Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯುರೇನಿಯಂ ಸಂವರ್ಧನೆ ತನ್ನ ಸಾರ್ವಭೌಮ ಹಕ್ಕು – ಇರಾನ್‌ ಪ್ರಸ್ತಾಪಕ್ಕೆ ಅಮೆರಿಕ ಒಪ್ಪಿಗೆ ನೀಡಿದ್ಯಾ? ಯಾಕೆ ಈ ಗೊಂದಲ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಯುರೇನಿಯಂ ಸಂವರ್ಧನೆ ತನ್ನ ಸಾರ್ವಭೌಮ ಹಕ್ಕು – ಇರಾನ್‌ ಪ್ರಸ್ತಾಪಕ್ಕೆ ಅಮೆರಿಕ ಒಪ್ಪಿಗೆ ನೀಡಿದ್ಯಾ? ಯಾಕೆ ಈ ಗೊಂದಲ?

Latest

ಯುರೇನಿಯಂ ಸಂವರ್ಧನೆ ತನ್ನ ಸಾರ್ವಭೌಮ ಹಕ್ಕು – ಇರಾನ್‌ ಪ್ರಸ್ತಾಪಕ್ಕೆ ಅಮೆರಿಕ ಒಪ್ಪಿಗೆ ನೀಡಿದ್ಯಾ? ಯಾಕೆ ಈ ಗೊಂದಲ?

Public TV
Last updated: April 8, 2026 12:11 pm
Public TV
Share
4 Min Read
Iran Uranium Enrichment 3
SHARE

ವಾಷಿಂಗ್ಟನ್‌: ಇರಾನ್ ಸಲ್ಲಿಸಿರುವ 10 ಅಂಶಗಳ ಪ್ರಸ್ತಾವನೆಯಲ್ಲಿ ಪರಮಾಣು ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಯುರೇನಿಯಂ ಸಂವರ್ಧನೆ(Uranium Enrichment) ಹಕ್ಕಿನ ಬಗ್ಗೆ ಗೊಂದಲ ಮತ್ತು ಭಿನ್ನಾಭಿಪ್ರಾಯಗಳಿವೆ.

ಇರಾನ್‌ (Iran) ಅಣ್ವಸ್ತ್ರ ಹೊಂದುವುದನ್ನು ತಡೆಯಲು ನಾವು ದಾಳಿ ಮಾಡಿದ್ದೇವೆ ಎಂದು ಅಮೆರಿಕ (USA) ಮತ್ತು ಇಸ್ರೇಲ್‌ (Isreal) ಸಮರ್ಥಿಸಿಕೊಂಡಿತ್ತು. ಆದರೆ ಕದನ ವಿರಾಮ ಘೋಷಣೆಗೆ ಸಂಬಂಧಿಸಿದ 10 ಅಂಶಗಳ  ಪ್ರಸ್ತಾವನೆಯಲ್ಲಿ ಯುರೇನಿಯಂ ಸಂವರ್ಧನೆ (Right to Enrichment) ಮಾಡುವುದು ತನ್ನ ಸಾರ್ವಭೌಮ ಹಕ್ಕು ಎಂದು ಪ್ರತಿಪಾದಿಸಿದೆ.

Iran Uranium Enrichment 1

ಗೊಂದಲವಾಗಿದ್ದು ಎಲ್ಲಿ?
ಇರಾನ್ ಬಿಡುಗಡೆ ಮಾಡಿದ ಪ್ರಸ್ತಾವನೆಯ ಪೈಕಿ ಪಾರ್ಸಿ ಭಾಷೆಯಲ್ಲಿರುವ ಆವೃತ್ತಿಯಲ್ಲಿ “ಯುರೇನಿಯಂ ಸಂವರ್ಧನೆಗೆ ಒಪ್ಪಿಗೆ” ಎನ್ನುವ ಅಂಶವಿತ್ತು. ಆದರೆ ಅಂತರಾಷ್ಟ್ರೀಯ ಪತ್ರಕರ್ತರಿಗೆ ನೀಡಲಾದ ಇಂಗ್ಲಿಷ್ ಆವೃತ್ತಿಯಲ್ಲಿ ಈ ಅಂಶ ಇಲ್ಲದ ಕಾರಣ ಗೊಂದಲಕ್ಕೆ ಕಾರಣವಾಗಿದೆ.

