ಬೊಗೋಟಾ: ತಲೆಕೆಳಗಾದ ಮನೆಯನ್ನು ಕೊಲಂಬಿಯಾದಲ್ಲಿ ನಿರ್ಮಿಸಲಾಗಿದ್ದು, ಈ ಮನೆ ಇದೀಗ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ.
ರಾಜಧಾನಿ ಬೊಗೋಟಾದಿಂದ ಸ್ವಲ್ಪ ದೂರದಲ್ಲಿರುವ ಕೊಲಂಬಿಯಾದ ಗ್ವಾಟಾವಿಟಾದಲ್ಲಿ ಕೊರೊನಾ ಸಮಯದಲ್ಲಿ ತಲೆಕೆಳಗಾದ ಮನೆಯನ್ನು ಕಟ್ಟಲಾಗಿದೆ. ಈಗ ಈ ಮನೆ ಇಲ್ಲರ ಆಕರ್ಷಕ ತಾಣವಾಗಿದೆ. ಈ ಮನೆ ನೋಡಲು ಕೊಲಂಬಿಯಾ ಮಾತ್ರವಲ್ಲ ದೇಶ-ವಿದೇಶಗಳಿಂದಲೂ ಪ್ರವಾಸಿರು ಬರುತ್ತಿದ್ದಾರೆ. ಇದನ್ನೂ ಓದಿ: ಎಂದಿಗೂ ಮನೆಗೆ ಬಾರದ ಮಾಲಕಿಗಾಗಿ ಕಾಯುತ್ತಿರುವ ನಾಯಿ – ವೀಡಿಯೋ ವೈರಲ್!
ಈ ಮನೆಯನ್ನು ಕೊಲಂಬಿಯಾ ನಿವಾಸಿ ಆಸ್ಟ್ರಿಯನ್ ಮಾಲೀಕ ಫ್ರಿಟ್ಜ್ ಶಾಲ್ ವಿನ್ಯಾಸಗೊಳಿಸಿದ್ದು, ಮನೆಯ ಒಳಗೆ, ಪ್ರವಾಸಿಗರು ಮಹಡಿಗಳಿರುವ ಛಾವಣಿಗಳ ಮೇಲೆ ನಡೆಯುತ್ತಾರೆ. ಆದರೆ ಸೋಫಾಗಳನ್ನು ಕೆಳಗೆ ಇರಿಸಲಾಗಿದೆ. ಈ ಹೊಸ ರೀತಿಯ ಮನೆ ನೋಡಿದ ಜನರು ಅಚ್ಚರಿಕೊಂಡಿದ್ದು, ಫುಲ್ ಎಂಜಾಯ್ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿದ ಶಾಲ್, ವಿಭಿನ್ನವಾಗಿ ಮನೆಯನ್ನು ಕಟ್ಟುತ್ತೇನೆಂದು ನಾನು ಮೊದಲು ಜನರಿಗೆ ಹೇಳಿದಾಗ ಎಲ್ಲರೂ ನನ್ನನ್ನು ಹುಚ್ಚನಂತೆ ನೋಡಿದ್ದರು. ನಾನು ಏನೇ ಹೇಳಿದರು ಅವರು ನಂಬಲಿಲ್ಲ ಎಂದು ತಿಳಿಸಿದರು.
2015ರಲ್ಲಿ ನಾನು ಮೊಮ್ಮಕ್ಕಳೊಂದಿಗೆ ಸ್ಥಳೀಯ ಆಸ್ಟ್ರಿಯಾಕ್ಕೆ ಪ್ರವಾಸಕ್ಕೆ ಹೋಗಿದ್ದೆ. ಆಗ ಇದೇ ರೀತಿಯ ಮನೆಯನ್ನು ನಾನು ನೋಡಿದ್ದೆ. ಅದರಿಂದ ಸ್ಫೂರ್ತಿ ಬಂದು ಈ ಮನೆಯನ್ನು ವಿನ್ಯಾಸಗೊಳಿಸಿದೆ. ಕೊರೊನಾ ಸಮಯದಲ್ಲಿ ಮನೆ ಕಟ್ಟುವುದು ಸ್ವಲ್ಪ ಕಷ್ಟವಾಗಿತ್ತು. ಕೊನೆಗೂ ಈ ಮನೆಯನ್ನು ಕಟ್ಟಿ ಮುಗಿಸಿದ್ದೇನೆ ಎಂದು ಸಂತೋಷದಿಂದ ಹೇಳಿದರು. ಇದನ್ನೂ ಓದಿ: ಸೋದರಮಾವನ ಜೊತೆ ಸೇರಿ ಪತಿಯನ್ನೇ ಕೊಂದಳು!
ವೈರಸ್ ನಮ್ಮನ್ನು ಸ್ವಲ್ಪಮಟ್ಟಿಗೆ ನಿಧಾನಗೊಳಿಸಿತು. ಆದರೆ ನನ್ನ ಕನಸಿನ ಮನೆಯನ್ನು ನಾನು ಕಟ್ಟಿದ್ದೇನೆ. ಈ ಮನೆಯನ್ನು ಮೂರು ವಾರಗಳ ಹಿಂದೆ ಉದ್ಘಾಟಿಸಿದ್ದೇನೆ. ಈ ಮನೆ ಕೊರೊನಾದಿಂದ ಬೇಸತ್ತ ಜನರಿಗೆ ಸಂತೋಷ ನೀಡಲಿದೆ ಎಂದು ತಿಳಿಸಿದರು.