ನವದೆಹಲಿ: ಜಿ20 ಶೃಂಗಸಭೆಯಲ್ಲಿ (G20 Summit) ಭಾರತ ತನ್ನ ಡಿಜಿಟಲ್ ಸಾಮಥ್ರ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಸಜ್ಜಾಗಿದೆ. ಸುಮಾರು 1,000 ವಿದೇಶಿ ಪ್ರತಿನಿಧಿಗಳಿಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ತಂತ್ರಜ್ಞಾನದ ಅನುಭವ ನೀಡಲು ತಯಾರಿ ಮಾಡಿಕೊಂಡಿದೆ.
ಯುಪಿಐ ವಹಿವಾಟುಗಳನ್ನು ಮಾಡಲು ಬಯಸುವ ವಿದೇಶಿ ಪ್ರತಿನಿಧಿಗಳಿಗೆ ಅವರ ಯುಪಿಐ ವ್ಯಾಲೆಟ್‍ಗಳಲ್ಲಿ 500-1,000 ರೂ. ನೀಡಲಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಸರ್ಕಾರ ಸುಮಾರು 10 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಿ20 ಸಭೆಗೆ ವಿದೇಶಿ ಗಣ್ಯರ ಆಗಮನ – ಹಿಂಡನ್ ಏರ್ ಬೇಸ್‍ನಲ್ಲಿ ಭಾರೀ ಭದ್ರತೆ
Advertisement
Advertisement
UPI ಭಾರತದಲ್ಲಿ ಮೊಬೈಲ್ ಆಧಾರಿತ ತ್ವರಿತ ಪಾವತಿ ವ್ಯವಸ್ಥೆಯಾಗಿದ್ದು, ಗ್ರಾಹಕರು ವರ್ಚುವಲ್ ಪಾವತಿ ವಿಳಾಸವನ್ನು ಬಳಸಿಕೊಂಡು 24/7 ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಜಾಗತೀಕರಿಸುವಲ್ಲಿ ಭಾರತ ಸರ್ಕಾರ ಮತ್ತು ಆರ್‌ಬಿಐ ಪ್ರಮುಖ ಪಾತ್ರವಹಿಸಿದೆ. ಇದನ್ನೂ ಓದಿ: ಜಿ20ಯಲ್ಲಿ ಭಾಗಿಯಾಗುವ ಗಣ್ಯರಿಗೆ ಭವ್ಯ ಭೋಜನ – ಚಿನ್ನ, ಬೆಳ್ಳಿ ಲೇಪಿತ ತಟ್ಟೆಯಲ್ಲಿ ಊಟದ ವ್ಯವಸ್ಥೆ
Advertisement
Advertisement
UPI ಪ್ರಯೋಜನಗಳು ಭಾರತವನ್ನು ಮೀರಿ ವಿಸ್ತರಿಸುವುದನ್ನು ಖಚಿತಪಡಿಸುತ್ತದೆ. ಶ್ರೀಲಂಕಾ, ಫ್ರಾನ್ಸ್, ಯುಎಇ ಮತ್ತು ಸಿಂಗಾಪುರದಂತಹ ದೇಶಗಳು ಫಿನ್‍ಟೆಕ್ ಮತ್ತು ಪಾವತಿ ಪರಿಹಾರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷದ ಆರಂಭದಲ್ಲಿ ಏಪ್ರಿಲ್‍ನಲ್ಲಿ ಜಿ20 ರಾಷ್ಟ್ರಗಳಿಂದ ಒಳಬರುವ ಪ್ರಯಾಣಿಕರಿಗೆ ಯುಪಿಐ ಆಧಾರಿತ ಪಾವತಿಗಳನ್ನು ಪರಿಚಯಿಸಿತು. ಇದನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ಭಗವದ್ಗೀತೆಯ ನೀತಿಗಳನ್ನು ಹರಡಲಿರುವ ಗೀತಾ ಅಪ್ಲಿಕೇಷನ್!
Web Stories