ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ (Urvashi rautela) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ರಿಷಬ್ ಪಂತ್ ವಿಷ್ಯವಾಗಿ ನಟಿ ನ್ಯೂಸ್‌ನಲ್ಲಿದ್ದರು. ಈಗ ಪಾಕ್ ಕ್ರಿಕೆಟಿಗ ನಸೀಮ್ ಶಾ (Naseem shah) ವಿಷ್ಯವಾಗಿ ಮತ್ತೆ ಟ್ರೆಂಡಿಂಗ್‌ನಲ್ಲಿದ್ದಾರೆ. ಇವರಿಬ್ಬರ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.
ಬಾಲಿವುಡ್‌ನ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸುತ್ತಿರುವ `ಐರಾವತ’ ನಟಿ ಈಗ ನಸೀಮ್ ಶಾಗೆ ಬೋಲ್ಡ್ ಆಗಿದ್ದಾರೆ. ಇನ್ನೂ ಊರ್ವಶಿ ರೌಟೇಲಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ನಗುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ:`ಬಾಹುಬಲಿ’ ಪ್ರಭಾಸ್ ಜೊತೆ ನಟಿಸಲಿದ್ದಾರಾ ಚಿಕ್ಕಣ್ಣ?
View this post on Instagram
ಈ ವೀಡಿಯೋದ ಹಿನ್ನೆಲೆಯಲ್ಲಿ ಅತೀಫ್ ಅಸ್ಲಾಂ ಅವರ ರೊಮ್ಯಾಂಟಿಕ್ ಹಾಡು ಪ್ಲೇ ಆಗುತ್ತಿದೆ. ಅದರ ನಂತರ ಊರ್ವಶಿ ಮತ್ತು ನಸೀಮ್ ನಡುವೆ ಏನೋ ನಡೆಯುತ್ತಿದೆ ಎಂದು ಊಹಿಸಲಾಗಿದೆ. ಇಬ್ಬರು ಕಣ್ಣಲ್ಲೇ ಮಾತನಾಡಿದ್ದಾರೆ. ಸದ್ಯ ವೀಡಿಯೋ ಸಖತ್ ಟ್ರೋಲ್ ಆಗುತ್ತಿದೆ.
Urvashi Rautela posted a video of herself and Naseem Shah on her Instagram story???????? pic.twitter.com/yH87gzEvH6
— Fatimah (@zkii25) September 6, 2022
ವೀಡಿಯೋದಲ್ಲಿ ನಸೀಮ್‌ನ ಈ ನಗುವನ್ನು ನೋಡಿ ಊರ್ವಶಿ ರೌಟೇಲಾಳ ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ. ಆದರೆ, ಸದ್ಯಕ್ಕೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.