ಹಿಂದಿ ಬಿಗ್ ಬಾಸ್ ಸ್ಪರ್ಧಿ (Bigg Boss Hindi) ಉರ್ಫಿ ಜಾವೇದ್ (Urfi Javed) ಅವರು ವಿಚಿತ್ರ ಬಟ್ಟೆಗಳನ್ನ ಧರಿಸೋದ್ರಲ್ಲಿ ಯಾವಾಗಲೂ ಮುಂದು. ಇದೀಗ ಬಿದಿರಿನ ಉಡುಪಿನಲ್ಲಿ ಉರ್ಫಿ ಕಾಣಿಸಿಕೊಂಡಿದ್ದು, ಮತ್ತೆ ಟ್ರೋಲಿಗರ ಕೆಂಗಣ್ಣಿಗೆ ನಟಿ ಗುರಿಯಾಗಿದ್ದಾರೆ.
Advertisement
ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಕ್ವೀನ್ ಉರ್ಫಿ ಜಾವೇದ್ (Urfi Javed) ಅಂದಾಕ್ಷಣ ಥಟ್ ಅಂತಾ ನೆನಪಾಗೋದೇ ಅವರು ಧರಿಸುವ ವಿಭಿನ್ನ ಬಟ್ಟೆಗಳು. ಹೀಗಿರುವಾಗ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿದಿರಿನ ದಿರಿಸಿನಲ್ಲಿ ಉರ್ಫಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಈ ಲುಕ್ ಇದೀಗ ಟ್ರೋಲಿಗರ ಬಾಯಿಗೆ ಆಹಾರವಾಗಿದೆ. ಬಿದಿರಿನ ಉಡುಪಿನ ವೀಡಿಯೋವನ್ನ ನಟಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಕಪ್ಪು ಬಣ್ಣದ ಮಾಡ್ರನ್ ಸೀರೆಯಲ್ಲಿ ಕಂಗೊಳಿಸಿದ ರಶ್ಮಿಕಾ ಮಂದಣ್ಣ
Advertisement
View this post on Instagram
Advertisement
ಈ ಉಡುಪನ್ನು ಬಿದಿರಿನಿಂದ ತಯಾರಿಸಿದ್ದೇನೆ. ಈ ಕಲೆ ನಶಿಸಿ ಹೋಗುತ್ತಿದೆ. ಈ ರೀತಿ ಬಿದಿರಿನ ಪಾತ್ರೆಗಳು, ಕುರ್ಚಿಗಳು, ಟೇಬಲ್ಗಳು, ಕುಶಲಕರ್ಮಿಗಳು ತಯಾರಿಸುವಾಗ ನನಗೆ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ ಎಂದು ತಮ್ಮ ವೀಡಿಯೋಗೆ ಅಡಿಬರಹ ನೀಡಿದ್ದಾರೆ.
Advertisement
ನಟಿ ಈ ವೀಡಿಯೋ ಶೇರ್ ಮಾಡ್ತಿದ್ದಂತೆ ಇದೊಂದು ನೋಡಲು ಬಕಿ ಇತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ (Troll) ಮಾಡಿದ್ದಾರೆ.