ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರ ವಿಚಿತ್ರ ಡ್ರೆಸ್ ತೊಡುವುದರಲ್ಲಿ ಫೇಮಸ್ ಆಗಿರುವ ಉರ್ಫಿ ಇದೀಗ ಮತ್ತೆ ವಿಚಿತ್ರ ಬಟ್ಟೆ ತೊಟ್ಟು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
View this post on Instagram
ಬಿಗ್ ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಉರ್ಫಿ ಜಾವೇದ್ ನಂತರ ವಿಭಿನ್ನ ಡ್ರೆಸ್ ತೊಡುವ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ವಿಚಿತ್ರ ಡ್ರೆಸ್ ಧರಿಸುವ ಮೂಲಕವೇ ಮತ್ತಷ್ಟು ಫೇಮಸ್ ಆಗಿರುವ ನಟಿ ಈಗ ಐದು ಭಿನ್ನ ಹೂಗಳಿರುವ ಟ್ರಾನ್ಸ್ಪರೆಂಟ್ ಡ್ರೆಸ್ ಧರಿಸಿ, ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಮನೆ ಮುಂದೆ ಅಭಿಮಾನಿಗಳ ಮಹಾಸಾಗರ: ಹ್ಯಾಪಿ ಬರ್ತ್ ಡೇ ಕಿಚ್ಚ
View this post on Instagram
ಬಿಳಿ, ಕೆಂಪು, ನೀಲಿ, ಹಳದಿ ಮತ್ತು ಪಿಂಕ್ ಕಲರ್ ಹೂವಿನಲ್ಲಿ ಡಿಸೈನ್ ಮಾಡಿರುವ ಟ್ರಾನ್ಸ್ಪರೆಂಟ್ ಡ್ರೆಸ್ ಧರಿಸಿರುವ ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಶೇರ್ ಮಾಡಿರುವ ವೀಡಿಯೋ ಕೆಲವೇ ಗಂಟೆಗಳಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ.
View this post on Instagram
ಉರ್ಫಿ ಹೊಸ ಅವತಾರ ನೋಡಿ, ಫ್ಯಾನ್ಸ್ ಅಚ್ಚರಿಪಟ್ಟಿದ್ದಾರೆ. ಮತ್ತೆ ವಿಚಿತ್ರ ಡ್ರೆಸ್‌ನಿಂದ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.