ಇರಾನ್ ತಾನು “ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ” ಎಂದು ಹೇಳಿದೆಯಾದರೂ ನಾಗರಿಕ ಇಂಧನ ಅಗತ್ಯಗಳಿಗಾಗಿ ಸಂವರ್ಧನೆ ಮುಂದುವರಿಸಲು ಪಟ್ಟು ಹಿಡಿದಿದೆ. ಅಮೆರಿಕ ಮತ್ತು ಇಸ್ರೇಲಿಗೆ ಇರಾನ್‌ನ ಈ ಸಂವರ್ಧನೆಯ ಮಟ್ಟ (Enrichment Level) ಯಾವ ಹಂತದಲ್ಲಿದೆ ಎಂಬ ಬಗ್ಗೆ ತೀವ್ರ ಆತಂಕವಿದೆ.

ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ನಿಗಾ ಎಷ್ಟಿರಬೇಕು ಮತ್ತು ಈಗಿರುವ ಸಂವರ್ಧನೆ ಮಾಡಿರುವ ಯುರೇನಿಯಂ ಸಂಗ್ರಹವನ್ನು ಏನು ಮಾಡಬೇಕು ಎಂಬ ಬಗ್ಗೆ ಎರಡೂ ದೇಶಗಳ ನಡುವೆ ಇನ್ನೂ ಸ್ಪಷ್ಟವಾದ ಒಮ್ಮತ ಮೂಡಿಲ್ಲ. ಇದನ್ನೂ ಓದಿ: ಇರಾನ್, ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ

ಇರಾನ್ ತಾನು ಪರಮಾಣು ಬಾಂಬ್ ಮಾಡುವುದಿಲ್ಲ ಎಂದು ಹೇಳುತ್ತಿದೆಯಾದರೂ ಯುರೇನಿಯಂ ಸಂವರ್ಧನೆಯ ಹಕ್ಕು ಬಿಟ್ಟುಕೊಡಲು ಸಿದ್ಧವಿಲ್ಲ. ಅಮೆರಿಕವು ಈ ಹಕ್ಕನ್ನು ಒಪ್ಪಿಕೊಂಡಿದೆಯೇ ಅಥವಾ ಇಲ್ಲವೇ ಎನ್ನುವುದು ಈ 14 ದಿನಗಳ ಕದನ ವಿರಾಮದ ಸಮಯದಲ್ಲಿ ನಡೆಯುವ ಮಾತುಕತೆಗಳಲ್ಲಿ ಸ್ಪಷ್ಟವಾಗಲಿದೆ.

Iran Uranium Enrichment 2

ಯುರೇನಿಯಂ ಸಂವರ್ಧನೆ ಎಷ್ಟಿದೆ?
ಇರಾನ್ 2026ರ ಏಪ್ರಿಲ್ ವೇಳೆಗೆ ಸುಮಾರು 440 ರಿಂದ 500 ಕೆಜಿ 60% ಸಂವರ್ಧಿತ ಯುರೇನಿಯಂ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಪರಮಾಣು ಬಾಂಬ್ ತಯಾರಿಕೆಗೆ ಬೇಕಾದ 90% ಮಟ್ಟಕ್ಕೆ ಬಹಳ ಹತ್ತಿರವಿರುವ ಅಪಾಯಕಾರಿ ಹಂತವಾಗಿದೆ.  ಇದನ್ನೂ ಓದಿ: ಪಾಕಿಗೆ ಮುಖಭಂಗ – ಲೆಬನಾನ್‌ ಮೇಲೆ ದಾಳಿ ಮುಂದುವರಿಯಲಿದೆ ಎಂದ ಇಸ್ರೇಲ್‌

