– ತಾಪಮಾನ ಶೂನ್ಯಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆ
ವಾಷಿಂಗ್ಟನ್: ಅಮೆರಿಕದಲ್ಲಿ ಹಿಮಪಾತ (Midwest) ಜೋರಾಗ್ತಿದೆ. ಭಾರೀ ಹಿಮಗಾಳಿಯಿಂದಾಗಿ ತಾಪಮಾನ ಕಡಿಮೆಯಾಗ್ತಿದ್ದು, ನ್ಯೂಯಾರ್ಕ್‌ನಲ್ಲಿ (New York) ಎಲ್ಲವೂ ಮಂಜಿನಗಡ್ಡೆಗಳಾಗ್ತಿವೆ. ಕುಡಿಯುವ ನೀರು ಕೂಡ ಗಟ್ಟಿಯಾಗುವ ಪರಿಸ್ಥಿತಿ ನಿರ್ಮಾಣವಾಗ್ತಿದೆ.
ಜನಜೀವನ ಅಸ್ತವ್ಯಸ್ತವಾಗುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ. ಇದರ ಮೊದಲ ಲಕ್ಷಣವಾಗಿ 1 ಸಾವಿರಕ್ಕೂ ಹೆಚ್ಚು ವಿಮಾನಗಳ (US Flights) ಹಾರಾಟ ಸ್ಥಗಿತವಾಗಿದೆ. ಇದನ್ನೂ ಓದಿ: ಗಂಟೆಗೆ 700 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲು ಅಭಿವೃದ್ಧಿಪಡಿಸಿದ ಚೀನಾ – ಜಸ್ಟ್ 2 ಸೆಕೆಂಡ್‌ನಲ್ಲಿ ಕಣ್ಣ ಮುಂದೆಯೇ ಪಾಸ್ ಆಗುತ್ತೆ

1,000 ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, 4,000ಕ್ಕೂ ವಿಮಾನಗಳ ಹಾರಾಟ ವಿಳಂಬವಾಗಿದೆ. ಇದರಿಂದ ಕ್ರಿಸ್ಮಸ್ ರಜೆ ಕಳೆಯಲು ತೆರಳಿದ್ದ ಪ್ರವಾಸಿಗರು ಪರದಾಡುವಂತಾಗಿದೆ. ಇದನ್ನೂ ಓದಿ: ರೌಂಡಪ್ 2025 – ಸದ್ದು ಮಾಡಿದ ಟಾಪ್ ಆರ್ಥಿಕ ಸುದ್ದಿಗಳು
ತಾಪಮಾನ ಶೂನ್ಯಕ್ಕಿಳಿಯುವ ಸಾಧ್ಯತೆ
ನ್ಯೂಯಾರ್ಕ್‌ನಲ್ಲಿ ಹಿಮಗಾಳಿ ಮುಂದುವರಿದಿದ್ದು, ರಾತ್ರಿಯಿಡೀ 10 ಇಂಚುಗಳಷ್ಟು ಹಿಮ ಬೀಳುವ ನಿರೀಕ್ಷೆಯಿದೆ. ತಾಪಮಾನ ಶೂನ್ಯಕಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶದ ಗಾಯಕನ ಸಂಗೀತ ಕಛೇರಿ ರದ್ದು; ಸ್ಥಳದಲ್ಲಿ ಗುಂಪು ದಾಳಿ – 25 ಮಂದಿಗೆ ಗಾಯ

