ಬೆಂಗಳೂರು: ಬೆಂಗಳೂರಿನ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (Bengaluru International Airport) ಮತ್ತು ಸಿಟಿಯ ನಡುವಿನ ಸಂಚಾರಕ್ಕಾಗಿ ಇದೀಗ ನಮ್ಮ ಮೆಟ್ರೋ (Namma Metro) ಒಂದು ಬಿಗ್ ಅಪ್ಡೇಟ್ ನೀಡಿದೆ.
ಏರ್‌ಪೋರ್ಟ್‌ನಿಂದ ಸಿಟಿಯವರೆಗೂ ಮೆಟ್ರೋ ಮಾರ್ಗದ ಸಂಚಾರಕ್ಕಾಗಿ ಲಕ್ಷಾಂತರ ಬೆಂಗಳೂರಿಗರು ಕಾಯುತ್ತಿದ್ದಾರೆ. ಇದೀಗ ಬಿಎಂಆರ್‌ಸಿಎಲ್ (BMRCL) ಬಿಗ್ ಅಪ್ಡೇಟ್ ಕೊಟ್ಟಿದ್ದು, 2026ರ ಜೂನ್‌ನಲ್ಲಿ ವಿಮಾನ ನಿಲ್ದಾಣ ಮಾರ್ಗವನ್ನು ಹೆಬ್ಬಾಳದವರೆಗೆ ಸಂಚಾರ ಮುಕ್ತಗೊಳಿಸುವ ಬಗ್ಗೆ ಮಾಹಿತಿ ನೀಡಿದೆ.ಇದನ್ನೂ ಓದಿ: ಭಾರತದಲ್ಲಿ ಬ್ರಿಟಿಷರ ಆಡಳಿತ ವಿರೋಧಿಸಿದ ಕೀರ್ತಿ ಟಿಪ್ಪುವಿನದ್ದು: ವಿದೇಶಾಂಗ ಸಚಿವ ಜೈಶಂಕರ್
ಸಿಲಿಕಾನ್ ಸಿಟಿಯ ಹಲವೆಡೆ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಜೊತೆಗೆ ಅನೇಕ ಹೊಸ ಮಾರ್ಗಗಳಿಗೆ ಪ್ಲ್ಯಾನ್ ಕೂಡ ಆಗುತ್ತಿದೆ. ಈ ಮಧ್ಯೆ ನಗರದ ಬಹುನಿರೀಕ್ಷಿತ ಏರ್‌ಪೋರ್ಟ್ ಮಾರ್ಗ ಸಂಬಂಧ ನಮ್ಮ ಮೆಟ್ರೋ ಸಿಹಿ ಸುದ್ದಿಯನ್ನು ನೀಡಿದೆ. ಇದರಿಂದ ಲಕ್ಷಾಂತರ ಜನರ ಬಹುವರ್ಷಗಳ ಕನಸು ನನಸಾಗಲಿದೆ.
ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ನಿತ್ಯ ಲಕ್ಷಾಂತರ ಜನ ಓಡಾಟ ಮಾಡುತ್ತಾರೆ. ಈ ಭಾಗದ ಸವಾರರು ಟ್ರಾಫಿಕ್ ಕಿರಿಕಿರಿಗಳಿಂದ ಬೇಸತ್ತಿದ್ದಾರೆ. ಹೀಗಾಗಿ ಮೆಟ್ರೋ ಯಾವಾಗ ಆರಂಭ ಆಗುತ್ತದೆ ಎಂದು ಜನ ಕಾಯುತ್ತಿದ್ದರು. ಈ ಮಧ್ಯೆ ಮೆಟ್ರೋ ಮಾರ್ಗ ಶುರುವಾಗುವ ಬಗ್ಗೆ ಬಿಎಂಆರ್‌ಸಿಎಲ್ ಪಬ್ಲಿಕ್ ಟಿವಿ ಮೂಲಕ ಅಪ್ಡೇಟ್ ನೀಡಿದೆ.
ಇನ್ನೂ ಒಂದೂವರೆ ವರ್ಷದೊಳಗೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ. ಇದು ಕೆಆರ್‌ಪುರ ಮತ್ತು ವಿಮಾನ ನಿಲ್ದಾಣ ನಡುವಿನ 38 ಕಿ.ಮೀ ಉದ್ದದ ಮಾರ್ಗವಾಗಿದ್ದು, ಹೆಬ್ಬಾಳದ ಮೂಲಕ ಹಾದು ಹೋಗಲಿದೆ. ಸದ್ಯ ಹೆಬ್ಬಾಳದವರೆಗೂ ಮೆಟ್ರೋ ಓಪನ್ ಆಗುವ ಸಾಧ್ಯತೆ ಇದೆ. ಹೆಬ್ಬಾಳದಿಂದ ಕೆಆರ್‌ಪುರವರೆಗೆ ಮಾರ್ಗ ಪೂರ್ಣಗೊಳ್ಳಲು ಮತ್ತಷ್ಟು ಕಾಲವಾಕಾಶ ಬೇಕಿದ್ದು, 2026ರ ಜೂನ್‌ನಲ್ಲಿ ವಿಮಾನ ನಿಲ್ದಾಣ ಮಾರ್ಗವನ್ನು ಹೆಬ್ಬಾಳದವರೆಗೆ ಸಂಚಾರ ಮುಕ್ತಗೊಳಿಸುವ ಬಗ್ಗೆ ಮಾಹಿತಿ ನೀಡಿದೆ.
ಸದ್ಯ ಈ ಮಾರ್ಗವನ್ನು ಅಂದುಕೊಂಡಂತೆ ಆರಂಭಗೊಳಿಸುವ ನಿಟ್ಟಿನಲ್ಲಿ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡುವಂತೆ ಗುತ್ತಿಗೆ ಕಂಪನಿಗೆ ಬಿಎಂಆರ್‌ಸಿಎಲ್ ಸೂಚನೆ ನೀಡಿದೆ. ಅದರಂತೆ ಸಿವಿಲ್ ಕೆಲಸಗಳಿಗೆ ವೇಗ ಸಿಗಲಿದೆ. ಮಾರ್ಗದಲ್ಲಿ ಸಿವಿಲ್ ಕಾಮಗಾರಿ ಶೇಕಡಾ 50ರಷ್ಟು ಮುಗಿದಿದೆ. ಮಾರ್ಗದಲ್ಲಿ ಟ್ರ‍್ಯಾಕ್‌ನ ವಯಾಡಕ್ಟ್ಗಳನ್ನ ಕೂಡ ಜೋಡಿಸುವ ಕಾರ್ಯ ವೇಗವಾಗಿ ಸಾಗುತ್ತಿದೆ. ಯಾವುದೇ ಸಮಸ್ಯೆ ಇಲ್ಲದೇ ಕಾಮಗಾರಿ ವೇಗವಾಗಿ ಮುಗಿದರೆ 2026ರ ಜೂನ್‌ನಲ್ಲಿ ಸಂಚಾರ ಮುಕ್ತವಾಗಿ ಈ ಭಾಗದ ಜನರ ಟ್ರಾಫಿಕ್ ಜಂಜಾಟಕ್ಕೆ ಬ್ರೇಕ್ ಬೀಳಲಿದೆ.ಇದನ್ನೂ ಓದಿ: Cyclone Fengal | ಚಂಡಮಾರುತಕ್ಕೆ ಮೂವರು ಬಲಿ – 100ಕ್ಕೂ ಹೆಚ್ಚು ಮಂದಿ ರಕ್ಷಣೆ