸಿದ್ರೇ ಯುರೋಪ್‍ಗೆ ಅನಿಲ ಪೂರೈಕೆ ನಿಲ್ಲಿಸೋದಾಗಿ ಬೆದರಿಕೆ ಹಾಕಿದೆ.
Advertisement
ರಷ್ಯಾದ ಕಚ್ಚಾ ತೈಲ ಪೂರೈಕೆ ನಿಂತ್ರೆ, ಒಂದು ಬ್ಯಾರಲ್ ಬೆಲೆ 300 ಡಾಲರ್ ಗಡಿ ದಾಟಲಿದೆ. ನೀವು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಕನಿಷ್ಠ 1ವರ್ಷ ಹಿಡಿಯುತ್ತೆ.. ಯೋಚಿಸಿ ಎಂದು ವಾರ್ನಿಂಗ್ ನೀಡಿದೆ. ಇನ್ನು, ನ್ಯಾಟೋ ರಾಷ್ಟ್ರಗಳು ನೇರವಾಗಿ ಬೆಂಬಲ ನೀಡದಿರೋದು ಝೆಲೆನ್‍ಸ್ಕಿ ಸಿಟ್ಟಿಗೆ ಕಾರಣವಾಗಿದೆ. ರಷ್ಯಾಕ್ಕೆ ನ್ಯಾಟೋ ರಾಷ್ಟ್ರಗಳು ಭಯಬಿದ್ದಿದೆ ಎಂದು ಕಿಡಿಕಾರಿದ್ದಾರೆ. ತಾವು ಕ್ರಿಮಿಯಾ, ಡಾನ್ ಬಾಸ್ ಬಗ್ಗೆ ಚರ್ಚೆಗೆ ರೆಡಿ ಎಂದಿದ್ದಾರೆ. ಇದನ್ನೂ ಓದಿ: ನಿರ್ಬಂಧಕ್ಕೆ ಒಳಪಟ್ಟ ದೇಶಗಳ್ಯಾವುವು? ಕಾರಣ ಏನು? ಪಟ್ಟಿಯಲ್ಲಿ ರಷ್ಯಾ ನಂ.1
ರಷ್ಯಾ ಪರ್ಯಾಯ ಮಂತ್ರ
* ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳಿಗೆ SWIFT ಬದಲು SPSF ಬಳಕೆ (ದೇಶಿಯವಾಗಿ ತಯಾರಿಸಲಾದ ಸಿಸ್ಟಮ್ ಫಾರ್ ‘ಟ್ರಾನ್ಸ್ ಫರ್ ಆಫ್ ಫೈನಾನ್ಶಿಯಲ್ ಮೆಸೇಜೆಸ್’ ವ್ಯವಸ್ಥೆ ಸದ್ಯ 5 ದೇಶಗಳ 400 ಬ್ಯಾಂಕ್‍ಗಳು ಇದರ ವ್ಯಾಪ್ತಿಯಲ್ಲಿವೆ)
* ಎಸ್‍ಪಿಎಸ್‍ಎಫ್ ಜೊತೆಗೆ ಚೀನಾದ ಅPIS ಬಳಕೆಗೂ ಚಿಂತನೆ (2015ರಿಂದ ಷಾಂಘೈ ಕೇಂದ್ರವಾಗಿ ಕಾರ್ಯ, ಇದರ ವ್ಯಾಪ್ತಿಯಲ್ಲಿ 103 ದೇಶಗಳ 1280 ಬ್ಯಾಂಕ್ ಸ್ವಿಫ್ಟ್ ಗೆ ಹೋಲಿಸಿದ್ರೆ 10 ಪಟ್ಟು ಚಿಕ್ಕದು)
* ವೀಸಾ, ಮಾಸ್ಟರ್ ಕಾರ್ಡ್ ಬದಲು ಚೀನಾದ `ಯೂನಿಯನ್ ಪೇ’ ಬಳಕೆ ಪ್ಲಾನ್ (180 ದೇಶಗಳಲ್ಲಿ ಬಳಕೆಯಲ್ಲಿದೆ)
ದಿಗ್ಬಂಧನ ದೇಶಗಳ ಲೆಕ್ಕ
* ರಷ್ಯಾ – 5552 (ಫೆ.22ಕ್ಕೆ ಮೊದಲು 2754 ಇತ್ತು)
* ಇರಾನ್ – 3616
* ಸಿರಿಯಾ – 3608
* ಉತ್ತರ ಕೊರೀಯಾ -2077
* ವೆನಿಜುಯೆಲಾ – 651
* ಮಯನ್ಮಾರ್ – 510
* ಕ್ಯೂಬಾ – 208