ಅರೆಬರೆ ಕಾಸ್ಟ್ಯೂಮ್ ಮೂಲಕ ಬಿಟೌನ್ ನಲ್ಲಿ ಫೇಮಸ್ ಆಗಿರುವ ಉರ್ಫಿ ಜಾವೇದ್ ಅವರಿಗೆ ತಮಗಿಂತಲೂ ಕಡಿಮೆ ಬಟ್ಟೆ ಹಾಕುವವರನ್ನು ಕಂಡರೆ ಆಗುವುದಿಲ್ಲ. ಹಾಗಾಗಿ ಹಲವಾರು ಬಾರಿ ಅವರು ಅಂತಹ ನಟಿಯರ ವಿರುದ್ಧ ಕಾಮೆಂಟ್ ಮಾಡಿದ್ದೂ ಇದೆ. ಆದರೆ, ರಣವೀರ್ ಸಿಂಗ್ ವಿಷಯದಲ್ಲಿ ಅವರು ಹಾಗೆ ಮಾಡಿಲ್ಲ. ಫೋಟೋ ಶೂಟ್ ಗಾಗಿ ರಣವೀರ್ ಸಿಂಗ್ ಪೂರ್ಣ ನಗ್ನರಾಗಿ ಕಾಣಿಸಿಕೊಂಡರೂ, ಜಾವೇದ್ ಗರಂ ಆಗಿಲ್ಲ. ಯಾಕೆಂದರೆ, ಅವರ ಮೇಲೆ ಉರ್ಫಿಗೆ ವಿಶೇಷ ಪ್ರೀತಿಯಿದೆಯಂತೆ.
ಫೋಟೋ ಶೂಟ್ ನಲ್ಲಿ ಸಂಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡಿರುವ ರಣವೀರ್ ಸಿಂಗ್ ಬಗ್ಗೆ ಕಾಮೆಂಟ್ ಮಾಡಿರುವ ಉರ್ಫಿ ಜಾವೇದ್ ‘ನನಗೆ ರಣವೀರ್ ಕಂಡರೆ ತುಂಬಾ ಪ್ರೀತಿ. ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರನ್ನು ಕಂಡರೆ ನನಗೆ ಇಷ್ಟ. ಆದರೆ, ಏನು ಮಾಡೋದು ದೀಪಿಕಾ ಪಡುಕೋಣೆ ಅವರನ್ನು ಮದುವೆ ಆಗಿದ್ದಾರೆ. ಆದರೂ, ಪರವಾಗಿಲ್ಲ. ಅವರು ಒಪ್ಪಿದರೆ ಎರಡನೇ ಪತ್ನಿಯಾಗಲು ನಾನು ರೆಡಿ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ
ಅರೆಬರೆ ಬಟ್ಟೆ ಹಾಕಿಕೊಂಡು ಹಾಟ್ ಹಾಟ್ ಆಗಿ ಕಾಣುವ ಉರ್ಫಿ ಜಾವೇದ್, ಈ ಕಾರಣದಿಂದಾಗಿಯೇ ಫೇಮಸ್ ಆದವರು. ಅವರು ಹಾಕುವ ಕಾಸ್ಟ್ಯೂಮ್ ಚಿತ್ರ ವಿಚಿತ್ರವಾಗಿರುತ್ತವೆ. ಅಲ್ಲದೇ, ವಿವಾದಿತ ತಾರೆಯರೊಂದಿಗೆ ಯಾವಾಗಲೂ ಅವರು ಕಾಣಿಸಿಕೊಳ್ಳುತ್ತಾರೆ. ಈ ಮೂಲಕವೇ ಲಕ್ಷಾಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ.