ಚೆನ್ನೈ: ಬಿಜೆಪಿ ಕಚೇರಿಗೆ ಪೆಟ್ರೋಲ್ ಬಾಂಬ್ ಎಸೆದ ಆರೋಪದಡಿ ವ್ಯಕ್ತಿಯೋರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಬಂದು ಚೆನ್ನೈನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ. ಈ ಕುರಿತಂತೆ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿದ ಪೊಲೀಸರು ಚೆನ್ನೈನ ನಂದನಂನಲ್ಲಿ 38 ವರ್ಷದ ವಿನೋದ್ ಎಂಬ ಓರ್ವ ಆರೋಪಿಯನ್ನು ಇದೀಗ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಹಣ ಪಡೆದು ಪೆಟ್ರೋಲ್ ಬಾಂಬ್ ಎಸೆಯುವುದರಲ್ಲಿ ವಿನೋದ್ ಫೇಮಸ್ ಎಂಬ ವಿಚಾರ ತಿಳಿದು ಬಂದಿದೆ. ನೀಟ್ ಮಸೂದೆಯನ್ನು ಬಿಜೆಪಿ ಬೆಂಬಲಿಸಿದ್ದಕ್ಕೆ ಬೇಸರಗೊಂಡು ಈ ಕೃತ್ಯ ಎಸೆದಿರುವುದಾಗಿ ಆರೋಪಿ ಹೇಳಿದ್ದಾನೆ. ಈಗಾಗಲೇ ಆರೋಪಿ ವಿನೋದ್ ಮೇಲೆ 4 ಕೊಲೆ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣಗಳಿದ್ದು, ಈತ 2015ರಲ್ಲಿ ಸರ್ಕಾರಿ ಸ್ವಾಮ್ಯದ TASMAC ಮದ್ಯದಂಗಡಿ ಮೇಲೆ ಮತ್ತು 2017ರಲ್ಲಿ ತೇನಾಂಪೇಟೆ ಪೊಲೀಸ್ ಠಾಣೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದನು ಎಂಬ ಸತ್ಯ ಬೆಳಕಿಗೆ ಬಂದಿದೆ.
தடயவியல் நிபுணர்கள் வருவதற்கு முன்னர் என்ன அவசரம் @tnpoliceoffl ?@annamalai_k @AmitShah @narendramodi pic.twitter.com/uRkscRddDk
— CTR.Nirmal kumar (@CTR_Nirmalkumar) February 9, 2022
ಈ ಘಟನೆಯ ಹಿಂದೆ ವಿನೋದ್‍ಗೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ಅಲ್ಲದೇ ಈ ಕೃತ್ಯ ಎಸಗುವ ವೇಳೆ ವಿನೋದ್ ಮದ್ಯಪಾನ ಮಾಡಿದ್ದನು ಎಂದು ಪೊಲೀಸರ ಆರಂಭಿಕ ತನಿಖೆ ನಡೆಸಿ ತಿಳಿಸಿದ್ದಾರೆ. ಇದನ್ನೂ ಓದಿ: ಶಾಲಾ, ಕಾಲೇಜುಗಳ ರಜೆ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ: ಬಿ.ಸಿ. ನಾಗೇಶ್
Chennai | An unidentified person allegedly throws a petrol bomb at Tamil Nadu BJP office around 1 am. Details awaited. pic.twitter.com/vglWAuRf5G
— ANI (@ANI) February 9, 2022
ಸದ್ಯ ಈ ಸಂಬಂಧ ಮಾತನಾಡಿದ ಬಿಜೆಪಿ ನಾಯಕ ಕರಾಟೆ ಆರ್. ತ್ಯಾಗರಾಜನ್, “ಇದು ನಮ್ಮ ಚುನಾವಣಾ ಕೆಲಸವನ್ನು (ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ) ಹಾಳು ಮಾಡಲು ಪ್ರಯತ್ನ ನಡೆಸಲಾಗಿದೆ. ಇದಕ್ಕೆ ನಾವು ಹೆದರುವುದಿಲ್ಲ. ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಂಕ್ಷೀಪ್ತ ತನಿಖೆಯಾಗಬೇಕು ಎಂದಿದ್ದಾರೆ.
ಅದೃಷ್ಟವಶಾತ್ ಘಟನೆ ವೇಳೆ ಯಾವುದೇ ಪ್ರಾಣಾಪಾಯಗಳಾಗಿಲ್ಲ ಎಂದು ತಿಳಿದುಬಂದಿದ್ದು, ಇದೀಗ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗೆ ನಿಷೇಧ: ಕಮಲ್ ಪಂತ್