ಬೆಂಗಳೂರು: ನಕ್ಸಲ್ (Naxals) ಚಟುವಟಿಕೆ ಒಡಿಶಾ ಕಡೆ ಸೀಮಿತ ಆಗಿತ್ತು. ಈಗ ಕರ್ನಾಟಕದಲ್ಲಿ ಶುರು ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ (Siddaramaiah) ಅವರು ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಸಿಟಿ ರವಿ, ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ನಕ್ಸಲರು ಇದ್ದರು. ಗುಳೆ ಹೋಗಿದ್ದ ನಕ್ಸಲರು, ಈಗ ಸಮೃದ್ಧಿ ಕಾಲ ಅಂತ ಬಂದಿರೋ ತರ ಇದೆ. ನಕ್ಸಲರು ಸಂವಿಧಾನ ವಿರೋಧಿಗಳು. ಈಗ ಅವರಿಗೆ ಹಾಲು ಕುಡಿದಂತಾಗಿದೆ. ಅವರಿಗೆ ಸಂವಿಧಾನದ ಮೇಲೆ ಅಲ್ಲ, ಗುಂಡಿನ ಮೇಲೆ ನಂಬಿಕೆ ಇದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಹೆಡ್ಗೆವಾರ್ ಅವರು ಆರ್‌ಎಸ್‌ಎಸ್ ಸಂಸ್ಥಾಪಕರು. ಅವರ ಬಗ್ಗೆ ಪಠ್ಯ ಇದೆ. ಅವರನ್ನು ವಿರೋಧಿಸಿ, ಪಠ್ಯದಿಂದ ಹೇಗೆ ತೆಗೆಯುತ್ತಾರೆ ನೋಡೋಣ. ಅವರು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದವರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಆಗಿದ್ದರು. ಅನುಭವದ ಆಧಾರದ ಮೇಲೆ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂದುಕೊAಡಿದ್ದೇನೆ. ಯಾರದ್ದೋ ಮಾತು ಕೇಳಿದರೆ ಮತ್ತೆ ಮನೆಗೆ ಹೋಗುತ್ತಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಬಿಜೆಪಿ Vs ಡಿಎಂಕೆ – ಬಿಜೆಪಿ ಕಾರ್ಯಕರ್ತ ಜಡೇಜಾ ಆಟದಿಂದ ಚೆನ್ನೈಗೆ ಜಯ ಎಂದ ಅಣ್ಣಾಮಲೈ
Advertisement
ಉಚಿತ ಕೊಡುಗೆ ವಿಚಾರವಾಗಿ ಮಾತನಾಡಿ, ಚುನಾವಣೆಗೆ ಮೊದಲು ಮಹದೇವಪ್ಪ ನಿನಗೂ ಫ್ರೀ, ನನಗೂ ಫ್ರೀ ಅಂದಿದ್ದರು. ಉಚಿತ, ನಿಶ್ಚಿತ, ಖಂಡಿತ, ಖಚಿತ ಹೀಗೆ ಹೇಳಿದ್ದರು. ಮೊದಲು ಯಾವುದೇ ಷರತ್ತು ಇರಲಿಲ್ಲ. ಈಗ ಎಲ್ಲಾ ಷರತ್ತು ಬಂದಿದೆ. ಇವರು ಲೋಕಸಭೆ ಚುನಾವಣೆಯವರೆಗೂ ಕೊಡಬಹುದು. ನೋಡೋಣ ಏನು ಮಾಡುತ್ತಾರೆ ಎಂದು ಸವಾಲು ಹಾಕಿದರು.
Advertisement
ಈಗಾಗಲೇ ಊರುಗಳಲ್ಲಿ ಢಂಗೂರ ಸಾರುತ್ತಿದ್ದಾರೆ. ಲೈಟ್ ಬಿಲ್ ಕಟ್ಟಲ್ಲ, ಟಿಕೆಟ್ ತಗೋಳಲ್ಲ ಅಂತಿದ್ದಾರೆ. ಇವರು ಒಳ್ಳೆಯ ಕೆಲಸ ಮಾಡಿದ್ರೆ ಬೆಂಬಲ ಕೊಡುತ್ತೇವೆ. ಇಲ್ಲವೆ ಅರ್ಬನ್ ನಕ್ಸಲರ ಮಾತು ಕೇಳಿದ್ರೆ ಅನುಭವಿಸುತ್ತಾರೆ. ನಾವೂ ಕೂಡ 36% ಮತಗಳನ್ನು ಪಡೆದಿದ್ದೇವೆ. ಕಡಿಮೆ ಸೀಟುಗಳು ಬಂದಿರಬಹುದು. ಮುಂದೆ ಏನಾಗುತ್ತೆ ನೋಡೋಣ ಎಂದರು.
