ಓಟಿಟಿ ಬಿಗ್ ಬಾಸ್ (Bigg Boss) ಮೂಲಕ ಸದ್ದು ಮಾಡಿದ್ದ ನಟಿ ಉರ್ಫಿ ಜಾವೇದ್, ಚಿತ್ರ ವಿಚಿತ್ರ ಬಟ್ಟೆಗಳನ್ನ ತೊಡುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದೆಷ್ಟೋ ಬಾರಿ ಟ್ರೋಲ್ ಆದರು. ಡೊಂಟ್ ಕೇರ್ ಎನ್ನದೇ ತುಂಡು ಬಟ್ಟೆ ತೊಟ್ಟು ಫೋಟೋಶೂಟ್ ಮಾಡಿಸುತ್ತಾರೆ. ಈಗ ಅವರ ಸೋಷಿಯಲ್ ಮೀಡಿಯಾ ಸ್ಟಾರ್ ಹಿಂದುಸ್ತಾನಿ ಭಾವು(Hindustani Bhau) ಕಿರಿಕ್ ಮಾಡಿದ್ದಾರೆ.
ಯೂಟ್ಯೂಬರ್, ಕಂಟೆಂಟ್ ಕ್ರಿಯೆಟರ್ ಆಗಿರುವ ಹಿಂದುಸ್ತಾನಿ ಭಾವು ಈಗ ಅವರು ಉರ್ಫಿ ಜಾವೇದ್(Urfi Javed) ಬಗ್ಗೆ ಮಾತನಾಡಿದ್ದಾರೆ. ಉರ್ಫಿ ತುಂಡು ಬಟ್ಟೆ ಹಾಕುವುದನ್ನು ನಿಲ್ಲಿಸಬೇಕು. ಇದು ಭಾರತದ ಸಂಸ್ಕೃತಿಗೆ ವಿರುದ್ಧವಾಗಿದೆ. ಅವರು ಸುಧಾರಿಸದೇ ಇದ್ದರೆ ತಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಿಂದುಸ್ತಾನಿ ಭಾವು ವಿಡಿಯೋದಲ್ಲಿ ಹೇಳಿದ್ದಾರೆ. ಅದಕ್ಕೆ ಉರ್ಫಿ ಜಾವೇದ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಉಡುಪಿ ಕಾಪು ಬೀಚ್ ನಲ್ಲಿ ಅರಳಿನಿಂತ ‘ಕಾಂತಾರ’ ಗೆಲುವಿನ ಮರಳುಶಿಲ್ಪ
ನೀವು ಬೈಯ್ಯುವುದು ಭಾರತದ ಸಂಸ್ಕೃತಿಯೇ ನಿಮ್ಮ ಬೈಗುಳದಿಂದ ಎಷ್ಟು ಜನರು ಸುಧಾರಿಸಿದ್ದಾರೆ ಎಂದು ಭಾವುಗೆ ಉರ್ಫಿ ಪ್ರಶ್ನೆ ಮಾಡಿದ್ದಾರೆ. ನೀವು ನನಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದೀರಿ. ನಿಮ್ಮನ್ನು ನಾನು ಜೈಲಿಗೆ ಕಳುಹಿಸಬಲ್ಲೇ ಎಂದು ಉರ್ಫಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಹಿಂದುಸ್ತಾನಿ ಭಾವು ಮಾತ್ರಬಲ್ಲದೇ ಅನೇಕರು ಉರ್ಫಿ ವಿರುದ್ಧ ಕಿಡಿಕಾರಿದ್ದಾರೆ.