ಸದಾ ವಿಭಿನ್ನ ಕಾಸ್ಟ್ಯೂಮ್ ಮತ್ತು ಬೋಲ್ಡ್ ನಡೆಗಳ ಮೂಲಕ ಗುರುತಿಸಿಕೊಂಡಿರುವ ಕಿರುತೆರೆ ನಟಿ, ಬಿಗ್ ಬಾಸ್ ಶೋ ಸ್ಪರ್ಧಿ ಉರ್ಫಿ ಜಾವೆದ್ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಲ್ಲದೇ ತಮಗಾದ ಕಹಿ ಘಟನೆಯನ್ನು ಸೋಷಿಯಲ್ ಮೀಡಿಯಾ ಮೂಲಕವೂ ಹಂಚಿಕೊಂಡಿದ್ದಾರೆ. ಉರ್ಫಿ ಅವರು ಈ ನಡೆ ಬಿಟೌನ್ ಅಂಗಳದಲ್ಲಿ ಭಾರೀ ಸದ್ದು ಮಾಡಿದೆ.
ಕಲರ್ ಕಲರ್ ಕಾಸ್ಟ್ಯೂಮ್ ಹಾಕಿಕೊಂಡು ಓಡಾಡುತ್ತಿದ್ದವರು, ಇಂದು ಕಾಸ್ಟಿಂಕ್ ಕೌಚ್ ಬಗ್ಗೆ ಮಾತನಾಡಿದ್ದು, ಚಿತ್ರೋದ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಷ್ಟಕ್ಕೂ ಈ ಊರ್ಫಿ ಇಂಥದ್ದೊಂದು ಆರೋಪ ಮಾಡಿದ್ದು ಪಂಜಾಬಿ ಕಾಸ್ಟಿಕ್ ಡೈರೆಕ್ಟರ್ ಒಬೇದ್ ಅಫ್ರಿದಿ ಮೇಲೆ ಅನ್ನುವುದು ಇನ್ನೂ ಅಚ್ಚರಿಯ ಸಂಗತಿ. ಇದನ್ನೂ ಓದಿ : ಡಿಸೆಂಬರ್ ನಲ್ಲಿ ರಶ್ಮಿಕಾ ಮಂದಣ್ಣ -ದೇವರಕೊಂಡ ಮದುವೆ? ಏನಿದು ಮ್ಯಾರೇಜ್ ಕಹಾನಿ
ಪಂಜಾಬಿ ಮೂಲದ ಒಬೇದ್ ಅಫ್ರಿದಿ ಸಾಕಷ್ಟು ಹಿಟ್ ಚಿತ್ರಗಳಿಗೆ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಪಾತ್ರಗಳ ಆಯ್ಕೆಯ ಸಂದರ್ಭದಲ್ಲಿ ಅವರು ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆ ಇಡುತ್ತಿದ್ದರು ಎನ್ನುವುದು ಉರ್ಫಿ ಆರೋಪ. ಸರಿಯಾದ ಸಂಭಾವನೆಯನ್ನೂ ಕೊಡದೇ ಅವರು ಸತಾಯಿಸುತ್ತಾರೆ ಎಂದೂ ಉರ್ಫಿ ಮತ್ತೊಂದು ಆರೋಪ ಮಾಡಿದ್ದಾರೆ. ತಮ್ಮ ಆರೋಪಕ್ಕೆ ಪೂರಕ ಎನ್ನುವಂತೆ ಆ ನಿರ್ದೇಶಕ ಮಹಾಶಯ ಲೈಂಗಿಕ ಆಸೆ ವ್ಯಕ್ತಪಡಿಸಿರುವ ಚಾಟ್ ಗಳ ಸ್ಕ್ರೀನ್ ಶಾಟ್ ಗಳನ್ನೂ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ತಾವಷ್ಟೇ ಅಲ್ಲ, ಇನ್ನೂ ಐದು ಹುಡುಗಿಯರಿಗೆ ಇಂಥದ್ದೇ ಕಹಿ ಅನುಭವ ಆಗಿದೆ. ಅವರೆಲ್ಲರೂ ತಮ್ಮೊಂದಿಗೆ ಸಂಪರ್ಕದಲ್ಲಿರುವ ವಿಷಯವನ್ನೂ ಉರ್ಫಿ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಒಬ್ಬ ನಟಿಗೆ ತಮ್ಮ ನೆಚ್ಚಿನ ಸಿಂಗರ್ ಜತೆ ಆಲ್ಬಂ ಮಾಡುವುದಾಗಿ ಆಸೆ ತೋರಿಸಿ, ಲೈಂಗಿಕ ಬೇಡಿ ಇಟ್ಟಿದ್ದ ಎನ್ನುವ ಗಂಭೀರ ಆರೋಪ ಕೂಡ ಅವರು ಮಾಡಿದ್ದಾರೆ.
ಉರ್ಫಿ ಮಾಡಿರುವ ಆರೋಪವನ್ನು ನಿರಾಕರಿಸಿರುವ ಒಬೇದ್, ಉರ್ಫಿ ಒಪ್ಪಿಕೊಂಡ ಚಿತ್ರೀಕರಣಕ್ಕೆ ಹಾಜರಾಗಲಿಲ್ಲ. ಹಾಗಾಗಿ ಸಣ್ಣ ಮನಸ್ತಾಪ ಆಗಿತ್ತು. ಉಳಿದಂತೆ ಅವರ ಆರೋಪ ಎಲ್ಲವೂ ನಿರಾಧಾರ ಎಂದಿದ್ದಾರೆ. ಆರೋಪ, ಪ್ರತ್ಯಾರೋಪ ಏನೇ ಇರಲಿ, ಉರ್ಫಿ ಆರೋಪವಂತೂ ಬಂಜಾಬಿ ನಿರ್ದೇಶಕನ ನಿದ್ದೆ ಹಾಳು ಮಾಡಿದ್ದಂತೂ ಸತ್ಯ.