BollywoodCinemaLatestMain Post

ಜನಸಂಖ್ಯೆ ನಿಯಂತ್ರಣಕ್ಕೆ ನಟಿ ಪೂನಂ ಪಾಂಡೆ ಕೊಟ್ಟ ಐಡ್ಯಾ ಏನು?

Advertisements

ವಿವಾದಿತ ತಾರೆ, ಬಾಲಿವುಡ್ ನ ಪೂನಂ ಪಾಂಡೆ ಹಸಿಬಿಸಿ ದೃಶ್ಯಗಳ ಜೊತೆಗೆ ಬಿಸಿಬಿಸಿ ಮಾತುಗಳಿಂದಾಗಿಯೇ ಫೇಮಸ್. ಸದಾ ವಿವಾದಿತ ಮಾತುಗಳಿಂದಲೇ ಸದ್ದು ಮಾಡುವ ಈ ನಟಿ ಇದೀಗ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಅವರ ಮಾತನ್ನು ಯಾರು, ಎಷ್ಟು ಸೀರಿಯಸ್ ಆಗಿ ತಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಆಡಿದ ಮಾತುಗಳು ಮಾತು ಸಖತ್ ಟ್ರೋಲ್ ಆಗುತ್ತಿವೆ.

ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ. ಅಲ್ಲಿದ್ದ ಜನಸಂಖ್ಯೆ ನಿಯಂತ್ರಣದ ಜಾಹೀರಾತು ಕಂಡಿದ್ದಾರೆ. ಅಲ್ಲದೇ, ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಎಷ್ಟೊಂದು ಕಷ್ಟ ಪಡುತ್ತಿದೆ ಎನ್ನುವುದನ್ನು ಅರಿತಿದ್ದಾರೆ. ಹಾಗಾಗಿ ಅದಕ್ಕೆ ತಮ್ಮ ಬಿಟ್ಟಿ ಸಲಹೆಯನ್ನೂ ನೀಡಿರುವ ಅವರು, ಜನಸಂಖ್ಯೆ ನಿಯಂತ್ರಣಕ್ಕೆ ಅತ್ಯುತ್ತಮ ಪರಿಹಾರ ಎಂದರೆ ಮಕ್ಕಳನ್ನು ಮಾಡಿಕೊಳ್ಳದೇ ಇರುವುದು ಎಂದು ಹೇಳಿದ್ದಾರೆ. ಮಕ್ಕಳನ್ನು ಮಾಡಿಕೊಳ್ಳದೇ ಬದುಕನ್ನು ಎಂಜಾಯ್ ಮಾಡಿ ಅಂದಿದ್ದಾರೆ. ಇದನ್ನೂ ಓದಿ:ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

ಪೂನಂ ಪಾಂಡೆ ಮಾತಿಗೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದರೆ, ಇನ್ನೂ ಕೆಲವರು ಗರಂ ಆಗಿದ್ದಾರೆ. ಇಂತಹ ಮಾತುಗಳನ್ನು ಹೇಳುವವರು ಎಷ್ಟರ ಮಟ್ಟಿಗೆ ಅದನ್ನು ಪಾಲಿಸುತ್ತಾರೆ ಎಂದು ಕೆಲವರು ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ಒಳ್ಳೆಯ ಸಲಹೆ ನೀಡಿದ್ದೀರಿ. ಆದರೆ, ಮಕ್ಕಳನ್ನು ಕಡಿಮೆ ಮಾಡಿಕೊಳ್ಳಿ ಎಂದು ಹೇಳಬೇಕಿತ್ತು ಎಂದೂ ಕಾಮೆಂಟ್ ಮಾಡಿದ್ದಾರೆ. ಏನೇ ಇರಲಿ, ಜನಸಂಖ್ಯೆ ನಿಯಂತ್ರಣಕ್ಕಾಗಿ ಏನೆಲ್ಲ ಹರಸಾಹಸಗಳನ್ನು ಸರಕಾರ ಮಾಡುತ್ತಲೇ ಇರುವುದು ಸುಳ್ಳಲ್ಲ.

Live Tv

Leave a Reply

Your email address will not be published.

Back to top button