ಉಪೇಂದ್ರ ರಾಜಕೀಯ ಎಂಟ್ರಿಗೆ ಯಶ್ ಹೇಳಿದ್ದು ಹೀಗೆ

Public TV
2 Min Read
uppi yash bb

ಬೆಂಗಳೂರು: ನಾನು ಉಪೇಂದ್ರ ಅವರ ಸ್ಪೂರ್ತಿಯಿಂದ ಸಿನಿಮಾರಂಗಕ್ಕೆ ಬಂದವನು. ಅವರು ಯಾವತ್ತೋ ರಾಜಕಾರಣಕ್ಕೆ ಬರಬೇಕಿತ್ತು, ತುಂಬಾ ತಡ ಮಾಡಿದ್ದಾರೆ. ಬದುಕನ್ನು ಕಟ್ಟಿಕೊಳ್ಳುವುದಕ್ಕೋಸ್ಕರ ಸಿನಿಮಾಗೆ ಬಂದಿರಬಹುದು. ಆದರೆ ಸಾರ್ವಜನಿಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕು ಎಂಬ ಕನಸುಗಳನ್ನು ಹೊಂದಿದ್ದಾರೆ ಎಂದು ನಟ ಯಶ್ ಹೇಳಿದರು.

ಜನರ ಕಲ್ಪನೆಯಲ್ಲಿ ರಾಜಕೀಯ ಎಂದರೆ ಒಂದು ವ್ಯವಸ್ಥಿತವಾದ ಭ್ರಷ್ಟಾಚಾರದ ವ್ಯವಸ್ಥೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಉಪ್ಪಿ ಸರ್ ಕಲ್ಪನೆಯಲ್ಲಿ ಅದೊಂದು ವಿಭಿನ್ನವಾದ ಜಗತ್ತು, ಅವರ ಕನಸುಗಳು ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಿದೆ. ಈಗಾಗಲೇ ಸಾಕಷ್ಟು ಬಾರಿ ಪರೋಕ್ಷವಾಗಿ ಮತ್ತು ಸಿನಿಮಾಗಳ ಮೂಲಕ ತಮ್ಮ ಕನಸುಗಳನ್ನು ಜನರ ಬಳಿ ತಲುಪಿಸಿದ್ದಾರೆ. ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ `ಪ್ರಜಾಕಾರಣ’ದ ಮೇಲೆ ನನಗೆ ನಂಬಿಕೆಯಿದೆ ಅಂದ್ರು.

ಲೀಡರ್ V/S ಕಾರ್ಮಿಕ: ಲೀಡರ್ ಮತ್ತು ವರ್ಕರ್ ಗೆ ತುಂಬಾ ವ್ಯತ್ಯಾಸವಿಲ್ಲ. ನನ್ನರ್ಥದಲ್ಲಿ ಇಬ್ಬರೂ ಒಂದೇ ಆಗಿರುತ್ತಾರೆ. ಕೆಲಸ ಮಾಡಿ ಎನ್ನುವವನು ಎಂದಿಗೂ ಲೀಡರ್ ಆಗಲ್ಲ. ನಾವೆಲ್ಲ ಮಾಡೋಣ ಎಂದವರು ಮಾತ್ರ ಲೀಡರ್ ಆಗ್ತಾರೆ. ಲೀಡರ್ ಏನು ಮಾಡ್ತಾನೆ, ಅದನ್ನೇ ಹಿಂಬಾಲಕರು ಅನುಸರಿಸುತ್ತಾರೆ. ಹಾಗಾಗಿ ಲೀಡರ್ ಸಹ ಕಾರ್ಮಿಕನಾಗಿ ಕೆಲಸ ಮಾಡಿದರೆ ಮಾತ್ರ ಕೈಗೊಂಡಿರುವ ಕೆಲಸ ಯಶ್ವಸಿಯಾಗುತ್ತದೆ.

