BollywoodCinemaLatestMain PostTV Shows

ದೂರು ಕೊಟ್ಟವರ ವಿರುದ್ಧ ಗರಂ ಆದ ಉರ್ಫಿ: ಬಿಕಿನಿಯಲ್ಲೇ ಓಡಾಡ್ತೀನಿ ಎಂದ ನಟಿ

ಬಾಲಿವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಮುಂಬೈ ಬೀದಿಯಲ್ಲಿ ಬಿಕಿನಿ ಧರಿಸಿ ಓಡಾಡಿದರು ಎನ್ನುವ ಕಾರಣಕ್ಕಾಗಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಉರ್ಫಿ ಗರಂ ಆಗಿದ್ದಾರೆ.  ಅತ್ಯಾಚಾರಿಗಳ ಮೇಲೆ ದೂರು ಕೊಡಿ, ನನ್ನ ಮೇಲಲ್ಲ ಎಂದು ದೂರು ನೀಡಿದವರು ವಿರುದ್ಧ ಮಾತನಾಡಿದ್ದಾರೆ. ನನ್ನ ದೇಹ, ನನ್ನ ಬಟ್ಟೆ ಯಾವ ರೀತಿಯಾದರೂ ಧರಿಸುತ್ತೇನೆ. ನಿಮಗೇನು ಸಮಸ್ಯೆ ಎಂದು ಅವರು ಕೇಳಿದ್ದಾರೆ.

ನಾನು ತಾಲಿಬಾನ್ ನಲ್ಲಿ ವಾಸಿಸುತ್ತಿಲ್ಲ. ಭಾರತದಲ್ಲಿ ಬದುಕುತ್ತಿರುವೆ. ಇಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಮಗಿಷ್ಟ ಬಂದಂತೆ ಬಟ್ಟೆ ಧರಿಸಲು ಅವಕಾಶವಿಲ್ಲವಾ? ಎಂದು ಅವರು ಕೇಳಿದ್ದಾರೆ. ಬಿಕಿನಿ ಧರಿಸಿದರೆ ನಿಮಗೆ ಸಮಸ್ಯೆ ಆಗುತ್ತದೆ ಅಂತಾದರೆ ಕಣ್ಣು ಮುಚ್ಚಿಕೊಂಡು ಓಡಾಡಿ ಎಂದು ಉರ್ಫಿ ಪುಕ್ಕಟೆ ಸಲಹೆಯನ್ನೂ ಕೊಟ್ಟಿದ್ದಾರೆ. ಯಾರು ಏನೇ ಹೇಳಿದರೂ, ದೂರು ಕೊಟ್ಟರು ನಾನು ನನ್ನಿಷ್ಟದಂತೆಯೇ ಬಟ್ಟೆಯನ್ನೇ ಧರಿಸುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗ ಶೌರ್ಯ ಮದುವೆ

ಉರ್ಫಿಗೆ ವಾರಕ್ಕೊಂದು ಗಲಾಟೆ ಮಾಡಿಕೊಳ್ಳದೇ ಇದ್ದರೆ, ನಿದ್ದೆಯೇ ಬರುವುದಿಲ್ಲ ಅನಿಸುತ್ತದೆ. ಹಾಗಾಗಿಯೇ ಏನಾದರೂ ಒಂದು ವಿಷಯ ತಗೆದುಕೊಂಡು ರಸ್ತೆಯಲ್ಲೇ ಬಾಯಿಗೆ ಬಂದಂತೆ ಮಾತನಾಡುತ್ತಲೇ ಇರುತ್ತಾರೆ. ದೂರಿನ ವಿಚಾರವನ್ನೂ ಅವರು ಹಾದಿ ರಂಪ, ಬೀದಿ ರಂಪ ಮಾಡಿದ್ದಾರೆ. ಕೊಳಕಾದ ಭಾಷೆಯಲ್ಲೇ ದೂರು ನೀಡಿದವರ ವಿರುದ್ಧ ಮಾತನಾಡಿದ್ದಾರೆ. ಅವರು ಬೈದಿರುವ ವಿಡಿಯೋಗಳು ವೈರಲ್ ಕೂಡ ಆಗಿವೆ.

Live Tv

Leave a Reply

Your email address will not be published. Required fields are marked *

Back to top button