‘ಯುಐ’ ಟೀಮ್ ಜೊತೆ ನಟ ಉಪೇಂದ್ರ (Upendra) ಇಂದು (ಡಿ.3) ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕೊರಗಜ್ಜ ದೈವ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಬಳಿಕ ಮಂಗಳೂರಿನಲ್ಲಿ ‘ಯುಐ’ (UI) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ, ಕಂಟೆಂಟ್ ಇರುವ ಸಿನಿಮಾವನ್ನು ಜನ ಕೈಬಿಡೋದಿಲ್ಲ ಎಂದಿದ್ದಾರೆ.
ಉಪೇಂದ್ರ ಮಾತನಾಡಿ, ಕಂಟೆಂಟ್ ಇರುವ ಸಿನಿಮಾವನ್ನು ಪ್ರೇಕ್ಷಕರು ಎಂದು ಕೈಬಿಡೋದಿಲ್ಲ. ಹಾಗಂತ ಓಡದೇ ಇರುವ ಸಿನಿಮಾವೆಲ್ಲ ಚೆನ್ನಾಗಿಲ್ಲ ಎಂದು ಕೂಡ ನಾನು ಹೇಳಲ್ಲ. ಅದಕ್ಕೆ ಹಲವಾರು ಕಾರಣವಿದೆ. ಕೆಲವರಿಗೆ ಪಬ್ಲಿಸಿಟಿ ಮಾಡಲು ಆಗದೇ ಇರಬಹುದು ಎಂದಿದ್ದಾರೆ.
ಲಹರಿ ಸಂಸ್ಥೆಯ ರೂವಾರಿ ಲಹರಿ ವೇಲು (Lahari Velu) ಮಾತನಾಡಿ, ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರೆಸ್ ಮೀಟ್ ಮಾಡುತ್ತಿದ್ದೇವೆ. ಇಂದು ಕಟೀಲು ದೇವಿ ಮತ್ತು ಕೊರಗಜ್ಜ ದೈವ ದರ್ಶನ ಪಡೆದಿದ್ದೇವೆ. ಮಂಗಳೂರಿನಲ್ಲಿ ಪಾಸಿಟಿವ್ ವೈಬ್ ಇದೆ. ಇಲ್ಲಿ ದೇವರ ದರ್ಶನ ಮಾಡಿದ್ಮೇಲೆ ಮತ್ತಷ್ಟು ಪಾಸಿಟಿವ್ ವೈಬ್ ಸಿಕ್ಕಿದೆ. ಇದೇ ಡಿ.20ರಂದು ಐದು ಭಾಷೆಗಳಲ್ಲಿ ‘ಯುಐ’ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಬೆಂಬಲಿಸಿ ಎಂದು ಮಾತನಾಡಿದರು.
ಅಂದಹಾಗೆ, AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.