ಇದನ್ನೂ ಓದಿ: ಉಪ್ಪಿ ರಾಜಕಾರಣಕ್ಕೆ ಎಂಟ್ರಿ-ಹೇಗಿರಲಿದೆ ಉಪ್ಪಿ ಪಕ್ಷ? ಇಲ್ಲಿದೆ ಉತ್ತರ

upendra

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಪ್ರಜಾಕೀಯದ ಹೊಂಬೆಳಕು-ಐಡಿಯಾಲಜಿ ಬಗ್ಗೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಉಪ್ಪಿ ಹೀಗಂದ್ರು

ಈಗ ಯಾರೊಬ್ಬ ವ್ಯಕ್ತಿ ವ್ಯವಸ್ಥೆಯನ್ನು ಚೇಂಜ್ ಮಾಡ್ತಿನಿ ಎಂದು ಬರ್ತಾರೆ. ಹೀಗೆ ಬಂದವರಿಗೆ ಒಂದು ಅವಕಾಶವನ್ನು ನೀಡಬೇಕಾಗುತ್ತದೆ. ಸೋಲು ಗೆಲುವು ಎಂಬವುದು ಎಲ್ಲ ರಂಗಗಳಲ್ಲೂ ಇರುತ್ತದೆ. ಉಪ್ಪಿ ಅವರ ಬಳಿ ಸಾಕಷ್ಟು ಐಡಿಯಾಗಳಿವೆ. ಚೇಂಜ್ ಮಾಡಲು ಬಂದವರು ತಮ್ಮ ಪ್ರಯತ್ನ ಮಾಡಲಿ. ಪ್ರಾರಂಭದ ಹಂತದಲ್ಲಿಯೇ ಅವರಿಗೆ ಭಯಪಡಿಸುವ ವಾತವಾರಣವನ್ನು ನಿರ್ಮಿಸುವುದು ತಪ್ಪಾಗುತ್ತದೆ ಎಂದು ಉಪ್ಪಿಗೆ ಯಶ್ ನೈತಿಕ ಬೆಂಬಲ ಸೂಚಿಸಿದರು.

ರಾಜಕೀಯವನ್ನು ಚೇಂಜ್ ಮಾಡಿ, ಅದರಲ್ಲಿ ಬದಲಾವಣೆಯ ಹೊಸತನವನ್ನು ತರಲು ಉಪ್ಪಿ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ಸಿನಿಮಾಗಳೆಂದರೆ ತುಂಬಾ ಇಷ್ಟ. ಉಪ್ಪಿಯವರ ಐಡಿಯಾಗಳಿಗೆ ಹೊಂದಿಕೊಳ್ಳವರು ಅವರ ಜೊತೆ ಸೇರಿಕೊಂಡು ಕೆಲಸ ಮಾಡಲಿ ಅಂದ್ರು.

UPPINDRA

ರಾಜಕಾರಣ ಕಷ್ಟದ ದಾರಿ: ಉಪೇಂದ್ರ ಆಯ್ಕೆ ಮಾಡಿಕೊಂಡಿರುವ ದಾರಿ ತುಂಬಾ ಕಷ್ಟವಾದದ್ದು, ರಾಜಕೀಯದಲ್ಲಿ ನೀವು ಹೊಸತನ ತರುತ್ತೀರಿ ಎಂಬ ನಂಬಿಕೆಯಿದೆ. ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ಯಾರೇ ಆಗಲಿ ನಾನೊಂದು ಒಳ್ಳೆಯ ಕೆಲಸ ಮಾಡ್ತಿನಿ ಎಂದು ಬರುವವರಿಗೆ ನನ್ನ ಬೆಂಬಲ ಯಾವಾಗಲೂ ಇರುತ್ತದೆ ಎಂದು ಯಶ್ ತಿಳಿಸಿದರು.

https://www.youtube.com/watch?v=ZO-DYDHeKHM

https://www.youtube.com/watch?v=bZaGWvf-YS8

Share This Article
Leave a Comment

Leave a Reply

Your email address will not be published. Required fields are marked *