ನಿನ್ನೆಯಿಂದ ಗಾಂಧಿನಗರದಲ್ಲಿ ‘ಉರಿಗೌಡ (Urigowda)-ನಂಜೇಗೌಡ (Nanjegowda) ’ ಸಿನಿಮಾದ (Cinema) ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಸಚಿವ, ನಿರ್ಮಾಪಕ ಮುನಿರತ್ನ ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chamber) ಟೈಟಲ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ವಾಣಿಜ್ಯ ಮಂಡಳಿ ಕೂಡ ಅರ್ಜಿಗೆ ಮಾನ್ಯ ಮಾಡಿತ್ತು. ಈ ಪತ್ರವನ್ನಿಟ್ಟುಕೊಂಡು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು. ಸರಣೀಯ ಟ್ವೀಟ್ ಕೂಡ ಮಾಡಿದ್ದರು. ಇದೀಗ ಒಕ್ಕಲಿಗರ ಸಂಘ ಈ ವಿವಾದಕ್ಕೆ ಪ್ರವೇಶ ಮಾಡಿದೆ.
Advertisement
ಒಕ್ಕಲಿಗ ಯುವಬ್ರಿಗೆಡ್ ಹಾಗೂ ಒಕ್ಕಲಿಗ ಅನಿವಾಸಿ ಭಾರತೀಯ ಯುವಬ್ರಿಗೆಡ್ ಅಧ್ಯಕ್ಷ ನಂಜೇಗೌಡ ನಂಜುಂಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ಆ ಪತ್ರದಲ್ಲಿ ಸಿನಿಮಾ ಮಾಡದಂತೆ ಸಂಬಂಧಿಸಿದ ನಿರ್ಮಾಪಕರಿಗೆ ತಿಳಿಸುವಂತೆ ಹಾಗೂ ಟೈಟಲ್ ನೀಡದಂತೆ ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಸ್ತ್ ಆಗಿ ಕಂಗೊಳಿಸಿದ ರಾಗಿಣಿ
Advertisement
Advertisement
‘ಉರೀಗೌಡ, ನಂಜೇಗೌಡ ಎನ್ನುವ ಇಬ್ಬರೂ ವ್ಯಕ್ತಿಗಳ ಮೇಲೆ ಯಾವುದೇ ತರಹದ ಮಾಹಿತಿ ಸರ್ಕಾರದ ದಾಖಲೆಗಳಾಗಲಿ, ಇತಿಹಾಸದ ದಾಖಲೆಗಳಾಗಲಿ ಹಾಗೂ ಸ್ಥಳೀಯ ಆಡಳಿತದಲ್ಲಿ ಸಿಗುವ ಕರಡು ಪ್ರತಿಗಳಾಗಲಿ ಸಿಗುವುದಿಲ್ಲ. ಆದ್ದರಿಂದ ಪಟ್ಟಭದ್ರ ಹಿತಾಶಕ್ತಿಗಳು ಒಕ್ಕಲಿಗ ಸಮುದಾಯವನ್ನು ಅಪಮಾನ ಮಾಡಲು ಹಾಗೂ ಮುಸ್ಲಿಂ ಹಾಗೂ ಒಕ್ಕಲಿಗರ ನಡುವೆ ಧರ್ಮ ಸಂಘರ್ಷವನ್ನು ತಂದು, ತಮ್ಮ ರಾಜಕೀಯ ಹಿತಾಶಕ್ತಿಗೆ ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ತಾವುಗಳು ದಯಮಾಡಿ ಇದಕ್ಕೆ ಅವಕಾಶ ನೀಡದೇ, ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.
Advertisement
ಈಗಾಗಲೇ ಪತ್ರವು ಫಿಲ್ಮ್ ಚೇಂಬರ್ ಅಧ್ಯಕ್ಷರಿಗೆ ತಲುಪಿದ್ದು, ಕಾನೂನಾತ್ಮಕವಾಗಿ ತಡೆಯುವಂತಹ ಯಾವುದೇ ಹಕ್ಕು ಫಿಲ್ಮ್ ಚೇಂಬರ್ ಗೆ ಇಲ್ಲವಾದರೂ, ಈ ವಿಷಯದಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷರು ಯಾವ ರೀತಿಯಲ್ಲಿ ಕ್ರಮ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.