ಹಾಸನ : ನಟ ಉಪೇಂದ್ರ ರಾಜಕೀಯ ಪ್ರವೇಶ ಕುರಿತು ಪಶುಸಂಗೋಪನಾ ಸಚಿವ ಎ.ಮಂಜು ತಮ್ಮದೇ ಶೈಲಿಯಲ್ಲಿ ಲೇವಡಿ ಮಾಡಿ ರಿಯಲ್ ಸ್ಟಾರ್‍ಗೆ ಟಾಂಗ್ ನೀಡಿದ್ದಾರೆ.
ನಟ ಉಪೇಂದ್ರ ಸಿನೆಮಾದಲ್ಲಿಯೇ ಉಳಿದಿದ್ದರೆ ಅವರ ಗೌರವ ಉಳಿಯುತ್ತಿತ್ತು. ರಾಜಕೀಯದಲ್ಲಿ ನಟನೆ ಮಾಡಲು ಸಾಧ್ಯವಿಲ್ಲ, ರಾಜಕೀಯದಲ್ಲಿ ನಟನೆ ಮಾಡಲು ಹೊರಟರೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಹೇಳಿದರು.
ಉಪೇಂದ್ರ ರಾಜಕೀಯದಲ್ಲಿ ಯಶಸ್ಸು ಕಾಣುವುದು ಅಸಾಧ್ಯ, ಅವರು ನಟನಾಗಿಯೇ ಮುಂದುವರೆದರೆ ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಚಲನ ಚಿತ್ರ ನಟರು ಮತ್ತು ಅಧಿಕಾರಿಗಳು ಗ್ಲಾಮರ್ ಮತ್ತು ಅಧಿಕಾರದಲ್ಲಿದ್ದಾಗ ಜನರ ಅಭಿಮಾನ ನೋಡಿ ರಾಜಕೀಯಕ್ಕೆ ಬರುತ್ತಾರೆ. ಆದರೆ ವಾಸ್ತವದಲ್ಲಿ ರಾಜಕಾರಣಿಗಳ ಕೆಲಸ ಸುಲಭವಲ್ಲ. ಇಲ್ಲಿ ನಾವೇ ಪ್ರತಿಯೊಬ್ಬರಿಗೂ ಅಭಿಮಾನ ತೋರಬೇಕು ಎಂದು ಉಪ್ಪಿಗೆ ಸಲಹೆ ನೀಡಿದರು.