Bengaluru CityCinemaKarnatakaLatestMain PostSandalwood

`ಬಾಹುಬಲಿ’ ಪ್ರಭಾಸ್ ಜೊತೆ ನಟಿಸಲಿದ್ದಾರಾ ಚಿಕ್ಕಣ್ಣ?

ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಟಾಲಿವುಡ್‌ನ ಸೂಪರ್ ಸ್ಟಾರ್ ಪ್ರಭಾಸ್ (Prabhas) ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತೆಲುಗಿನ ಸಿನಿಮಾರಂಗದತ್ತ ಚಿಕ್ಕಣ್ಣ (Chikkann) ಮುಖ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ನಟ, ಹಾಸ್ಯ ಕಲಾವಿದನಾಗಿ ಛಾಪೂ ಮೂಡಿಸಿರುವ ನಟ ಚಿಕ್ಕಣ್ಣಗೆ ಸಿಕ್ಕಾಪಟ್ಟೆ ಬೇಡಿಕೆಯಿದೆ. ಹೀಗಿರುವಾಗ ಚಿಕ್ಕಣ್ಣ ಬಗ್ಗೆ ಹೊಸ ಸುದ್ದಿಯೊಂದು ಸದ್ದು ಮಾಡುತ್ತಿದೆ. `ಬಾಹುಬಲಿ’ ಖ್ಯಾತಿಯ ಪ್ರಭಾಸ್ (Bahubali star prabhas) ಜೊತೆ ʻಸಲಾರ್‌ʼ ಚಿತ್ರದಲ್ಲಿ ಚಿಕ್ಕಣ್ಣ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಚಿಕ್ಕಣ್ಣ ಕೂಡ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಆರ್ಯವರ್ಧನ್ ಪಾತ್ರಕ್ಕೆ ಪ್ಲಾಸ್ಟಿಕ್ ಸರ್ಜರಿ ಫಿಕ್ಸ್: ಎರಡೆರಡು ಆಘಾತ

ಪ್ರಭಾಸ್ ಜೊತೆಗಿನ ಚಿಕ್ಕಣ್ಣ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋದಿಂದ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ಈ ಫೋಟೋ ನೋಡಿರುವ ನೆಟ್ಟಿಗರಿಗೆ ಇವರಿಬ್ಬರು ಒಟ್ಟಿಗೆ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ನಟ ಚಿಕ್ಕಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.ಈ ಫೋಟೋ ಇತ್ತೀಚೆಗೆ ತೆಗೆದ ಫೋಟೋ ಅಲ್ಲ. ಹಿಂದೊಮ್ಮೆ ಪಾರ್ಟಿಯಲ್ಲಿ ಸಿಕ್ಕಾಗ ನಾನು ಮತ್ತು ಪ್ರಭಾಸ್ ಸರ್ ಜೊತೆ ಫೋಟೋ ತೆಗೆಸಿಕೊಂಡಿದ್ದೆ, ಇದೀಗ ನಮ್ಮ ಹಳೆಯ ಫೋಟೋ ವೈರಲ್ ಆಗುತ್ತಿದೆ. ನಾನು ಅವರ ಜೊತೆ ಯಾವುದೇ ಸಿನಿಮಾ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು ನಟ ಚಿಕ್ಕಣ್ಣ `ಉಪಾಧ್ಯಕ್ಷ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Live Tv

Leave a Reply

Your email address will not be published.

Back to top button