ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ 15 ಲಕ್ಷ ರೂ. ಹಾಕ್ತೀವಿ ಅಂದಿದ್ರು, ಹಾಕಿದ್ರಾ ಎಂಬ ಪ್ರಶ್ನೆ ವಿಧಾನಸಭೆಯಲ್ಲಿ (Assembly) ಜಟಾಪಟಿಗೆ ಕಾರಣವಾದ ಘಟನೆ ನಡೆಯಿತು.
ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆ ಮೇಲೆ ಶಾಸಕ ಕೋನರೆಡ್ಡಿ ಮಾತನಾಡಿ, 15 ಲಕ್ಷ ಕೊಡ್ತೀವಿ, ಹಾಕ್ತೀವಿ ಅಂದಿದ್ರು, ಹಾಕಿದ್ರಾ? ಎಂದು ಪ್ರಶ್ನೆ ಮಾಡಿದರು. ಆಗ ದೇಶದ ಪ್ರಧಾನಿಗಳ ವಿರುದ್ಧದ ಈ ರೀತಿ ಮಾತಾಡೋದು ಸರಿಯಲ್ಲ ಎಂದು ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. 15 ಲಕ್ಷ ಅನ್ನೋದೇ ಇವರಿಗೆ ಉದ್ಯೋಗ ಆಗಿಬಿಟ್ಟಿದೆ. ಪ್ರಧಾನಿಗಳು 15 ಲಕ್ಷ ಅಕೌಂಟ್‌ಗೆ ಹಾಕ್ತೀನಿ ಅಂತಾ ಎಲ್ಲಿ ಹೇಳಿದ್ರು? ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಈ ವೇಳೆ ಸ್ವಿಸ್ ಬ್ಯಾಂಕ್‌ನಿಂದ ಹಣ ತಗೊಂಡು ಬರ್ತೀನಿ ಅಂದ್ರಲ್ಲ ತಂದ್ರಾ ಎಂದು ಸಚಿವ ಜಾರ್ಜ್ ಕಾಲೆಳೆದರು. ಜಾರ್ಜ್ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಿನ್ನ ಹೆಂಡ್ತಿಗೂ ಫ್ರೀ, ನನ್ ಹೆಂಡ್ತಿಗೂ ಫ್ರೀ, ಕಾಕಾ ಪಾಟೀಲ್ ಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಅಂದ್ರಲ್ಲ ಕೊಟ್ರಾ ಎಂದು ಯತ್ನಾಳ್ ಹಾಗೂ ಬಿಜೆಪಿ ಸದಸ್ಯರು ಆಕ್ರೋಶ ಹೊರ ಹಾಕಿದರು. ಇದೇ ವೇಳೆ ಪದೇ ಪದೇ ಪ್ರಧಾನಿಗಳ ಬಗ್ಗೆ ಮಾತಾಡೋದು ಸರಿಯಲ್ಲ ಎಂದು ಶಾಸಕ ವಿಜಯೇಂದ್ರ ಕಿಡಿಕಾರಿದರು. ಇದನ್ನೂ ಓದಿ: ನನ್ನ ಮೇಲೆ ಲಾರಿ ಹತ್ತಿಸ್ತೀನಿ ಅಂತಾರೆ: ವಿಧಾನಸಭೆಯಲ್ಲಿ ಶಾಸಕಿ ಅಳಲು
ಇನ್ನೊಂದೆಡೆ ಯತ್ನಾಳ್ ಅವರೇ ನಿಮ್ಮನಂತೂ ವಿರೋಧ ಪಕ್ಷದ ನಾಯಕರಾಗಿ ಮಾಡಲ್ಲ ಎಂದು ಸಚಿವ ಕೆಎನ್ ರಾಜಣ್ಣ ಕಿಚಾಯಿಸಿದರೆ. ಇದೇ ವೇಳೆ ವಿಧಾನಸಭೆಯಲ್ಲಿ ವರ್ಗಾವಣೆ ರೇಟ್ ಕಾರ್ಡ್ ಜಟಾಪಟಿ ಕೂಡ ನಡೆಯಿತು. ವರ್ಗಾವಣೆ ರೇಟ್ ಕಾರ್ಡ್ ಯತ್ನಾಳ್ ಮೆನು ಕಾರ್ಡ್ ಎಂದು ಕೋನರೆಡ್ಡಿ ಟಕ್ಕರ್ ಕೊಟ್ಟರು. ದಾಖಲೆ ಕೊಡ್ರಿ ಎಂದು ಯತ್ನಾಳ್ ಗರಂ ಆದಾಗ, ದಾಖಲೆ ಕೊಡ್ತೀವಿ, ನೀವು ಮಾತಾಡಿಲ್ಲವಾ ಎಂದು ಕೋನರೆಡ್ಡಿ ತಿರುಗೇಟು ಕೊಟ್ಟರು. ಇದನ್ನೂ ಓದಿ: ಪೆನ್‌ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ಸಿನವರಿಂದಲೇ ತಡೆ – ಕೈ ಒಳಜಗಳಕ್ಕೆ ಬೆಂಕಿ ಹಚ್ಚಿದ ಹೆಚ್‌ಡಿಕೆ
Web Stories