ದಿನಕ್ಕೊಂದು ಕಾಸ್ಟ್ಯೂಮ್ ಧರಿಸಿ, ಪಡ್ಡೆಗಳ ಮೈಬಿಸಿ ಹೆಚ್ಚಿಸುವ ರಿಯಾಲಿಟಿ ಶೋ ತಾರೆ ಉರ್ಫಿ ಜಾವೇದ್ ನಿಧನ ಹೊಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಹರಿಬಿಡಲಾಗಿತ್ತು. ಸದಾ ಲವಲವಿಕೆಯಿಂದ ಇರುವ ಈ ವಿವಾದಿತ ತಾರೆಗೆ ಏನಾಯಿತು ಎಂದು ಅಭಿಮಾನಿಗಳು ಆತಂಕಗೊಂಡಿದ್ದರು. ಸಾಯುವಂಥದ್ದು ಉರ್ಫಿಗೆ ಏನಾಗಿತ್ತು ಎಂದು ಗೂಗಲ್ ನಲ್ಲಿ ಹುಡುಕಾಡಿದ್ದಾರೆ.
ಉರ್ಫಿ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸ್ವತಂ ಉರ್ಫಿಗೆ ಗೊತ್ತಾಗಿ ಕೆಂಡಾಮಂಡಲವಾಗಿದ್ದಾರೆ. ಇಂತಹ ಸುದ್ದಿಯನ್ನು ಹರಿಬಿಟ್ಟವರ ವಿರುದ್ಧ ಸಮರವೇ ಸಾರಿದ್ದು, ಅವರನ್ನು ಹುಡುಕುತ್ತಿರುವುದಾಗಿ ಮತ್ತು ಅವರ ವಿರುದ್ಧ ಕಾನೂನು ಕ್ರಮವನ್ನೂ ತಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೇ, ನನಗೇನೂ ಆಗಿಲ್ಲ ನಾನು ಆರಾಮಾಗಿ ಇದ್ದೇನೆ. ಅಭಿಮಾನಿಗಳು ಆತಂಕ ಪಡುವಂಥದ್ದು ಏನೂ ಆಗಿಲ್ಲ ಎಂದು ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್
ಉರ್ಫಿ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ದಿನಕ್ಕೊಂದು ಕಾಸ್ಟ್ಯೂಮ್ ಧರಿಸಿಕೊಂಡು ಮನರಂಜನೆ ನೀಡುತ್ತಿದ್ದಾರೆ. ಸ್ಟಾರ್ ನಟರಿಗಿಂತಲೂ ಇವರಿಗೆ ಫಾಲೋವರ್ಸ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿದ್ದಾರೆ. ಈ ಸಂಭ್ರಮವನ್ನು ತಾಳಲಾರದ ಜನರು ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ದಾರಂತೆ.