ಕರಾವಳಿ ಬ್ಯೂಟಿ ಕೃತಿ ಶೆಟ್ಟಿ, ಕೆರಿಯರ್ ಹೊಸತರಲ್ಲೇ ಸೂಪರ್ ಸಕ್ಸಸ್ ಕಂಡಿರುವ ನಟಿ. ಆದರೆ ಇತ್ತೀಚೆಗೆ ಕೃತಿ ನಟಿಸಿರುವ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಗೋಲ್ಡನ್ ಲೆಗ್ ನಟಿ ಎಂದು ಕರೆದ ನೆಟ್ಟಿಗರೇ ಈಗ ಐರೆನ್ ಲೆಗ್ ನಾಯಕಿ ಅಂತಾ ಕರೆಯುತ್ತಿದ್ದಾರೆ.
`ಸೂಪರ್ 30′ ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ತೆರೆಹಂಚಿಕೊಂಡ ಬ್ಯೂಟಿ ಕೃತಿ ಶೆಟ್ಟಿ, ಬಳಿಕ `ಉಪ್ಪೇನಾ’ ಚಿತ್ರದ ಯಶಸ್ಸಿನ ನಂತರ ಸೌತ್‌ನ ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗಿ ಹಿಟ್ ನಟಿ ಎನಿಸಿಕೊಂಡ್ರು. ಈಗ ಇತ್ತೀಚೆಗೆ ಕೃತಿ ನಟಿಸಿರುವ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ಹಾಗಾಗಿ ನಟಿಯ ಚಿತ್ರಗಳ ಸೋಲಿಗೆ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಸೋನು ಶ್ರೀನಿವಾಸ್ ಗೌಡಗೆ ಟ್ರೋಲ್ ಆಗಿ ಫೇಮಸ್ ಆಗುವ ಆಸೆ: ಉದಯ್ ಸೂರ್ಯ