ಮಹದೇವಪ್ಪ, ಸಿದ್ದರಾಮಯ್ಯ, ಕಾಕಾ ಪಾಟೀಲ್ ಎಲ್ಲರೂ ಬಿಪಿಎಲ್ ಕಾರ್ಡ್ ಇರೋರಾ? ಅವರು ಮೊದಲೇ ಹೇಳಬೇಕಿತ್ತು ಇಂತವರಿಗೆ ಫ್ರೀ ಅಂತ. ಕಾಂಗ್ರೆಸ್ ಏನು ನಿನ್ನೆ ಮೊನ್ನೆ ಬಂದ ಪಕ್ಷವಾ? ಸಿದ್ದರಾಮಯ್ಯ, ಮಹದೇವಪ್ಪ ಯಾರೂ ಟ್ಯಾಕ್ಸ್ ಕಟ್ಟೋದಿಲ್ವಾ? ಎನ್‌ಇಪಿ ಕಿತ್ತಾಕ್ತೀವಿ ಅಂತ ಹೇಳ್ತಾರೆ. ನೈತಿಕ ಮೌಲ್ಯ ಶಿಕ್ಷಣ ಇವರಿಗೆ ಬೇಕಿಲ್ಲ. ಆಧುನಿಕ ಶಿಕ್ಷಣ ಇವರಿಗೆ ಬೇಕಿಲ್ಲ. ಒಂದು ಪೂರ್ವಾಗ್ರಹ ಮನಸ್ಥಿತಿಗೆ ಬಲಿಯಾಗಿದ್ದಾರೆ. ಮಾತೃಭಾಷೆ ವಿರೋಧಿಸುತ್ತಾರೆ, ಆಧುನಿಕ ಶಿಕ್ಷಣ ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ನಾನು ಯಾವುದೇ ಹುದ್ದೆಯ ರೇಸ್‌ನಲ್ಲಿ ಇಲ್ಲ. ಪಕ್ಷ ಕೊಟ್ಟಿರೋ ಜವಾಬ್ದಾರಿಯಲ್ಲಿ ಕೆಲಸ ಮಾಡುತ್ತೇನೆ. ಕಳೆದ ಬಾರಿಗಿಂತ 9 ಸಾವಿರ ಮತ ಪಡೆದು ಸೋತಿದ್ದೇನೆ. ಅತಿ ಹೆಚ್ಚು ಕೆಲಸ ಮಾಡಿದ್ದು ಈ ಬಾರಿ. ಆದರೂ ಸೋತಿದ್ದೇನೆ. ನಾನು ಯಾವುದೇ ಅಧಿಕಾರಕ್ಕೆ ಬೇಡಿಕೆ ಇಟ್ಟಿಲ್ಲ. ಎಲ್ಲರನ್ನೂ ಜೋಡಿಸಿಕೊಂಡು ಕೆಲಸ ಮಾಡಬೇಕಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕಿದೆ. ಕೊರೊನಾದಿಂದ ದೇಶಗಳ ಜಿಡಿಪಿ ಕುಸಿದಿದೆ. ನಮ್ಮದು 4.5 ಜಿಡಿಪಿ ಇದೆ. ಪ್ರಧಾನಿ ಮೋದಿ ಮಾತು ಜಗತ್ತು ಕೇಳುತ್ತಿದೆ. 2047ಕ್ಕೆ ಭಾರತ ಅಭಿವೃದ್ಧಿಶೀಲ ರಾಷ್ಟ್ರ ಮಾಡಬೇಕು ಅಂತಿದೆ. ಆದರೆ ಕೆಲ ಜಿಹಾದಿ ಮನಸ್ಥಿತಿ ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದೆ. ಪಕ್ಷ ಈಗ ಸೋತಿದೆ. ಆದರೆ ಲೋಕಸಭೆ ಚುನಾವಣೆ ಹೊತ್ತಿಗೆ ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಉಡುಪಿ, ದ.ಕ, ಶಿವಮೊಗ್ಗದಲ್ಲಿ ಖಾಸಗಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿ: ಸುನಿಲ್ ಕುಮಾರ್
ವಿಪಕ್ಷ ನಾಯಕ ಸ್ಥಾನದ ಕುರಿತು ಮಾತನಾಡಿದ ಸಿಟಿ ರವಿ, ಪಕ್ಷದ ಶಾಸಕಾಂಗ ಸಭೆ ಕರೆದು ಚರ್ಚೆ ಮಾಡಲಾಗುತ್ತದೆ. ಪ್ರತಿಯೊಬ್ಬರನ್ನು ಕರೆದು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಬಿಜೆಪಿಗೆ ಸೋಲು ಹೊಸದೇನಲ್ಲ. ಶೀಘ್ರವೇ ವಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.