ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿದ ಸಿನಿಮಾಗಳಿಗೆ ಕ್ರೇಜ್ ಇರುತ್ತೋ ಇಲ್ಲವೋ. ಆದ್ರೆ, ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳಿದ್ದಾರೆ, ಅಂದ್ರೆ ಇಡೀ ಇಂಡಸ್ಟ್ರಿ ಆ ಸಿನಿಮಾಗಾಗಿ ಎದುರು ನೋಡುತ್ತಿರುತ್ತೆ ಅನ್ನೋ ಮಾತು ಸಹಜ. ಸಿನಿ ಪ್ರೇಮಿಗಳಂತೂ ಆ ಸಿನಿಮಾವನ್ನ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಈದೀಗ ಉಪೇಂದ್ರ ನಟಿಸಿ ನಿರ್ದೇಶಿಸಿರುವ `ಯುಐ’ ಚಿತ್ರದ (UI Cinema) ಕನ್ನಡದ ಹಂಚಿಕೆ ಹಕ್ಕನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ಭಾರೀ ಮೊತ್ತಕ್ಕೆ ಪಡೆದುಕೊಂಡಿದೆ.
ಕನ್ನಡದ ಬಹುಕೋಟಿ ಬಜೆಟ್ ಚಿತ್ರ ಡಿಸೆಂಬರ್ 20ಕ್ಕೆ ಬಹುಭಾಷೆಯಲ್ಲಿ ವಿಶ್ವಾದ್ಯಂತ ರಿಲೀಸ್ ಆಗಲಿದ್ದು ಚಿತ್ರವನ್ನು ಲಹರಿ ಫಿಲಮ್ಸ್ (Lahari Films) ಹಾಗೂ ವೀನಸ್ ಎಂಟರ್ಟೈನರ್ಸ್ ಅಡಿಯಲ್ಲಿ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್ ನಟಿ
ಚಿತ್ರದ ಇತರೆ ಭಾಷೆಯ ಹಂಚಿಕೆ ಹಕ್ಕುಗಳು ಈಗಾಗ್ಲೇ ಬಹುಕೋಟಿಗೆ ಸೇಲ್ ಆಗಿದೆ, ಮಲಯಾಳಂ ಹಂಚಿಕೆ ಹಕ್ಕನ್ನ ಸಿ.ಜೆ ರಾಯ್ ಪಡೆದುಕೊಂಡ್ರೆ, ತಮಿಳಿನಲ್ಲಿ ಎ.ಪಿ ಇಂಟರ್‌ನ್ಯಾಷನಲ್ ಫಿಲಮ್ಸ್ ಶನ್ ಹಂಚಿಕೆಯನ್ನ ತಮ್ಮದಾಗಿಸಿಕೊಂಡಿದೆ. ತೆಲುಗಿನಲ್ಲಿ ಅಲ್ಲು ಅರವಿಂದ್ ಒಡೆತನದ ಗೀತಾ ಆರ್ಟ್ಸ್ ಸಂಸ್ಥೆ ಹಂಚಿಕೆ ಹಕ್ಕುಪಡೆದುಕೊಂಡಿದೆ. ಹಿಂದಿ ಭಾಷೆಯಲ್ಲೂ ಹಂಚಿಕೆಯ ಹಕ್ಕು ಮಾರಾಟವಾಗಿದ್ದು ನಾಳೆ (ನ.25) ಘೋಷಣೆಯಾಗಲಿದೆ.
ಇದೀಗ ವಿವಿಧ ಭಾಷೆಗಳ ಬಿಗ್ ಬಜೆಟ್ ಸಿನಿಮಾಗಳ ಹಂಚಿಕೆ ಹಕ್ಕು ಪಡೆದು ಹೆಸರುವಾಸಿಯಾಗಿರುವ, ಸದ್ಯಕ್ಕೆ ಟಾಕ್ಸಿಕ್ ಚಿತ್ರ ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ವಿಶಾಲ ಕರ್ನಾಟಕಕ್ಕೆ `ಯುಐ’ ಹಂಚಿಕೆ ಮಾಡುವ ಹಕ್ಕನ್ನು ದಾಖಲೆ ಮೊತ್ತಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ: ಬಿಗ್ ಬಿ ಮೊಮ್ಮಗನ ಜೊತೆ ಸುಹಾನಾ ಖಾನ್ ಫೋಟೋ ವೈರಲ್- ಡೇಟಿಂಗ್ ಬಗ್ಗೆ ಶುರುವಾಯ್ತು ಚರ್ಚೆ