ಪದೇ ಪದೇ ಸುಳ್ಳು ಹೇಳಿ ‘ಛೀ ಸುಳ್ಳಿ..’ ಅನಿಸ್ಕೊಳ್ತಿದ್ದಾರೆ ಊರ್ವಶಿ ರೌಟೆಲಾ

Public TV
2 Min Read
urvashi rautela 1

ಹಿಂದೆ ಕನ್ನಡ ಸಿನಿಮಾವೊಂದರಲ್ಲಿ ನಟಿಸುವುದಾಗಿ ಹೇಳಿ ಸಾಕಷ್ಟು ಪ್ರಚಾರ ತಗೆದುಕೊಂಡಿದ್ದ ಬಾಲಿವುಡ್ ನಟಿ ಊರ್ವಶಿ ರೌಟೆಲಾ, ಇದೀಗ ಮತ್ತೊಂದು ಸುಳ್ಳು ಹೇಳಿ ಸಿಕ್ಕಾಕಿಕೊಂಡಿದ್ದಾರೆ. ಬಾಲಿವುಡ್ ದುರಂತ ನಾಯಕಿಯೊಬ್ಬರ ಬಯೋಪಿಕ್ ನಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದ ನಟಿ, ಇದೀಗ ಅದು ಸುಳ್ಳು ಎನ್ನುವ ಮಾಹಿತಿ ಹೊರ ಬಿದ್ದಿದೆ. ಪದೇ ಪದೇ ಸುಳ್ಳು ಹೇಳುತ್ತಿರುವುದಕ್ಕೆ ಅಭಿಮಾನಿಗಳು ‘ಛೀ ಸುಳ್ಳಿ’ ಎಂದು ಗೇಲಿ ಮಾಡುತ್ತಿದ್ದಾರೆ.

urvashi rautela 2

ಬಾಲಿವುಡ್ (Bollywood) ಕಂಡ ದುರಂತ ನಾಯಕಿಯರಲ್ಲಿ ಪರ್ವಿನ್ ಬಾಬಿ (Parveen Babi) ಕೂಡ ಒಬ್ಬರು. ತಮ್ಮ ಸೌಂದರ್ಯ ಹಾಗೂ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದ ಪರ್ವಿನ್ ಕೊನೆಯಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗಿ ಸಾಯಬೇಕಾಯಿತು. ಅದೂ ಮುಂಬೈನ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದನ್ನೂ ಓದಿ:ಹುಟ್ಟುಹಬ್ಬದಂದು ನಟಿ ಭಾವನಾ ಮೆನನ್ 86ನೇ ಸಿನಿಮಾ ಅನೌನ್ಸ್

Parveen Babi 1

70-80ರ ದಶಕದಲ್ಲಿ ಬಾಲಿವುಡ್ ಆಳಿದ ನಟಿ ಪರ್ವಿನ್. ಈ ದಶಕದ ಕಲಾವಿದರು ಪರ್ವಿನ್ ಡೇಟ್ ಗಾಗಿ ಕಾದದ್ದೂ ಇದೆ. ಅಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದರು. ಹಾಗಾಗಿ ಟೈಮ್ಸ್ ನಿಯತಕಾಲಿಕ ಇವರ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಬಾಲಿವುಡ್ ನಲ್ಲಿ ಮೊದಲ ಬಾರಿಗೆ ಮುಖಪುಟ ಅಲಂಕರಿಸಿದ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.

urvashi rautela 3

ಚರಿತ್ರಾ ಎಂಬ ಸಿನಿಮಾ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಪರ್ವಿನ್ ಬಾಬಿ, ಚರಿತ್ರೆಯಲ್ಲಿ ದಾಖಲಾಗುವಂತಹ ಚಿತ್ರಗಳಲ್ಲೇ ನಟಿಸಿದರು. ಆಗಿನ ಬಹುತೇಕ ಬಾಲಿವುಡ್ ನಟರ ಜೊತೆ ನಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ನಟಿಯ ಕುರಿತಾದ ಬಯೋಪಿಕ್ (Biopic) ಬಾಲಿವುಡ್ ನಲ್ಲಿ ಸಿದ್ಧವಾಗುತ್ತಿದೆ ಎಂದು ಹೇಳಲಾಗಿತ್ತು. ವಾಸಿಂ ಎಸ್ ಖಾನ್ (Wasim Khan) ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಬಾಬಿ ಅವರ ಪಾತ್ರವನ್ನು ಊರ್ವಶಿ ರೌಟೆಲಾ (Urvashi Rautela) ನಿರ್ವಹಿಸಲಿದ್ದಾರೆ ಎಂದು ಸ್ವತಃ ಊರ್ವಶಿನೇ ಹೇಳಿಕೊಂಡಿದ್ದರು.

 

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಊರ್ವಶಿ, ‘ನಿಮ್ಮ ವಿಷಯದಲ್ಲಿ ಬಾಲಿವುಡ್ ಸೋತಿದೆ. ಆದರೆ, ನೀವು ಹೆಮ್ಮೆ ಪಡುವಂತೆ ನಾವು ಮಾಡುತ್ತೇವೆ. ಹೊಸ ನಂಬಿಕೆಯೊಂದಿಗೆ’ ಎಂದು ಬರೆದುಕೊಂಡಿದ್ದರು. ಈ ಮೂಲಕ ಪರ್ವಿನ್ ಸಿನಿಮಾ ಮಾಡುವ ಕುರಿತು ವಿಷಯ ತಿಳಿಸಿದ್ದರು. ಸದ್ಯ ಈ ಮಾಹಿತಿ ಸುಳ್ಳು ಎಂದು ಹೇಳಲಾಗುತ್ತಿದೆ. ಇದೆಲ್ಲ ಊರ್ವಶಿ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎಂದು ಹೇಳಲಾಗುತ್ತಿದೆ.

Share This Article