ಕ್ಲಾಸ್‍ಮೇಟ್ ಜೊತೆ ಪ್ರೀತಿ – ಕುಟುಂಬಸ್ಥರಿಗೆ ಮಾಹಿತಿ ನೀಡಿದ ಶಿಕ್ಷಕನಿಗೆ ಗುಂಡೇಟು ನೀಡಿದ ವಿದ್ಯಾರ್ಥಿ

Public TV
1 Min Read
POLICE 2

ಲಕ್ನೋ: ವಿದ್ಯಾರ್ಥಿನಿಯೊಂದಿಗಿನ ಪ್ರೀತಿ ವಿಚಾರವನ್ನು ಕುಟುಂಬಸ್ಥರಿಗೆ ತಿಳಿಸಿದ್ದಕ್ಕೆ, ಅಪ್ರಾಪ್ತ ವಿದ್ಯಾರ್ಥಿಗಳು ಶಿಕ್ಷಕರೊಬ್ಬರ ಕಾಲಿಗೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ನಡೆದಿದೆ. ಈ ಬಗ್ಗೆ ವಿದ್ಯಾರ್ಥಿಗಳು ವೀಡಿಯೋ ಒಂದನ್ನು ಹರಿಬಿಟ್ಟಿದ್ದು ನಾವು 40 ಬಾರಿ ಗುಂಡು ಹಾರಿಸಬೇಕಿತ್ತು. ಈಗ 39 ಬಾರಿ ಗುಂಡು ಹಾರಿಸುವುದು ಬಾಕಿ ಇದೆ ಎಂದು ಹೇಳಿಕೊಂಡಿದ್ದಾರೆ.

ಗುಂಡು ಹಾರಿಸಿದ ವಿದ್ಯಾರ್ಥಿಗಳನ್ನು ತರುಣ್ ಮತ್ತು ಉತ್ತಮ್ ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ತಮ್ಮನ್ನು ಗ್ಯಾಂಗ್‍ಸ್ಟರ್‌ಗಳು ಎಂದು ಆರೋಪಿತ ವಿದ್ಯಾರ್ಥಿಗಳು ಬಿಂಬಿಸಿಕೊಂಡಿದ್ದಾರೆ. ಆರು ತಿಂಗಳ ನಂತರ ಮತ್ತೆ ಹಿಂದಿರುಗುತ್ತೇವೆ. ಆಗ ಮತ್ತೆ ಗುಂಡು ಹಾರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಗಣಪತಿ ಕಟ್ಟೆಯಲ್ಲಿ ಹಸಿರು ಬಾವುಟ- ಸಮಯಪ್ರಜ್ಞೆ ಮೆರೆದ ಇನ್ಸ್‌ಪೆಕ್ಟರ್

ಖಂಡೋಲಿ ಪಟ್ಟಣದ ಕೋಚಿಂಗ್ ಸೆಂಟರ್ ಹೊರಗೆ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕ ಸುಮಿತ್ ಎಂಬವರಿಗೆ ಗುಂಡು ಹಾರಿಸಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪ ಪೊಲೀಸ್ (Police) ಆಯುಕ್ತ ಸೋನಮ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರೋಪಿತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದನ್ನೂ ಓದಿ: ಮುಂಬೈನಲ್ಲಿ ಭಾರೀ ಅಗ್ನಿ ಅವಘಡ – 6 ಮಂದಿ ಸಾವು, 40 ಮಂದಿಗೆ ಗಾಯ

Web Stories

Share This Article