ಮಂಡ್ಯ: ರಾಜ್ಯದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡ (Urigowda and Nanjegowda) ಹೆಸರಿನಲ್ಲಿ ಫೈಟ್ ಹೆಚ್ಚಾಗಿದೆ. ಬಿಜೆಪಿಯವರು (BJP) ಉರಿಗೌಡ ಹಾಗೂ ದೊಡ್ಡನಂಜೇಗೌಡರು ಇದ್ದರು ಎಂಬ ವಾದ ಮಾಡಿದರೆ, ಕಾಂಗ್ರೆಸ್ (Congress) ನಾಯಕರು ಇದೊಂದು ಬಿಜೆಪಿ ಕಾಲ್ಪನಿಕ ಪಾತ್ರಗಳು ಎಂದು ವಾದ ಮಾಡುತ್ತಿದ್ದಾರೆ. ಇದೀಗ ಉರಿಗೌಡ ಹಾಗೂ ದೊಡ್ಡನಂಜೇಗೌಡರ ಬಗ್ಗೆ ಉಲ್ಲೇಖವಿರುವ ಪುಸ್ತಕ ಪತ್ತೆಯಾಗಿದ್ದು, ಈ ರಾಜಕೀಯ ವಾದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಡಾ. ದೇಜಗೌ ಸಂಪಾದಕತ್ವದಲ್ಲಿ 2006ರಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊರ ತಂದಿರುವ ಸುವರ್ಣ ಮಂಡ್ಯ (Suvarna Mandya) ಪುಸ್ತಕದಲ್ಲಿ ಉರಿಗೌಡ, ದೊಡ್ಡನಂಜೇಗೌಡರ ಬಗ್ಗೆ ಉಲ್ಲೇಖವಿದೆ. ಸುವರ್ಣ ಮಂಡ್ಯದಲ್ಲಿ ಹ.ಕ. ರಾಜೇಗೌಡರು ಬರೆದಿರುವ ಲೇಖನದಲ್ಲಿ ಇದು ಉಲ್ಲೇಖವಾಗಿದೆ. ಉರಿಗೌಡ ಹಾಗೂ ದೊಡ್ಡನಂಜೇಗೌಡ ಇಬ್ಬರ ಬಗ್ಗೆಯೂ ಇದರಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ : ಫಿಲ್ಮ್ ಚೇಂಬರ್ ಗೆ ಪತ್ರ ಬರೆದ ಒಕ್ಕಲಿಗರ ಸಂಘ
ಈ ಪುಸ್ತಕದಲ್ಲಿ, ಹೈದರಾಲಿ ಮತ್ತು ಟಿಪ್ಪು ಕಾಲದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡ ಅವರ ವಿರುದ್ಧ ಸೆಟೆದು ನಿಂತವರು. ಟಿಪ್ಪುವಿನ ಧಾರ್ಮಿಕ ಮತ್ತು ಭಾಷಾ ನೀತಿಯ ಕಾರಣದಿಂದ ಉರಿಗೌಡ ಹಾಗೂ ದೊಡ್ಡನಂಜೇಗೌಡರು ತಿರುಗಿಬಿದ್ದಿದ್ದರು. ಟಿಪ್ಪು ಆಡಳಿತದಲ್ಲಿ ಮುಸಲ್ಮಾನರನ್ನೇ ನೇಮಿಸಿದ್ದು, ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಣೆ ಮಾಡಿದ್ದರು. ಇದಕ್ಕಾಗಿ ಮಂಡ್ಯ ಪ್ರದೇಶದ ಗೌಡರು ಟಿಪ್ಪುವಿನ ವಿರುದ್ಧ ತಿರುಗಿ ಬಿದ್ದಿದ್ದರು.
ಟಿಪ್ಪುವಿನ ಪತನದ ನಂತರ ಇದೇ ಗೌಡರು ಬ್ರಿಟಿಷರ ವಿರುದ್ಧವೂ ಕೆಲಸ ಮಾಡಿದ್ದಾರೆ. ಮಂಡ್ಯ ನೆಲದ ಜನ ಹೊರಗಿನ ಅಧಿಕಾರವನ್ನು ಸಹಿಸುವುದಿಲ್ಲ ಎಂಬುದು ಕಂಡುಬರುತ್ತದೆ ಎಂಬ ರೀತಿಯಲ್ಲಿ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಕೋಲಾರ ಬೇಡ, ವರುಣಾದಿಂದ್ಲೇ ಸ್ಪರ್ಧಿಸಿ- ಸಿದ್ದರಾಮಯ್ಯಗೆ ಖರ್ಗೆ, ರಾಹುಲ್ ಗಾಂಧಿ ಸಲಹೆ