ಮುಂಬರುವ ಹಬ್ಬಗಳಲ್ಲಿ ಖಾದಿ ಉತ್ಪನ್ನಗಳನ್ನೇ ಗಿಫ್ಟ್ ಕೊಡಿ – ಜನರಿಗೆ ಮೋದಿ ಕರೆ

Public TV
2 Min Read
MODI 01

ನವದೆಹಲಿ: ಮುಂಬರುವ ಹಬ್ಬಗಳಲ್ಲಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಖಾದಿ ಉತ್ಪನ್ನಗಳನ್ನೇ ಉಡುಗೊರೆಯಾಗಿ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಖಾದಿ ಮಹತ್ವವನ್ನು ನೆನಪಿಸಿಕೊಳ್ಳುವ ಸಲುವಾಗಿ ಸಾಬರಮತಿ ನದಿ ತೀರದಲ್ಲಿಂದು ಆಯೋಜಿಸಿದ್ದ `ಖಾದಿ ಉತ್ಸವ’ದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಅಲ್ಲದೇ ಪ್ರಧಾನಿ ಅವರೊಂದಿಗೆ ಖಾದಿ ಉತ್ಸವದಲ್ಲಿ ಸುಮಾರು 7,500 ಮಹಿಳೆಯರು ಏಕಕಾಲಕ್ಕೆ ಚರಕದಲ್ಲಿ ನೂಲುವ ಮೂಲಕ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: 2 ಮಕ್ಕಳ ತಾಯಿಯೊಂದಿಗೆ ಪರಾರಿಯಾಗಿ ಜೀವನಕ್ಕೆ ಗಾರೆ ಕೆಲಸ ಮಾಡ್ತಿದ್ದ BE ಗ್ರ್ಯಾಜುಯೆಟ್‌ – ಪೊಲೀಸರ ಅತಿಥಿ

ನಾನು ದೇಶದ ಜನತೆಗೆ ಒಂದು ಮನವಿ ಮಾಡುತ್ತೇನೆ. ಮುಂಬರುವ ಹಬ್ಬಗಳಲ್ಲಿ ಈ ಬಾರಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಖಾದಿ ಉತ್ಪನ್ನಗಳನ್ನೇ ಉಡುಗೊರೆಯಾಗಿ ಕೊಡಿ. ನೀವು ಹಲವು ರೀತಿಯ ಬಟ್ಟೆಗಳನ್ನು ಹೊಂದಿರಬಹುದು. ಆದರೆ ಖಾದಿಗೆ ಸ್ಥಾನ ನೀಡಿದರೆ `ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗಲಿದೆ ಎಂದು ಮನವಿ ಮಾಡಿದ್ದಾರೆ.

ಮುಂದುವರಿದು, ಇದೇ ಮೊದಲ ಬಾರಿಗೆ ಭಾರತದ ಖಾದಿ ಗ್ರಾಮೋದ್ಯೋಗದ ವಹಿವಾಟು 1 ಲಕ್ಷ ಕೋಟಿ ರೂ. ದಾಟಿದೆ. ಇದಕ್ಕೆ ಕಾರಣ ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಖಾದಿ ಮಾರಾಟ 4 ಪಟ್ಟು ಅಧಿಕವಾಗಿದೆ. ಈ ಬೆಳವಣಿಗೆಯಿಂದ ಹಳ್ಳಿ-ಹಳ್ಳಿಗಳಲ್ಲೂ ಆದಾಯ ಹರಿದುಬಂದಿದೆ. ಜನರಿಗೂ ಉದ್ಯೋಗಾವಕಾಶ ಸಿಕ್ಕಿದ್ದು, ಸ್ವಾವಲಂಬಿಗಳಾಗಿದ್ದಾರೆ. ಸರಿ ಸುಮಾರು ಎರಡೂವರೆ ಕೋಟಿ ಉದ್ಯೋಗ ಈ ಖಾದಿ ಉದ್ಯಮದಿಂದ ಸೃಷ್ಟಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಖಾದಿ ಸಹ ಸ್ವಾತಂತ್ರ‍್ಯ ಚಳವಳಿಯಲ್ಲಿ ಪ್ರಮುಖ ಶಕ್ತಿಯಾಗಿತ್ತು. ಬ್ರಿಟಿಷರ ಗುಲಾಮಗಿರಿಯನ್ನು ಅಂದಿನ ಕಾಲದಲ್ಲೇ ಮುರಿದಿತ್ತು. ಇದೀಗ ಅದೇ ಖಾದಿ ಭಾರತದ ಅಭಿವೃದ್ಧಿಯ ಪಥದಲ್ಲೂ ಪ್ರಮುಖ ಪಾತ್ರ ವಹಿಸಿದೆ. ಅಷ್ಟೇ ಅಲ್ಲ ಸ್ವಾವಲಂಬಿ ಭಾರತದ ಕನಸಿಗೆ ಖಾದಿ ಪ್ರಮುಖ ಶಕ್ತಿಯಾಗಿದೆ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಇಂಡೋ-ಪಾಕ್‌ ಕದನಕ್ಕೆ ಕ್ಷಣಗಣನೆ – ಟ್ವಿಟ್ಟರ್‌ನಲ್ಲಿ ಶುರುವಾಗಿದೆ ಟ್ರೆಂಡ್ ಹವಾ

ಒಂದು ಕಾಲದಲ್ಲಿ ಸಣ್ಣ-ಸಣ್ಣ ಸಾಲಗಳಿಗೂ ಬ್ಯಾಂಕ್‌ಗೆ ಅಲೆದಾಡುವ ಪರಿಸ್ಥಿತಿ ಇತ್ತು. ಇದೀಗ 50 ಸಾವಿರದಿಂದ 10 ಲಕ್ಷ ರೂಪಾಯಿ ಸಾಲ ಯಾವುದೇ ಅಡತಡೆ ಇಲ್ಲದೆ ಪಡೆಯಲು ಸಾಧ್ಯವಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರ ಖಾದಿ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡು ಸಬಲೀಕರಣರಾಗಿದ್ದಾರೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *