ದಿನದಿಂದ ದಿನಕ್ಕೆ ವಿಕ್ರಾಂತ್ ರೋಣ ಸಿನಿಮಾದ ಅಬ್ಬರ ಹೆಚ್ಚಾಗುತ್ತಿದೆ. ದೇಶಾದ್ಯಂತ ಭರ್ಜರಿ ಪ್ರಚಾರವನ್ನೇ ಚಿತ್ರತಂಡ ಕೈಗೊಂಡಿದೆ. ಅದರಲ್ಲೂ ದೇಶದ ನಾನಾ ಭಾಗಗಳಲ್ಲಿ ಇವೆಂಟ್ ಆಯೋಜನೆ ಮಾಡಲಾಗುತ್ತಿದೆ. ಇದೇ ಶುಕ್ರವಾರ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಬೆಂಗಳೂರಿನಲ್ಲಿ ಇವೆಂಟ್ ಆಯೋಜನೆ ಮಾಡಿದ್ದರು ನಿರ್ಮಾಪಕರು. ಈ ಕಾರ್ಯಕ್ರಮಕ್ಕೆ ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಉಪೇಂದ್ರ, ಇಬ್ಬರು ಸ್ಟಾರ್ ನಟರನ್ನು ತಮ್ಮದೇ ಆದ ರೀತಿಯಲ್ಲಿ ಹೋಲಿಕೆ ಮಾಡಿಕೊಂಡರು. ಕೆಜಿಎಫ್ ಸಿನಿಮಾದ ಮೂಲಕ ಯಶ್ ಇಂಡಿಯಾ ಬಾಕ್ಸ್ ಆಫೀಸ್ ಗೆದ್ದರೆ, ವಿಕ್ರಾಂತ್ ರೋಣ ಚಿತ್ರದ ಮೂಲಕ ಕಿಚ್ಚ ಸುದೀಪ್ ವಿಶ್ವದ ಬಾಕ್ಸ್ ಆಫೀಸ್ ಗೆಲ್ಲಲಿದ್ದಾರೆ ಎಂದರು. ಅಂಥದ್ದೊಂದು ಭರವಸೆ ತಮಗಿದೆ ಎಂದು ಬೆನ್ನು ತಟ್ಟಿದರು. ಇದನ್ನೂ ಓದಿ: ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋಶೂಟ್‌ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ
ಈಗಾಗಲೇ ಮೂರುವರೆ ಸಾವಿರ ಸ್ಕ್ರೀನ್ ನಲ್ಲಿ ರಿಲೀಸ್ ಆಗಲು ವಿಕ್ರಾಂತ್ ರೋಣ ರೆಡಿಯಾಗಿದೆ. ಕನ್ನಡಕ್ಕಿಂತಲೂ ಇತರ ಭಾಷೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, 27ಕ್ಕೂ ಹೆಚ್ಚು ಅಧಿಕ ದೇಶಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ಮತ್ತೊಂದು ವಿಶೇಷ. ಬಾಕ್ಸ್ ಆಫೀಸ್ ವಿಚಾರದಲ್ಲಿ ಈಗಾಗಲೇ ನಿರ್ಮಾಪಕರು ಸೇಫ್ ಆಗಿದ್ದು, ಇನ್ಮುಂದೆ ಬಂದಿದ್ದೆಲ್ಲವೂ ಲಾಭ ಎನ್ನುವ ಮಾತಿದೆ. ಈವರೆಗಿನ ದಾಖಲೆಗಳನ್ನು ಈ ಸಿನಿಮಾ ಬ್ರೇಕ್ ಮಾಡಲಿದೆ ಎನ್ನುತ್ತಿದೆ ಲೆಕ್ಕಾಚಾರ.