KUWSDB ಎಂಜಿನಿಯರ್‌ಗೆ ಉಪಲೋಕಾಯುಕ್ತ ತರಾಟೆ

Public TV
2 Min Read
Chitradurga Upalokayukta Class For engineer 1

ಚಿತ್ರದುರ್ಗ: ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್‌ಗೆ (Urban Water Supply and Drainage Board Engineer) ಉಪಲೋಕಾಯುಕ್ತ (Deputy Lokayukta) ತರಾಟೆ ತೆಗೆದುಕೊಂಡ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.

ಚಿತ್ರದುರ್ಗದ ಕೊಳಚೆ ಪ್ರದೇಶಗಳಿಗೆ ಇಂದು ಬೆಳ್ಳಂಬೆಳಗ್ಗೆ ಭೇಟಿ ನೀಡಿದ್ದ ಫಣೀಂದ್ರ ಮಲ್ಲಾಪುರ ಹಾಗೂ ಪಿಳ್ಳೇಕರನಳ್ಳಿ ಬಳಿಯ ಕೊಳಚೆ ನೀರು ಶುದ್ಧೀಕರಣ ಘಟಕಗಳ ಬಳಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಹೆಬ್ಬಾಳ್ಕರ್‌ ಕಾರನ್ನು ಬಟ್ಟೆ ಹಾಕಿ ಮುಚ್ಚಿದ್ದು ಯಾಕೆ? – ಮತ್ತೆ ಅನುಮಾನ ವ್ಯಕ್ತಪಡಿಸಿದ ಛಲವಾದಿ

Chitradurga Upalokayukta Class For engineer

ಈ ವೇಳೆ ಚಿತ್ರದುರ್ಗದ ಹೊರವಲಯದಲ್ಲಿನ ಮಲ್ಲಾಪುರ ಕೆರೆ ಬಳಿಯ ಪ್ರದೇಶದಲ್ಲಿನ ನಾಗರೀಕರ ಅಹವಾಲು ಆಲಿಸಿದ್ದು, ಸಮಸ್ಯೆಯ ಬಗ್ಗೆ ಅಸಮಾಧಾನ ಹೊರಹಾಕಿದರು. ಅಲ್ಲದೇ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಅನಿಲ್‌ನನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಬಿಜೆಪಿ ಕೋರ್‌ ಕಮಿಟಿ ಸಭೆ – ರಾಮುಲುಗೆ ರಾಧಾಮೋಹನ್‌ ದಾಸ್‌ ಕ್ಲಾಸ್‌!

ಮಲಿನ ನೀರನ್ನು ಮರುಶುದ್ಧೀಕರಿಸಿ ಕೆರೆಗೆ ಬಿಡುವ ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸಿದ ಅವರು, ನಗರ ನೀರು ಸರಬರಾಜು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಚಳಿಬಿಡಿಸಿದರು. ಈ ವೇಳೆ ಕಾಮಗಾರಿ ಮುಗಿಸಲು ಅಧಿಕಾರಿಗಳು ಹತ್ತು ದಿನ ಸಮಯಾವಕಾಶ ಕೇಳಿದಾಕ್ಷಣ ಫಣೀಂದ್ರ ಗರಂ ಆದರು. ನಾನು ಬಂದಿದ್ದೇನೆಂದು ಅವಸರದಲ್ಲಿ ಬುರುಡೆ ಬಿಡಬೇಡಿ. ಇದು ಸಾರ್ವಜನಿಕರ ಕೆಲಸ, ನಿಷ್ಠೆಯಿಂದ ಮಾಡಬೇಕು. ಹತ್ತು ದಿನ, ಹದಿನೈದು ದಿನ ಅಂತ ಸುಳ್ಳು ಹೇಳಬೇಡಿ. ಅಗತ್ಯವಿದ್ದರೆ ಒಂದು ತಿಂಗಳು ಸಮಯ ತೆಗೆದುಕೊಂಡು ನೀರು ಶುದ್ಧೀಕರಿಸಿ ಕೆರೆಗೆ ಬಿಡುವಂತೆ ಸೂಚಿಸಿದರು. ಇದನ್ನೂ ಓದಿ: ಏಯ್‌ ಯತ್ನಾಳ್‌ ಎಲ್ಲವನ್ನ ತೆಗೀಬೇಕಾ? – ಜಿಟಿಡಿ ಖಡಕ್‌ ವಾರ್ನಿಂಗ್‌

ಯೋಜನಾಬದ್ಧವಾಗಿ ಒಂದು ತಿಂಗಳಲ್ಲಿ ಕಾಮಗಾರಿ ಮುಗಿಸಿ, ಆ ಫೋಟೋ, ವೀಡಿಯೋ ಕಳುಹಿಸುವಂತೆ ತಾಕೀತು ಮಾಡಿದರು. ಅಲ್ಲದೆ ಶಾಲೆ, ಜನನಿಬಿಡ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ಈ ವೇಳೆ ಡಿಸಿ ವೆಂಕಟೇಶ್, ಜಿಪಂ ಸಿಇಓ ಸೋಮಶೇಖರ್, ನಗರಸಭೆ ಪೌರಾಯುಕ್ತರಾದ ರೇಣುಕ ಇದ್ದರು. ಇದನ್ನೂ ಓದಿ: ಬಾಹ್ಯಾಕಾಶದಿಂದ ಮಹಾ ಕುಂಭಮೇಳ – ಫೊಟೋ ಬಿಡುಗಡೆ ಮಾಡಿದ ಇಸ್ರೋ

Share This Article