ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ತುಂಡು ಬಟ್ಟೆ ತೊಟ್ಟು ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡುವ ನಟಿ ಉರ್ಫಿ ಈಗ ಮತ್ತೆ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೊಳ್ಳೆ ಪರದೆಯ ಬಟ್ಟೆ ತೊಟ್ಟು ಮತ್ತೆ ನೆಟ್ಟಿಗರ ಕಂಗಣ್ಣಿಗೆ ಗುರಿಯಾಗಿದ್ದಾರೆ.
View this post on Instagram
Advertisement
ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಉರ್ಫಿ ಜಾವೇದ್ ಸದಾ ವಿಚಿತ್ರವಾಗಿ ಡ್ರೆಸ್ ಧರಿಸಿ ಟ್ರೋಲ್ ಆಗುವ ಈ ನಟಿಗೆ ಪಡ್ಡೆಹುಡುಗರ ಅಭಿಮಾನಿಗಳ ದಂಡೇ ಇದೆ. ಈಗ ಸೊಳ್ಳೆಪರದೆ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹೊಸ ಅವತಾರ ನೋಡಿರುವ ನೆಟ್ಟಿಗರು ಉರ್ಫಿ ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು ಓದಿ:ಜನಸಂಖ್ಯೆ ನಿಯಂತ್ರಣಕ್ಕೆ ನಟಿ ಪೂನಂ ಪಾಂಡೆ ಕೊಟ್ಟ ಐಡ್ಯಾ ಏನು?
Advertisement
View this post on Instagram
Advertisement
ಸೊಳ್ಳೆ ಪರದೆಯ ಡ್ರೆಸ್ ಫೋಟೋಶೂಟ್ ನೋಡಿ, ನೆಟ್ಟಿಗರು ಕಕ್ಕಾಬಿಕ್ಕಿಯಾಗಿದ್ದಾರೆ. ಮಾನ ಮುಚ್ಚುವಷ್ಟು ಬಟ್ಟೆ ಹಾಕಮ್ಮ ಅಂತಾ ನೆಟ್ಟಿಗರು ಉರ್ಫಿ ಮೇಲೆ ಗರಂ ಆಗಿದ್ದಾರೆ. ದಿನದಿಂದ ದಿನಕ್ಕೆ ಉರ್ಫಿ ವಿಚಿತ್ರ ಅವತಾರ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಆದರೆ ಯಾರೇ ಏನೇ ಹೇಳಿದ್ದರು. ನಾನು ಇರೋದೇ ಹೀಗೆ ಅಂತಾ ಬಿಂದಾಸ್ ಆಗಿ ಫೋಟೋಶೂಟ್ ಮಾಡಿಸಿ, ತಮ್ಮ ಮಾದಕ ಲುಕ್‌ನಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.