Bengaluru CityCinemaDistrictsKarnatakaLatestMain PostSandalwood

ʻಕಬ್ಜʼ ಶೂಟಿಂಗ್:‌ ಮಂಗಳೂರಿನಲ್ಲಿ ಉಪೇಂದ್ರ ಆ್ಯಂಡ್ ಟೀಮ್

ಲವಾರು ವಿಚಾರಗಳಿಂದ ಸುದ್ದಿ ಮಾಡ್ತಿರೋ ಸ್ಯಾಂಡಲ್‌ವುಡ್ ನಿರೀಕ್ಷಿತ `ಕಬ್ಜ’ ಸಿನಿಮಾ. ಕೊನೆಯ ಹಂತದ ಶೂಟಿಂಗ್‌ಗಾಗಿ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ. ಆರ್.ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‌ನಲ್ಲಿ ಕಬ್ಜ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ನಟನೆಯ `ಕಬ್ಜ’ ಚಿತ್ರ ರಿಲೀಸ್‌ಗೂ ಮುಂಚೆನೇ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. 70-80ರ ದಶಕದ ಅಂಡರ್‌ವರ್ಲ್ಡ್ ಕಥೆಯನ್ನ ಹೇಳೋಕೆ ನಿರ್ದೇಶಕ ಆರ್.ಚಂದ್ರು ಹೊರಟಿದ್ದಾರೆ. `ಕಬ್ಜ’ ಸಿನಿಮಾ ಕೊನೆಯ ಹಂತದಲ್ಲಿದ್ದು, ಆ್ಯಕ್ಷನ್ ಸೀನ್ಸ್ ಅನ್ನು ಮಂಗಳೂರಿನಲ್ಲಿ ಶೂಟಿಂಗ್ ಮಾಡಲಾಗುತ್ತಿದೆ. ಆ್ಯಕ್ಷನ್ ದೃಶ್ಯದ ಸಾರಥ್ಯವನ್ನು ಫೈಟ್ ಮಾಸ್ಟರ್ ರವಿವರ್ಮ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಪ್ಯಾನ್ ಇಂಡಿಯಾ ಚಿತ್ರವಾಗಿರುವ `ಕಬ್ಜ’ಗಾಗಿ ಮಸ್ತ್ ಜಬರ್‌ದಸ್ತ್ ಆ್ಯಕ್ಷನ್ ದೃಶ್ಯಗಳನ್ನು ರವಿವರ್ಮ ಕಂಪೋಸ್ ಮಾಡಿದ್ದಾರೆ. ಕಳೆದ ವಾರದಿಂದ ಮಂಗಳೂರಿನಲ್ಲಿ ಬೀಡು ಬಿಟ್ಟಿರುವ ಉಪೇಂದ್ರ ಮತ್ತು ಟೀಮ್ ಮೇ 20ರವರೆಗೆ ಶೂಟಿಂಗ್ ಮಾಡಲಿದ್ದಾರೆ. ಈ ಭಾಗದ ಶೂಟಿಂಗ್ ಮುಗಿದರೆ ʻಕಬ್ಜʼ ಚಿತ್ರದ ಶೂಟಿಂಗ್ ಮುಗಿಯುತ್ತದೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಸ್ವೀಕರಿಸುವಾಗ ಹಾಕಿದ್ದ ಬಟ್ಟೆಯನ್ನೇ ಕಾನ್ ಫೆಸ್ಟಿವಲ್‌ನಲ್ಲೂ ಧರಿಸಿದ ರಿಕ್ಕಿ – ಹೇಳಿದ್ದೇನು ಗೊತ್ತಾ?

 

View this post on Instagram

 

A post shared by Ravi Varma (@official_ravivarma)

`ಕಬ್ಜ’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರಗೆ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಚಿತ್ರದ ನಾಯಕಿಯಾಗಿ ಬಹುಭಾಷಾ ನಟಿ ಶ್ರೀಯಾ ನಟಿಸಿದ್ದಾರೆ. ಚಿತ್ರದ ಪೋಸ್ಟರ್ ಲುಕ್ಕಿನಿಂದಲೇ ಗಮನ ಸೆಳೆದಿರೋ `ಕಬ್ಜ’ ಈ ವರ್ಷದ ಕೊನೆಯಲ್ಲಿ ತೆರೆಗೆ ಅಪ್ಪಳಿಸಲಿದೆ.

Leave a Reply

Your email address will not be published.

Back to top button