ದುಬೈ: ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್‍ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೂ ನ್ಯೂಜಿಲೆಂಡ್ ಆಲ್ ರೌಂಡರ್ ಜೇಮ್ಸ್ ನೀಶಮ್ ಸಂಭ್ರಮಿಸದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
No reaction Neesham. pic.twitter.com/uiDFNQu4Ab
— Johns. (@CricCrazyJohns) November 10, 2021
Advertisement
ಬುಧವಾರ ನಡೆದ ಪಂದ್ಯದಲ್ಲಿ ಡ್ಯಾರೆಲ್ ಮಿಚೆಲ್ ಹಾಗೂ ನೀಶಮ್ ಸಾಹಸದಿಂದ ಕಿವೀಸ್ ಅಮೋಘ ಜಯ ಸಾಧಿಸಿತ್ತು. ಆದರೆ ಪಂದ್ಯದ ಬಳಿಕ ಉಳಿದೆಲ್ಲಾ ಆಟಗಾರರು ಸಂಭ್ರಮಿಸುತ್ತಿದ್ದರೂ ನೀಶಮ್ ಮಾತ್ರ ಬೇಸರದಿಂದ ಕುಳಿತಿರುವ ಫೋಟೋ ವೈರಲ್ ಆಗಿತ್ತು. ದನ್ನೂ ಓದಿ: ವೇಡ್ ಹ್ಯಾಟ್ರಿಕ್ ಸಿಕ್ಸರ್ – ಆಸ್ಟ್ರೇಲಿಯಾ ಫೈನಲಿಗೆ, ಪಾಕ್ ಮನೆಗೆ
Advertisement
Job finished? I don’t think so. https://t.co/uBCLLUuf6B
— Jimmy Neesham (@JimmyNeesh) November 10, 2021
Advertisement
ಬಳಿಕ ಈ ಬ್ಗಗೆ ಬಾಸ್ಕೆಟ್‍ಬಾಲ್ ದಿಗ್ಗಜ ಕೋಬ್ ಬ್ರ್ಯಾಂಟ್ ಹೇಳಿಕೆಯ ರೀತಿಯಲ್ಲೇ ಟ್ವೀಟ್ ಮಾಡಿದ ನೀಶಮ್, ಕೆಲಸ ಮುಗಿಯಿತೇ? ನಾನು ಹಾಗೆ ಭಾವಿಸುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. 2009ರಲ್ಲಿ ಎನ್‍ಬಿಎ ಫೈನಲ್‍ನಲ್ಲಿ 2-0ನಲ್ಲಿ ಗೆದ್ದರೂ ಕೋಬನ್ ಸಂಭ್ರಮಿಸದೆ, ಕೆಲಸ ಇನ್ನೂ ಮುಗಿದಿಲ್ಲ ಎಂದಿದ್ದರು. ಇದನ್ನೂ ಓದಿ: ಐಪಿಎಲ್ ಬಿಡ್ಡಿಂಗ್‍ನಲ್ಲಿ ಈ ಇಬ್ಬರಿಗೆ ಭಾರೀ ಬೇಡಿಕೆ