ನಟ ಉಪೇಂದ್ರ (Upendra) ಹುಟ್ಟುಹಬ್ಬದ ಪ್ರಯುಕ್ತ ಇಂದು (ಸೆ.18) ‘ಯುಐ’ (UI) ಸಿನಿಮಾದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಘೋಷಣೆ ಮಾಡಿದೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಅವರು ಯುಐ ಸಿನಿಮಾದ ವಿಶೇಷತೆಯ ಬಗ್ಗೆ ಮಾತನಾಡಿದ್ದಾರೆ. ‘ಯುಐ’ ಸಿನಿಮಾ ಸೈಕಾಲಜಿಕಲ್ ಕಲ್ಕಿ ಎಂದು ನಟ ಬಣ್ಣಿಸಿದ್ದಾರೆ. ಇದನ್ನೂ ಓದಿ:400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್, ಅದಿತಿ
Advertisement
ಉಪೇಂದ್ರ ಅವರು ಹಲವು ವರ್ಷಗಳ ನಂತರ `ಯುಐ’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಹಾಗಾಗಿ ಡೈರೆಕ್ಷನ್ ಕುರಿತು ನಟ ಮಾತನಾಡಿ, ನಾನು ಬೇಕಾದ್ರೆ ಐದಾರು ಮದುವೆ ಆಗಿ ಬಿಡ್ತೀನಿ ಆದರೆ ಮದುವೆಗಿಂತ ಡೈರೆಕ್ಷನ್ ಡೇಂಜರ್ ಅಂತ ತಮಾಷೆಯಾಗಿ ಮಾತನಾಡಿದ್ದಾರೆ. ಆಲ್ ಮೋಸ್ಟ್ ಎರಡೂವರೆ ವರ್ಷಗಳ ಕಾಲ ಯುಐಗೆ ಕೆಲಸ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿ ಚೇರ್ಗೆ ಬೇಡಿಕೆ ಇಟ್ಟ ದರ್ಶನ್ – `ದಾಸ’ನ ಆಸೆಗೆ ತಣ್ಣೀರು ಎರಚಿದ ಜೈಲಧಿಕಾರಿಗಳು
Advertisement
Advertisement
ವಿಸುವಲ್ಸ್ ನೋಡಿ ಯುರೋಪ್ನಲ್ಲಿ ಮ್ಯೂಸಿಕ್ ಮಾಡಬೇಕು ಎಂದರು ಅಜನೀಶ್. ಅವರು ಕೆಲಸದಲ್ಲಿ ಅಷ್ಟು ಡೆಡಿಕೇಟಿವ್ ಎಂದಿದ್ದಾರೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರು ಎನರ್ಜಿ ಬಂಡಲ್ ಇದ್ದಂಗೆ ಎಂದು ಮಾತನಾಡಿದ್ದಾರೆ ಉಪೇಂದ್ರ. ಮುಂಚೆ ಹಾಗೆ ಸಿನಿಮಾ ಮೇಕಿಂಗ್ ಇಲ್ಲ. ಟೆಕ್ನಾಲಿಜಿ ಚೇಂಜ್ ಆಗ್ತಿದಂತೆ ಮೇಕಿಂಗ್ ಸ್ಟೈಲ್ ಬದಲಾಗಿದೆ. ಆಗ ಸಿನಿಮಾ ತಂಡ ಮೂರು ದಿನದಲ್ಲೇ ಸಾಂಗ್ ಮಾಡೋರು, ಇವತ್ತು 10 ದಿನ ತಗೊಳುತ್ತೆ ಎಂದಿದ್ದಾರೆ. ನೀವೆಲ್ಲ ಅತೀ ಬುದ್ದಿವಂತರು ಅಂತ ಯುಐ ಸಿನಿಮಾ ಮಾಡಿದ್ದೀನಿ. ಅಭಿಮಾನಿ ದೇವರು ಯೆಸ್ ಅಂದರೆ ಸಾಕು ಆ ಸಿನಿಮಾ ಸೂಪರ್ ಹಿಟ್. ಪ್ರತಿಯೊಬ್ಬರು ಈಗ ಟೆಕ್ನಿಷಿಯನ್ಸ್ ಆಗಿದ್ದಾರೆ ಅವರಿಗೆ ತಕ್ಕಂತೆ ಸಿನಿಮಾ ಕೊಡಬೇಕು ಎಂದಿದ್ದಾರೆ.
Advertisement
ಯುಐ ಸಿನಿಮಾ ಇದು ಸೈಕಾಲಜಿಕಲ್ ‘ಕಲ್ಕಿ’ ಎಂದು ಚಿತ್ರವನ್ನು ನಟ ಬಣ್ಣಿಸಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳು ಬರೋವಾಗ ಗ್ಯಾಪ್ ಇರಬೇಕಾಗುತ್ತದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮಾಡ್ತಿದ್ದೀವಿ ಅದಕ್ಕೆ ಸಿನಿಮಾ ತಡವಾಗುತ್ತಿದೆ. ಈ ಸಿನಿಮಾ ಆದ್ಮೇಲೆ ವರ್ಷಕ್ಕೆ ಎರಡು ಸಿನಿಮಾ ಮಾಡ್ತೀನಿ. ನಮ್ಮ ಸಿನಿಮಾವನ್ನು ಹುಳ ಬಿಡೋದು ಅಂತಾರಲ್ಲ. ಇದೊಂದು ಸಿನಿಮಾ ಹುಳ ತೆಗಿಬೇಕಂತ ಮಾಡಿದ್ದೀನಿ ಎಂದು ಮಾತನಾಡಿದ್ದಾರೆ.