ಈ ಒಟ್ಟು ದಾಸ್ತಾನಿನ ಪೈಕಿ ಸುಮಾರು 200 ಕೆಜಿಗಿಂತ ಹೆಚ್ಚು ಯುರೇನಿಯಂ ಅನ್ನು ಇಸ್ಫಹಾನ್‌ (Isfahan) ನಗರದ ಭೂಗತ ಸುರಂಗ ಸಂಕೀರ್ಣದಲ್ಲಿ ಸಂಗ್ರಹಿಸಿಡಲಾಗಿದೆ.

ವಿವಿಧ ಹಂತಗಳಲ್ಲಿ ಸಂವರ್ಧಿತ (2%, 5%, 20% ಮತ್ತು 60%) ಯುರೇನಿಯಂನ ಒಟ್ಟು ಪ್ರಮಾಣ 8,000 ಕೆಜಿಗಿಂತ ಅಧಿಕವಾಗಿದೆ. 500 ಕೆಜಿ 60% ಸಂವರ್ಧಿತ ಯುರೇನಿಯಂ ಅನ್ನು 90% ಗೆ ಸಂವರ್ಧಿಸಿದರೆ, ಸುಮಾರು 10 ಪರಮಾಣು ಸಿಡಿತಲೆಗಳನ್ನು ತಯಾರಿಸಲು ಸಾಕಾಗುತ್ತದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಮುಖ್ಯಸ್ಥ ರಾಫೆಲ್ ಗ್ರೊಸ್ಸಿ ತಿಳಿಸಿದ್ದರು.

us and israeli military operations natanz nuclear facility hit says iran iaea flags risk of radiation leak

ಯುರೇನಿಯಂ ಸಂವರ್ಧನೆ ಎಂದರೇನು?
ನೈಸರ್ಗಿಕ ಯುರೇನಿಯಂನಲ್ಲಿ 99.3% ಯುರೇನಿಯಂ 238 ಅಂಶ ಹೊಂದಿದ್ರೆ 0.7% ಯುರೇನಿಯಂ 235 ಅಂಶ ಹೊಂದಿರುತ್ತದೆ. ಇದನ್ನು ಸರಳವಾಗಿ ಹೇಳುವುದಾದರೆ ಗಣಿಗಳಿಂದ 1 ಕೆಜಿ ಯುರೇನಿಯಂ ಖನಿಜ ಪಡೆದರೆ ಅದರಲ್ಲಿ 993 ಗ್ರಾಂ ಯು 238 ಅಂಶ ಇದ್ದರೆ ಮತ್ತು 7 ಗ್ರಾಂ ಯು 235 ಅಂಶ ಇರುತ್ತದೆ.

ನೈಸರ್ಗಿಕ ಯುರೇನಿಯಂನಿಂದ ಪರಮಾಣು ವಿದ್ಯುತ್ ಸ್ಥಾವರ ಅಥವಾ ಪರಮಾಣು ಬಾಂಬ್‌ ಮಾಡಲು ಸಾಧ್ಯವಿಲ್ಲ. ಪರಮಾಣು ವಿದ್ಯುತ್ ಸ್ಥಾವರಕ್ಕೆ ಒಟ್ಟು ಯುರೇನಿಯಂನಲ್ಲಿ ಕನಿಷ್ಠ – 5% ಯುರೇನಿಯಂ 235 ಅಗತ್ಯವಿದೆ. ಪರಮಾಣು ಬಾಂಬ್‌ಗೆ ಒಟ್ಟು ಯುರೇನಿಯಂನಲ್ಲಿ ಕನಿಷ್ಠ – 85% ರಿಂದ 90% ಯುರೇನಿಯಂ 235 ಅಗತ್ಯವಿದೆ.

