ಕಲಬುರಗಿ: ಮಹಾನಗರ ಪಾಲಿಕೆ ನೂತನ ಕಟ್ಟಡದ ಮೇಲೆ ಕೆಲ ಕಿಡಗೇಡಿಗಳು ಉರ್ದು ನಾಮಫಲಕ ಹಾಕಿದ್ದಾರೆ.
Advertisement
ಭಾನುವಾರದಂದು ಕಚೇರಿಯಲ್ಲಿ ಯಾರೂ ಇಲ್ಲದ ಸಮಯ ನೋಡಿ ನಾಮಫಲಕ ಹಾಕಿ ಎಸ್ಕೇಪ್ ಆಗಿದ್ದಾರೆ. ಕೂಡಲೇ ಇದನ್ನು ಗಮನಿಸಿದ ಪಾಲಿಕೆಯ ಅಧಿಕಾರಿಗಳು ಉರ್ದು ನಾಮಫಲಕ ತೆಗೆಸಿದ್ದು, ಕಿಡಿಗೇಡಿತನ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಿದ್ದಾರೆ.
Advertisement
Advertisement
ಪಾಲಿಕೆ ಮೇಲಿನ ಉರ್ದು ನಾಮಫಲಕ ತೆಗೆದಿರುವ ವಿಷಯ ತಿಳಿಯುತ್ತಿದ್ದಂತೆ, ಕೆಲ ಮುಸ್ಲಿಂ ಸಂಘಟನೆಯವರು ಪಾಲಿಕೆಯ ನೂತನ ಕಟ್ಟಡದ ಮುಂಭಾಗದಲ್ಲಿ ತಡರಾತ್ರಿವರೆಗೂ ಧರಣಿ ನಡೆಸಿದ್ದು, ಉರ್ದು ನಾಮಫಲಕ ಬೇಡ ಅಂದ್ರೆ ಕನ್ನಡ ಮತ್ತು ಆಂಗ್ಲ ಭಾಷೆಯ ನಾಮಫಲಕ ಸಹ ಬೇಡ ಅಂತಾ ಕನ್ನಡದ ನಾಮಫಲಕಕ್ಕೆ ಕಪ್ಪು ಮಸಿ ಹಚ್ಚಿದ್ದಾರೆ. ಘಟನೆಯ ನಂತರ ಪ್ರತಿಭಟನಾನಿರತ 30ಕ್ಕು ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.