ಅಶ್ಲೀಲವಾಗಿ ಕಾಸ್ಟ್ಯೂಮ್ ಹಾಕಿಕೊಂಡು ರಸ್ತೆಗಿಳಿಯುವ ನಟಿ ಉರ್ಫಿ ಜಾವೇದ್ (Urfi Javed) ವಿರುದ್ಧ ಮೊನ್ನೆಯಷ್ಟೇ ಮುಂಬೈನಲ್ಲಿ ದೂರು ದಾಖಲಾಗಿತ್ತು. ಈ ದೂರು ದಾಖಲಾಗುತ್ತಿದ್ದಂತೆಯೇ ಗೌರಮ್ಮನ ರೀತಿಯಲ್ಲಿ ಬಟ್ಟೆ ಹಾಕುತ್ತಿದ್ದ ಈ ನಟಿ, ನಂತರ ಮತ್ತೆ ತಮ್ಮ ಹಳೆ ಚಾಳಿಯನ್ನೇ ಮುಂದುವರೆಸಿದರು. ತುಂಡುಡುಗೆ ತೊಟ್ಟು ಖಾಸಗಿ ಅಂಗಾಂಗ ಕಾಣಿಸುವಂತೆ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವುದನ್ನು ಮುಂದುವರೆಸಿದ್ದಾರೆ. ಹಾಗಾಗಿ ಈ ನಟಿಯ ಮೇಲೆ ಮತ್ತೊಂದು ದೂರು (Complainant) ದಾಖಲಾಗಿದೆ.
ಬಿಜೆಪಿ ಸದಸ್ಯೆ ಚಿತ್ರಾ ವಾಘ್ (Chitra Wagh) ಎನ್ನುವವರು ಉರ್ಫಿ ವಿರುದ್ಧ ದೂರು ನೀಡಿದ್ದು, ಉರ್ಫಿ ಮೇಲೆ ಸೂಕ್ತ ರೀತಿಯಲ್ಲಿ ಕ್ರಮ ತಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಕೇಸ್ ದಾಖಲಾಗುತ್ತಿದ್ದಂತೆ ದೂರು ಕೊಟ್ಟವರ ವಿರುದ್ಧವೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಉರ್ಫಿ, ದೂರು ಕೊಟ್ಟವರ ಮೇಲೆ ಕಿಡಿಕಾರಿದ್ದಾರೆ. ಜೊತೆಗೆ ತನ್ನ ಜೈಲಿಗೆ ಕಳುಹಿಸುವಂತ ಕಾಯ್ದೆ ಇನ್ನೂ ರೂಪಗೊಂಡಿಲ್ಲ ಎಂದು ಮಾತನಾಡಿದ್ದಾರೆ.
ದೂರು ಕೊಟ್ಟವರ ಕುರಿತು ಅವರು ಬರೆದುಕೊಂಡಿದ್ದು, ಬೆತ್ತಲೆ ಮತ್ತು ಅಶ್ಲೀಲತೆಯ ಪಾಠವನ್ನೂ ಮಾಡಿದ್ದಾರೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿ ಇರುತ್ತದೆ ಎಂದು ಸಲಹೆ ನೀಡಿದ್ದಾರೆ. ಬೆತ್ತಲೆ ಮತ್ತು ಅಶ್ಲೀಲತೆಯ ಬಗ್ಗೆ ತಿಳಿದುಕೊಳ್ಳದೇ ಇರುವವರು ನನ್ನ ವಿರುದ್ಧ ದೂರು ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಶ್ಲೀಲ ಎನ್ನುವಂತಹ ಬಟ್ಟೆಯನ್ನು ನಾನು ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನಿ ಜೊತೆ ಡುಯೆಟ್ ಹಾಡಲು ರೆಡಿಯಾದ್ರು `ಸೀತಾರಾಮಂ’ ನಟಿ
ಇತ್ತೀಚೆಗಷ್ಟೇ ದುಬೈನಲ್ಲಿ ಉರ್ಫಿ ಇಂಥದ್ದೇ ಕಾರಣಕ್ಕೆ ಪೊಲೀಸರ (Police) ವಶದಲ್ಲಿದ್ದರು. ಸಾರ್ವಜನಿಕವಾಗಿ ಅವರು ಅರೆಬೆತ್ತಲೇ ಕಾಸ್ಟ್ಯೂಮ್ ನಲ್ಲಿ ವಿಡಿಯೋ ಶೂಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೇಸು ದಾಖಲಿಸದೇ ಬುದ್ದಿವಾದ ಹೇಳಿ ಕಳುಹಿಸಿದ್ದರು. ಭಾರತದಲ್ಲೂ ಈವರೆಗೂ ಉರ್ಫಿ ಮೇಲೆ ಆರು ದೂರುಗಳು ದಾಖಲಾಗಿವೆ.