ಯುರೇನಿಯಂ ಖನಿಜದಿಂದ ಯುರೇನಿಯಂ 235 ಪಡೆಯುವುದು ಬಹಳ ಸವಾಲಿನ ಕೆಲಸ. ಇದಕ್ಕೆ ದೊಡ್ಡ ಲ್ಯಾಬ್‌ಗಳು ಬೇಕಾಗುತ್ತದೆ. ಯುರೇನಿಯಂನಿಂದ ಯುರೇನಿಯಂ 235 ಇದರಿಂದ ಬೇರ್ಪಡಿಸುವ ತಂತ್ರಜ್ಞಾನಕ್ಕೆ ಕನ್ನಡದಲ್ಲಿ ಯುರೇನಿಯಂ ಸಂವರ್ಧನೆ ಎಂದು ಕರೆದರೆ ಇಂಗ್ಲಿಷಿನಲ್ಲಿ ಅದನ್ನು ಎನ್‌ರಿಚ್ಮೆಂಟ್‌ ಎಂದು ಕರೆಯಲಾಗುತ್ತದೆ.

ಅಧ್ಯಯನದ ಪ್ರಕಾರ 0.7% ನಿಂದ 50% ಯುರೇನಿಯಂ ಎನ್‌ರಿಚ್ಮೆಂಟ್‌ ಮಾಡಲು ಹಲವು ವರ್ಷ ತೆಗೆದುಕೊಳ್ಳುತ್ತದೆ. ಆದರೆ ಒಮ್ಮೆ ಅದು 50% ಕ್ಕಿಂತ ಹೆಚ್ಚಾದರೆ ಈ ಪ್ರಕ್ರಿಯೆ ಬಹಳ ವೇಗ ಪಡೆಯುತ್ತದೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಯಲ್ಲೂ ಎಡವಟ್ಟು – ಈಗ ಪಾಕ್‌ ಪ್ರಧಾನಿ ಫುಲ್‌ ಟ್ರೋಲ್‌

2025ರ ಮೇ ವೇಳೆ ಇರಾನ್‌ 408.6 ಕೆಜಿ 60% ಎನ್‌ರಿಚ್ಮೆಂಟ್‌ ಆಗಿರುವ ಯುರೇನಿಯಂ ದಾಸ್ತಾನು ಹೊಂದಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಹೇಳಿತ್ತು. ಈ ಮಾಹಿತಿಯನ್ನು ಐಎಇಎ ತಿಳಿಸಿದರೂ ಇರಾನ್‌ ಬಳಿ ಎನ್‌ರಿಚ್ಮೆಂಟ್‌ ಆಗಿರುವ ಯುರೇನಿಯಂ ಪ್ರಮಾಣ ಜಾಸ್ತಿ ಇದೆ. ಇದು ನಿಖರ ಮಾಹಿತಿ ಅಲ್ಲ ಎಂಬ ಸುದ್ದಿ ಆಗಲೇ ಪ್ರಕಟವಾಗಿದ್ದವು.

ಕೆಲವೇ ವಾರದಲ್ಲಿ ಇರಾನ್‌ 90% ಎನ್‌ರಿಚ್ಮೆಂಟ್‌ ಆಗಿರುವ ಯುರೇನಿಯಂ 235 ಹೊಂದಲಿದೆ ಎಂಬ ಭಯ ಇಸ್ರೇಲ್‌ಗೆ ಆವರಿಸಿತ್ತು. ಒಂದು ವೇಳೆ ಇರಾನ್‌ ಅಣುಬಾಂಬ್‌ ಹೊಂದಿದರೆ ಅದು ನನ್ನ ಮೇಲೆಯೇ ಪ್ರಯೋಗ ಮಾಡಲಿದೆ ಎಂದು ಇಸ್ರೇಲ್‌ಗೆ ಗೊತ್ತಿತ್ತು. ಅಣುಬಾಂಬ್‌ ದಾಳಿಯಾದರೆ ತಾನು ದೇಶವಾಗಿ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಅಮೆರಿಕದ ಜೊತೆಗೂಡಿ ಇಸ್ರೇಲ್‌ ಕಳೆದ ವರ್ಷ ಜೂನ್‌ 13 ರಂದು ಇರಾನ್‌ ನೆಲದ ಒಳಗಡೆ ಇರುವ ಇರಾನಿನ ಅಣು ಸ್ಥಾವರ, ಸೇನಾ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಅಷ್ಟೇ ಅಲ್ಲದೇ ಇರಾನಿನ ಅಣು ವಿಜ್ಞಾನಿಗಳನ್ನು ಹತ್ಯೆ ಮಾಡಿತ್ತು.

