ಭಾರತೀಯ ಸೇನೆಗಾಗಿ ಜನಗಣಮನ ನುಡಿಸಿದ ಅಮೆರಿಕಾ ಆರ್ಮಿ: ವಿಡಿಯೋ

Public TV
1 Min Read
us army

ವಾಷಿಂಗ್ಟನ್: ಭಾರತೀಯ ಸೇನೆಗಾಗಿ ಅಮೆರಿಕದ ಸೈನ್ಯ ಬ್ಯಾಂಡ್ ವಾಷಿಂಗ್ಟನ್‍ನಲ್ಲಿ ಭಾರತೀಯ ಮತ್ತು ಯುಎಸ್ ಸೈನ್ಯದ ಜಂಟಿ ವ್ಯಾಯಾಮದ ಸಮಯದಲ್ಲಿ ಭಾರತೀಯ ರಾಷ್ಟ್ರಗೀತೆ ‘ಜನಗಣಮನ’ ನುಡಿಸಿದ್ದಾರೆ.

ಜಂಟಿ ವ್ಯಾಯಾಮದ ಕೊನೆಯ ದಿನವಾದ ಬುಧವಾರ ಅಮೆರಿಕಾ ಸೇನೆ ಜನಗಣಮನ ನುಡಿಸಿದೆ. ಅಮೆರಿಕಾದ ಸೈನಿಕರು ತಮ್ಮ ಸೇನಾ ಬ್ಯಾಂಡ್‍ನಲ್ಲಿ ಭಾರತದ ರಾಷ್ಟ್ರಗೀತೆ ನುಡಿಸುವ ವಿಡಿಯೋವನ್ನು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸಖತ್ ವೈರಲ್ ಆಗಿದೆ.

ಉಭಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಕ್ಷಣಾ ಸಹಕಾರದ ಭಾಗವಾಗಿ ವಾಷಿಂಗ್ಟನ್‍ನಲ್ಲಿ ಭಾರತ ಮತ್ತು ಯುಎಸ್ ನಡುವೆ ಜಂಟಿ ಮಿಲಿಟರಿ ವ್ಯಾಯಾಮ ಕಳೆದ ಶುಕ್ರವಾರ ಪ್ರಾರಂಭವಾಗಿತ್ತು. ಈ ಕಾರ್ಯಕ್ರಮವನ್ನು ವಾಷಿಂಗ್ಟನ್‍ನ ಜಾಯಿಂಟ್ ಬೇಸ್ ಲೂಯಿಸ್ ಮ್ಯಾಕ್‍ಕಾರ್ಡ್‍ನಲ್ಲಿ ನಡೆಸಲಾಗಿತ್ತು.

ಇದಕ್ಕೂ ಮುಂಚೆ ಜಂಟಿ ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಭಾರತೀಯ ಸೈನಿಕರು ಮತ್ತು ಅಮೆರಿಕದ ಸೈನಿಕರು ಜೊತೆಗೂಡಿ ನಮ್ಮ ದೇಶದ ಸೇನೆಯ ಮೆರವಣಿಗೆ ಗೀತೆಯಾದ ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ ಎಂಬ ಹಾಡನ್ನು ಹೇಳುತ್ತಾ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ ಈ ಹಾಡು ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾದ ಅಸ್ಸಾಂ ರೆಜಿಮೆಂಟ್‍ನ ಸೈನಿಕ ಬದ್ಲುರಾಮ್ ಅವರಿಗೆ ಸಮರ್ಪಿಸಲಾಗಿರುವ ಬಹು ಜನಪ್ರಿಯ ಗೀತೆಯಾಗಿದೆ. ಈ ಹಾಡನ್ನು ಹಾಡುತ್ತಾ ಭಾರತ ಮತ್ತು ಅಮೆರಿಕ ಸೈನಿಕರ ಗುಂಪು ಚಪ್ಪಾಳೆ ತಟ್ಟುತ್ತಾ ಹರ್ಷೋದ್ಗಾರದಿಂದ ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Share This Article
Leave a Comment

Leave a Reply

Your email address will not be published. Required fields are marked *