ಕೋಲಾರ: ಜಿಲ್ಲೆಯ ಕುಗ್ರಾಮದಲ್ಲಿ ಜನಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ ಕೆಆರ್ ನಂದಿನಿ 2016ನೇ ಸಾಲಿನ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೊದಲ ಶ್ರೇಯಾಂಕ ಪಡೆದ ನಂತರ ಇದೇ ಮೊದಲ ಬಾರಿಗೆ ಇಂದು ಕೋಲಾರಕ್ಕೆ ಆಗಮಿಸಿದ್ರು.
Advertisement
ಕೋಲಾರ ನಗರದಲ್ಲಿ 1 ರಿಂದ 10 ನೇ ತರಗತಿವರೆಗೆ ಓದಿದ ಚಿನ್ಮಯ ಶಾಲೆಯಲ್ಲಿ ನಂದಿನಿ ತನ್ನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಸಂತೋಷ ಹಂಚಿಕೊಂಡ್ರು. ಅಲ್ಲದೆ ತನ್ನ ವಿದ್ಯಾಭ್ಯಾಸಕ್ಕೆ ಕಾರಣೀಭೂತರಾದ ಶಿಕ್ಷಕರೆಲ್ಲರಿಗೆ ಕೆಆರ್ ನಂದಿನಿ ಅವರು ಕೃತಜ್ಞತೆಗಳನ್ನ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ನಂದಿನಿ ಅವರಿಗೆ ಚಿನ್ಮಯ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದ್ರು.
Advertisement
ಕೆಆರ್ ನಂದಿನಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನ ಕೋಲಾರದ ಚಿನ್ಮಯ ಶಾಲೆಯಲ್ಲಿ ಮುಗಿಸಿದ್ದು, ನಂತರ ಮೂಡಬಿದಿರೆಯಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಎಂಎಸ್ ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ್ರು.
Advertisement
Advertisement
ಸರಳ ಹಾಗೂ ಸಜ್ಜನಿಕೆಗೆ ಮತ್ತೊಂದು ಹೆಸರಾಗಿರೋ ನಂದಿನಿ, ಚಿಕ್ಕಂದಿನಿಂದಲೂ ಏನಾದ್ರು ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದರು. ಇಂದು ಮಕ್ಕಳೊಂದಿಗೆ ತಾವೂ ಮಗುವಾಗಿ ಬೆರೆತು ಸಂತಸ ವ್ಯಕ್ತಪಡಿಸಿದ್ರು.
ಇದೇ ವೇಳೆ ಮಾತನಾಡಿದ ಅವರು, ನಾನು ಯುಪಿಎಸ್‍ಸಿ ಟಾಪರ್ ಆದ್ರೂ ಶಾಲೆಗೆ ವಿದ್ರ್ಯಾಥಿನಿಯೇ. ವಿದ್ಯಾರ್ಥಿ ದೆಸೆಯಲ್ಲಿ ಸಿಕ್ಕ ಮೌಲ್ಯಗಳು ಇಂದು ನನ್ನನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ನಾನು ಕರ್ನಾಟಕಕ್ಕೆ ಬಂದ್ರೆ ನಾನು ಕಲಿತ ಶಾಲೆಗೆ ಭೇಟಿ ಮಾಡುವುದು ಹವ್ಯಾಸ ಎಂದ್ರು.
https://www.youtube.com/watch?v=0uWtEOTyjF8
https://www.youtube.com/watch?v=4Sx6iXwxex0