ಇರಾನ್‌ ಫೋರ್ಡೋ, ನತಾಂಜ್‌ ಮತ್ತು ಎಸ್ಪಹಾನ್‌ನಲ್ಲಿ ಅಣುಸ್ಥಾವರಗಳನ್ನು ಸ್ಥಾಪಿಸಿದೆ. ಈ ಪೈಕಿ ಫೋರ್ಡೋದ್ದು ಭೂಗತ ಅಣುಸ್ಥಾವರ ಆಗಿದ್ದರೆ ನತಾಂಜ್‌ನಲ್ಲಿ ಯುರೇನಿಯಂ ಸಂವರ್ಧನ ಘಟಕ, ಎಸ್ಸಹಾನ್‌ನಲ್ಲಿ ಅತಿ ದೊಡ್ಡ ಪರಮಾಣು ಸಂಶೋಧನಾ ಕೇಂದ್ರವನ್ನು ತೆರೆದಿದೆ.

TAGGED:iranisrealUranium EnrichmentUSAಅಮೆರಿಕಇರಾನ್ಇಸ್ರೇಲ್ಪರಮಾಣು ಬಾಂಬ್ಯುರೇನಿಯಂ ಸಂವರ್ಧನೆ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

SUPREME COURT
Latest

ಅವಳ ನೋವು, ಅವಮಾನ ಊಹಿಸಿ – ಅತ್ಯಾಚಾರ ಕೇಸಲ್ಲಿ 20 ವಾರ ಮೀರಿದ ಗರ್ಭಪಾತಕ್ಕೆ ಅವಕಾಶ ನೀಡಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

Public TV
By Public TV
3 minutes ago
Google Gemini Misused in AI Deepfake Loan Scam Ahmedabad Police Expose Aadhaar OTP Bypass four arrested Cyber Crime
Crime

ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌

Public TV
By Public TV
15 minutes ago
grapes
Chikkaballapur

ದ್ರಾಕ್ಷಿಗೆ ಬಂಪರ್ ಬೆಲೆ – ರೈತರ ಮೊಗದಲ್ಲಿ ನಗು, ಕೈಗೆ ಕಾಂಚಾಣ ತಂದ ಬೆಳೆ

Public TV
By Public TV
35 minutes ago
ipac vinesh chandel
Court

ಪಶ್ಚಿಮ ಬಂಗಾಳ ಕಲ್ಲಿದ್ದಲು ಹಗರಣ| I-PAC ನಿರ್ದೇಶಕನಿಗೆ ಜಾಮೀನು ಮಂಜೂರು

Public TV
By Public TV
2 hours ago
Narendra Modi 1 2
Latest

ಪ್ರಧಾನಿ ನರೇಂದ್ರ ಮೋದಿ ಜಾತಿ ಸಮೀಕ್ಷೆಯನ್ನು ಮುಂದೂಡಲು ಬಯಸಿದ್ದಾರೆ: ಕಾಂಗ್ರೆಸ್ ಆರೋಪ

Public TV
By Public TV
3 hours ago
Lokayukta Justice BS Patil
Bengaluru City

Bowring Hospital Wall Collapse| ಶಾಲಿನಿ ರಜನೀಶ್‌, ಮಹೇಶ್ವರ ರಾವ್‌ ವಿರುದ್ಧ ಕೇಸ್‌: ಗುಡುಗಿದ ಲೋಕಾಯುಕ್ತ ನ್ಯಾ. ಪಾಟೀಲ್‌

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?