ದುಬೈ: ಟಿ20 ವಿಶ್ವಕಪ್‍ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ಬಳಿಕ ಪಾಕಿಸ್ತಾನ ತಂಡದ ವೇಗಿ ಶಾಹೀನ್ ಶಾ ಆಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಕಂಡಿತ್ತು. ಈ ಸೋಲಿನಲ್ಲಿ ಆಫ್ರಿದಿ ಪ್ರಮುಖ ಪಾತ್ರವಹಿಸಿದ್ದರು. ಭಾರತ ಪ್ರಮುಖ ಮೂರು ಆಟಗಾರರಾದ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದು ಮಿಂಚಿದ್ದರು. ನಂತರ ಸ್ಕಾಟ್ಲೆಂಡ್ ವಿರುದ್ಧ ಪಂದ್ಯದಲ್ಲಿ ಅಭಿಮಾನಿಗಳು ರೋಹಿತ್ ಶರ್ಮಾ, ಕೆಎಲ್ ರಾಹುಲ್, ಕೊಹ್ಲಿ ಎಂದು ಕೂಗಿದಾಗ ಶಾಹಿನ್ ಅಫ್ರಿದಿ ಈ ಮೂವರು ಆಟಗಾರರು ಔಟ್ ಆದ ಸನ್ನಿವೇಶವನ್ನು ಕೈ ಸನ್ನೆಯ ಮೂಲಕ ಮಾಡಿ ತೋರಿಸಿ ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ವೇಡ್ ಹ್ಯಾಟ್ರಿಕ್ ಸಿಕ್ಸರ್ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್ ಮನೆಗೆ
https://twitter.com/Azzy_sh/status/1458879896856502273
ಇದೀಗ ಇದಕ್ಕೆ ತಿರುಗೇಟು ಎಂಬಂತೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ ಆಫ್ರಿದಿ ಬೌಲಿಂಗ್‍ನಲ್ಲಿ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು. ಇದನ್ನೂ ಓದಿ: ಪಂದ್ಯ ಗೆದ್ದರೂ ಸಂಭ್ರಮಿಸದ ನೀಶಮ್ ಫೋಟೋ ವೈರಲ್
https://twitter.com/kailashsk123/status/1458881989965082646
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಾಣುತ್ತಿದ್ದಂತೆ ಆಫ್ರಿದಿ ಟೀಂ ಇಂಡಿಯಾ ಆಟಗಾರರ ಬಗ್ಗೆ ಅಣಕಿಸಿದ ಕೈ ಸನ್ನೆ ಮತ್ತು ಮ್ಯಾಥ್ಯೂ ವೇಡ್ ಸಿಕ್ಸ್ ನ ವಿವಿಧ ಭಂಗಿಯನ್ನು ಹಾಕಿ ನೆಟ್ಟಿಗರು ಆಫ್ರಿದಿಯ ಚಳಿ ಬಿಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಫ್ರಿದಿ ಇದೀಗ ಫುಲ್ ಟ್ರೆಂಡಿಂಗ್ ಆಗಿದ್ದಾರೆ. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