BollywoodCinemaDistrictsKarnatakaLatestMain Post

ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು

ದಿನಕ್ಕೊಂದು ವೇಷ ಬದಲಿಸಿಕೊಂಡು ನೆಟ್ಟಿಗರ ಟ್ರೋಲ್ ಗೆ ಗುರಿಯಾಗುವ ಬಾಲಿವುಡ್ ನ ತಾರೆ ಉರ್ಫಿ ಜಾವೇದ್, ಈವರೆಗೂ ತುಂಡುಡುಗೆಯಾದರೂ ತೊಡುತ್ತಿದ್ದರು. ಈಗ ಇನ್ನೂ ಅದ್ವಾನ್ ಡ್ರೆಸ್ ಮಾಡಿಕೊಂಡಿದ್ದಾರೆ. ಒಳ ಉಡುಪುಗಳು ಕಾಣುವಂತೆ ಪ್ಲಾಸ್ಟಿಕ್ ಕವರ್ ನಿಂದ ಡಿಸೈನ್ ಮಾಡಿದ ಕಾಸ್ಟ್ಯೂಮ್ ಹಾಕಿಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

ಪ್ರತಿಷ್ಠಿತ ಹೋಟೆಲ್ ವೊಂದರ ಸಮಾರಂಭಕ್ಕೆ ಹೋಗಿರುವ ಉರ್ಫಿ ಕೇವಲ ಪ್ಲಾಸ್ಟಿಕ್ ಕವರ್ ನಿಂದ ತಯಾರಿಸಿದ ಕಾಸ್ಟ್ಯೂಮ್ ಧರಿಸಿ ಬಂದಿದ್ದಾರೆ. ಹೀಗಾಗಿ ನೆಟ್ಟಿಗರು ಉರ್ಫಿಗೆ ಡಿಸೈನ್ ಮಾಡುವ ಕಾಸ್ಟ್ಯೂಮ್ ಡಿಸೈನರ್ ಅನ್ನು ಹುಡುಕುತ್ತಿದ್ದಾರೆ. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

 

View this post on Instagram

 

A post shared by Urrfii (@urf7i)

ದಿನಕ್ಕೊಂದು ಕಾಸ್ಟ್ಯೂಮ್ ಹಾಕಿಕೊಳ್ಳುವುದು ಉರ್ಫಿ ಅವರ ಹವ್ಯಾಸಗಳಲ್ಲಿ ಒಂದು. ಈವರೆಗೂ ಅವರು ಕೇವಲ ಒಳ ಉಡುಪು ಕಾಣುವಂತಹ ಬಟ್ಟೆಗಳನ್ನು ಧರಿಸಿರಲಿಲ್ಲ. ಈ ಬಾರಿ ಅದನ್ನೂ ಮಾಡಿದ್ದಾರೆ. ಹಾಗಾಗಿ ಉರ್ಫಿಯ ಮುಂದಿನ ಕಾಸ್ಟ್ಯೂಮ್ ಯಾವುದರಿಂದ ತಯಾರಾಗುತ್ತದೆ ಎಂಬ ಕುತೂಹಲವನ್ನು ಮೂಡಿಸಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

ಬಾಲಿವುಡ್ ಅಂಗಳದಲ್ಲಿ ಖಡಕ್ ನಟಿ ಎಂದೇ ಖ್ಯಾತಿಯಾದವರು ಉರ್ಫಿ. ತಮಗೆ ಅನಿಸಿದ್ದನ್ನು ಯಾವುದೇ ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ. ಹಾಗೆಯೇ ಉತ್ತರವನ್ನೂ ಕೊಡುತ್ತಾರೆ. ಕಾಸ್ಟ್ಯೂಮ್ ವಿಷಯದಲ್ಲಂತೂ ಖುಲ್ಲಾಂಖುಲ್ಲ ಹೀಗಾಗಿ ಉರ್ಫಿ ಸದ್ಯ ಬಾಲಿವುಡ್ ನ ಸದ್ಯದ ಹಾಟ್ ಟಾಪಿಕ್.

Leave a Reply

Your email address will not be published.

Back to top button