ಜಗತ್ತಿನ ಬುದ್ಧಿವಂತ ಡೈರೆಕ್ಟರ್ ಲಿಸ್ಟ್‌ನಲ್ಲಿರುವ ಉಪೇಂದ್ರ (Upendra) ನಿರ್ದೇಶನದ ಸಿನಿಮಾ ಅಂದರೆ ಇಡೀ ಜಗತ್ತೇ ಕುತೂಹಲದಿಂದ ಕಾದಿರುತ್ತೆ. ಹೀಗಾಗೇ ಯುಐ ಚಿತ್ರದ (UI Cinema) ಮೇಲೆ ಇನ್ನಿಲ್ಲದ ನಿರೀಕ್ಷೆ ಶುರುವಾಗಿದೆ. ಇದೀಗ ಬಿಡುಗಡೆ ಹೊಸ್ತಿಲಲ್ಲಿರುವ ಚಿತ್ರತಂಡ ದೇಶಾದ್ಯಂತ ಭರ್ಜರಿ ಪ್ರಚಾರ ಮಾಡುತ್ತಿದೆ. ಇದೀಗ ಮುಂಬೈನಲ್ಲೂ (Mumbai) ಯುಐ ಹವಾ ಶುರುವಾಗಿದೆ.
Advertisement
ಭಾರೀ ಬಜೆಟ್‌ನಲ್ಲಿ ತಯಾರಾದ ಯುಐ ವಿಸ್ಮಯ ಜಗತ್ತನ್ನು ಕಣ್ತುಂಬಿಕೊಳ್ಳಲು ಬಾಲಿವುಡ್ ಕೂಡ ಕಾದು ಕುಳಿತಿದೆ. ಅದರಲ್ಲೂ ಅಮಿರ್ ಖಾನ್ ಖುದ್ದು ವೀಡಿಯೋ ಮಾಡಿ ಯುಐಗೆ ವಿಶ್ ಮಾಡಿ ಸಿನಿಮಾ ನೋಡುವ ಕುತೂಹಲ ಹೊರಹಾಕಿದ ಮೇಲಂತೂ ಸಿನಿಮಾದ ಮೇಲೆ ಬಾಲಿವುಡ್ ಮಂದಿಯ ಕುತೂಹಲ ಹೆಚ್ಚಾಗಿದ್ದು, ಮಹಾರಾಷ್ಟ್ರದಾದ್ಯಂತ ಹೆಚ್ಚಿನ ಸ್ಕ್ರೀನ್‌ನಲ್ಲಿ ಹಿಂದಿ ಭಾಷೆಯಲ್ಲೂ ಯುಐ ತೆರೆಕಾಣುತ್ತದೆ. ಇದನ್ನೂ ಓದಿ: ಚಿಕಿತ್ಸೆಗಾಗಿ ಅಮೆರಿಕಗೆ ತೆರಳುವ ಮುನ್ನ ಶಿವಣ್ಣ ಭಾವುಕ
Advertisement
Advertisement
ಮುಂಬೈ ನಗರದಲ್ಲಿ ಯುಐ ಚಿತ್ರದ ಕುರಿತು ಮಾಹಿತಿ ನೀಡಿರುವ ಉಪೇಂದ್ರ & ಟೀಮ್‌ಗೆ ಭಾರೀ ಬೆಂಬಲ ವ್ಯಕ್ತವಾಗಿದೆ. ಉಪ್ಪಿಯ ಡೈರೆಕ್ಷನ್ ಸಿನಿಮಾ ನೋಡಲು ಬಾಲಿವುಡ್ ಮಂದಿ ಕಾದಿದ್ದಾರೆ. ಹಿಂದಿಯ ಹಂಚಿಕೆ ಹಕ್ಕನ್ನು ಝೀ ಪಿಕ್ಚರ್ಸ್ ಪಡೆದಿದ್ದು, ಬಹುಸಂಖ್ಯೆಯ ಹಿಂದಿ ಸ್ಕ್ರೀನ್‌ಗಳಲ್ಲಿ ಯುಐ ತೆರೆಕಾಣಲಿದೆ. ಇದನ್ನೂ ಓದಿ: ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್?
Advertisement