ಇತ್ತೀಚಿನ ದಿನಗಳಲ್ಲಿ ಬಾಲಿವುಡ್ (Kangana Ranaut) ನಟ ನಟಿಯರ ಮೇಲೆ ಉರ್ಫಿ (Urfi Javed) ಆರೋಪ ಮಾಡುವುದು ಹೆಚ್ಚಾಗಿದೆ. ಮೊನ್ನೆಯಷ್ಟೇ ರಣಬೀರ್ ಕಪೂರ್ ಮೇಲೆ ಆರೋಪಗಳ ಸುರಿಮಳೆಗೈದಿದ್ದ ಉರ್ಫಿ ಇಂದು ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಮೇಲೆ ಹರಿಹಾಯ್ದಿದ್ದಾರೆ. ಇದೇ ಸಮಯದಲ್ಲೇ ಕಂಗನಾ ರಣಾವತ್ (Kangana Ranaut) ಅವರನ್ನು ಹೊಗಳಿದ್ದಾರೆ.
ಕಾರ್ಯಕ್ರಮವೊಂದಕ್ಕೆ ಉರ್ಫಿ ಅತಿಥಿಯಾಗಿ ಹೋಗಬೇಕಿತ್ತಂತೆ. ಮಾಧುರಿ ಕಾರಣದಿಂದಾಗಿ ಹೋಗಲು ಆಗಲಿಲ್ಲವಂತೆ. ತಮಗೆ ಇದರಿಂದಾಗಿ ಅವಮಾನ ಆಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ಬಗ್ಗೆ ಕಂಗನಾ ಆಗಾಗ್ಗೆ ಉರಿದು ಬೀಳುತ್ತಾರೆ. ಅವರು ಯಾಕೆ ಹಾಗೆ ಮಾಡುತ್ತಾರೆ ಎಂದು ನನಗೆ ಬೇಸರ ಅನಿಸುತ್ತಿತ್ತು. ಈಗೀಗ ನನಗೆ ಅರ್ಥವಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಸಹನಾ ಶೆಟ್ಟಿ
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಉರ್ಫಿ, ‘ಕಾರ್ಯಕ್ರಮವೊಂದರ ಆಯೋಜಕರು ನನಗೆ ಕರೆ ಮಾಡಿ, ಅತಿಥಿಯಾಗಿ ಬರಬೇಕು ಎಂದು ಹೇಳಿದ್ದರು. ನಾನು ಕೂಡ ಒಪ್ಪಿಕೊಂಡಿದ್ದೆ. ನಿಗದಿ ಕೆಲಸಗಳನ್ನು ಮುಂದಕ್ಕೆ ಹಾಕಿ ರೆಡಿಯಾದೆ. ಕಾರ್ಯಕ್ರಮದ ದಿನ ಆಯೋಜಕರು ಕರೆ ಮಾಡಿ, ನಿಮಗೆ ಆಹ್ವಾನವಿಲ್ಲ ಅಂದರು. ಕಾರಣ ಕೇಳಿದೆ. ಮಾಧುರಿ ಅವರ ಅತಿಥಿ ಲಿಸ್ಟ್ ನಲ್ಲಿ ನೀವು ಇಲ್ಲ ಅಂದರು’ ಎಂದು ಬರೆದುಕೊಂಡಿದ್ದಾರೆ.
ಮಾಧುರಿಗಿಂತ ನನಗೆ ಕಂಗನಾ ಗ್ರೇಟ್ ಅನಿಸುತ್ತಾರೆ. ಇಂತಹ ಅವಮಾನಗಳ ವಿರುದ‍್ಧ ಕಂಗನಾ ಧ್ವನಿ ಎತ್ತುತ್ತಲೇ ಇರುತ್ತಾರೆ. ಅವರು ಯಾಕೆ ಧ್ವನಿ ಎತ್ತುತ್ತಾರೆ ಎನ್ನುವುದು ಸ್ವಲ್ಪ ಸ್ವಲ್ಪ ನನಗೆ ಅರ್ಥವಾಗುತ್ತಿದೆ. ಕಂಗನಾ ಕಷ್ಟದ ಹಾದಿಯಲ್ಲಿ ಸಾಗಿ ಬಂದು ಸ್ಟಾರ್ ಆಗಿದ್ದಾರೆ ಎಂದು ಉರ್ಫಿ ಜಾವೇದ್ ಹೊಗಳಿದ್ದಾರೆ.