ನೌಟಂಕಿ ಆಟವಾಡುವ ಕಾರಣಕ್ಕೆ ಹಲವರ ಕೆಂಗಣ್ಣಿಗೆ ಗುರಿಯಾಗೋದು ಊರ್ವಶಿ ರೌಟೇಲಾಗೆ (Urvashi Rautela) ಹೊಸದಲ್ಲ. ಇದೀಗ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಾಸ್ಕ್ ಧರಿಸಿರುವ ವೀಡಿಯೋವನ್ನ ಊರ್ವಶಿ ಪೋಸ್ಟ್ ಮಾಡಿ ವೀಕ್ಷಕರನ್ನ ಬೆಚ್ಚಿ ಬೀಳಿಸಿದ್ದಾರೆ. ಊರ್ವಶಿ ಕೈಬೆರಳಿಗೆ ಸಣ್ಣದೊಂದು ಗಾಯವಾಗಿದ್ದು ಅದಕ್ಕೆ ಈ ಪಾಟಿ ಟ್ರೀಟ್‌ಮೆಂಟ್ ಅಗತ್ಯವಿತ್ತೇ ಅನ್ನೋದೇ ನೆಟ್ಟಿಗರ ಪ್ರಶ್ನೆಯಾಗಿದೆ.
ಇನ್ಸ್ಟಾಗ್ರಾಂನಲ್ಲಿ ವೀಡಿಯೋ ಹಂಚಿಕೊಂಡಿರುವ ಐರಾವತಿ ಬೆಡಗಿ ಊರ್ವಶಿ ‘ನನಗಾಗಿ ಪ್ರಾರ್ಥಿಸಿ’ ಎಂಬ ಸಂದೇಶದೊಂದಿಗೆ ಗಾಯದ ವೀಡಿಯೋ ಜೊತೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವೀಡಿಯೋ ಹಂಚಿಕೊಂಡಿದ್ದಾರೆ. ಅಸಲಿಗೆ ಊರ್ವಶಿ ಹಂಚಿಕೊಂಡ ವೀಡಿಯೋವನ್ನೇ ನೋಡಿದರೆ ಅದೊಂದು ಸಾಮಾನ್ಯ ಗಾಯದಂತೆ ಕಾಣುತ್ತೆ. ಇಂಥಹ ಸಣ್ಣಪುಟ್ಟ ಗಾಯಕ್ಕೆ ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್ ಹಾಕೊಂಡು ಬರೋದೇ ದೊಡ್ಡದು. ಅಂಥದ್ರಲ್ಲಿ ಆಸ್ಪತ್ರೆಗೆ ದಾಖಲಾಗೋದ್ರ ಜೊತೆ ಆಕ್ಸಿಜನ್ ಮಾಸ್ಕ್ ಧರಿಸಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಏನಿತ್ತು ಅನ್ನೋದೇ ಯಕ್ಷಪ್ರಶ್ನೆ. ಹೀಗಾಗಿ ನೆಟ್ಟಿಗರು ಊರ್ವಶಿ ಆಟಕ್ಕೆ ಚೆನ್ನಾಗಿ ಕ್ಲಾಸ್ ತೆಗೆದುಕೊಳ್ತಿದ್ದಾರೆ. ಇದನ್ನೂ ಓದಿ:ಸಿನಿಮಾಗೆ ಬ್ರೇಕ್ ಕೊಟ್ಟು ಜಂಗಲ್‌ನಲ್ಲಿ ಪೂಜಾ ಹೆಗ್ಡೆ ಸುತ್ತಾಟ
View this post on Instagram
ನನಗಾಗಿ ಪ್ರಾರ್ಥಿಸಿ ಎಂದು ಕೇಳಿಕೊಂಡಿರುವ ಊರ್ವಶಿಗೆ ಓವರ್ ಆ್ಯಕ್ಟಿಂಗ್ ನಿಲ್ಲಿಸು ಎಂದು ಕಾಮೆಂಟ್ ಮಾಡಿದ್ದಾರೆ ನೆಟ್ಟಿಗರು. ಈ ಜಗತ್ತಿನಲ್ಲಿ ನಿಗಗೊಬ್ಬಳಿಗೇ ಇಂಥಹ ಗಂಭೀರ ಗಾಯವಾಗಿದ್ದು ಎಂದು ಇನ್ನೊಬ್ಬರು ಕಾಲೆಳೆದಿದ್ದಾರೆ. ಇನ್ನು ಅನೇಕರು ಇಂಥಹ ವೀಡಿಯೋ ಪೋಸ್ಟ್ ಮಾಡಿ ಏನು ಸಿಂಪತಿ ಗಿಟ್ಟಿಸಿಕೊಳ್ಳುವ ಕೆಲಸ ಮಾಡ್ಬೇಡ ಎಂದಿದ್ರೆ ಇನ್ನು ಕೆಲವರು ಹಣ ಇದೆ ಸೂಜಿ ಚುಚ್ಚಿದರೂ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗ್ತೀಯ ಬಿಡು ಎಂದಿದ್ದಾರೆ. ಒಟ್ನಲ್ಲಿ ಊರ್ವಶಿ ರೌಟೇಲಾ ಸದ್ಯ ಮಾಡ್ಕೊಂಡಿರೋ ಅವಾಂತರಕ್ಕೆ ಒಂದ್ವೇಳೆ ಗಂಭೀರ ಗಾಯವಾದ್ರೂ ಯಾರೂ ನಂಬುವುದಿಲ್ಲ.
ಕನ್ನಡದ ಐರಾವತ ಚಿತ್ರ ಸೇರಿದಂತೆ ಹಿಂದಿನ ‘ಸಿಂಗ್ ಸಾಬ್ ದಿ ಗ್ರೇಟ್’, ಸನಮ್ ರೇ ಹೇಟ್ ಸ್ಟೋರಿ ಚಿತ್ರಗಳಲ್ಲಿ ನಟಿಸಿದ್ದರು. ಹೇಳಿಕೊಳ್ಳುವಂಥಹ ಯಾವುದೇ ಹಿಟ್ ಸಿನಿಮಾ ಕೊಡದಿದ್ದರೂ `ಮಾಜಿ ಮಿಸ್ ದಿವಾ’ ಮಾಡೆಲಿಂಗ್ ಕ್ಷೇತ್ರದಲ್ಲೇ ಫೇಮಸ್. ವರ್ಷದಲ್ಲಿ ಹೆಚ್ಚು ಕಮ್ಮಿ ದುಬೈನಲ್ಲೇ ಇರುವ ಈ ಹಾಟ್ ಬ್ಯೂಟಿ ಕೈಗೆ ಅದ್ಹೇಗೆ ಏಟು ಮಾಡ್ಕೊಂಡ್ರೋ ಏನೋ ಆದರೆ ಯಾರೋಬ್ರೂ ಊರ್ವಶಿ ನಾಟಕವನ್ನ ನಂಬುತ್ತಿಲ್ಲ.