ನವದೆಹಲಿ: ಲೋಕಸಭೆ ಚುನಾವಣೆ (Lok Sabha Election) ಸನಿಹದಲ್ಲಿ ಬಿಜೆಪಿ-ಕಾಂಗ್ರೆಸ್ (BJP-Congress) ಮಧ್ಯೆ ತೆರಿಗೆ ವಾರ್ ನಡೆಯುತ್ತಿರುವ ಹೊತ್ತಲ್ಲಿಯೇ ವೈಟ್‌ಪೇಪರ್-ಬ್ಲಾಕ್ ಪೇಪರ್ ಪಾಲಿಟಿಕ್ಸ್ ಕೂಡ ಶುರುವಾಗಿದೆ. ದೇಶದ ಆರ್ಥಿಕತೆ (India Economy) ಕುರಿತಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಲೋಕಸಭೆಯಲ್ಲಿ ಶ್ವೇತಪತ್ರ (White Paper) ಮಂಡಿಸಿ ರಾಜಕೀಯವಾಗಿ, ನೀತಿ ನಿರೂಪಣೆ ವಿಚಾರವಾಗಿ ಎನ್‌ಡಿಎ ಸರ್ಕಾರ ಸ್ಥಿರವಾಗಿದೆ. ಆರ್ಥಿಕ ಸ್ಥಿತಿಯ ಬಲವರ್ಧನೆಗಾಗಿ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ವಾಜಪೇಯಿ ಸರ್ಕಾರದ (Atal Bihari Vajpayee) ಉತ್ತಮ ಆರ್ಥಿಕ ನೀತಿಯಿಂದ ಮನಮೋಹನ್ ಸಿಂಗ್ ಸರ್ಕಾರಕ್ಕೆ (Manmohan Singh) ಆರಂಭದಲ್ಲಿ ಲಾಭವಾಗಿತ್ತು. ಆದರೆ ಯುಪಿಎ ಅವಧಿಯಲ್ಲಿ ಸರ್ಕಾರದ ಖಜಾನೆ ಮತ್ತು ಹಣಕಾಸಿನ ಆದಾಯಕ್ಕೆ ಬೃಹತ್ ನಷ್ಟವನ್ನು ಉಂಟುಮಾಡುವ 15 ಹಗರಣ ನಡೆದಿತ್ತು. ಬ್ಯಾಂಕಿಂಗ್ ಕ್ಷೇತ್ರವನ್ನು ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರದ ನಾಶ ಮಾಡಿತ್ತು. ಆರ್ಥಿಕ ಚಟುವಟಿಕೆಗಳನ್ನು ಸುಗಮಗೊಳಿಸಲು ಯುಪಿಎ ಸರ್ಕಾರ ಸೋತಿತ್ತು. ಇದನ್ನೂ ಓದಿ: ಮತ್ತೆ ಮೋದಿ ಸರ್ಕಾರ; ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166
Advertisement
From double-digit inflation to single-digit inflation.
Modi Govt has successfully contained inflation through timely measures. pic.twitter.com/ghTNa7ZhcV
— BJP (@BJP4India) February 8, 2024
Advertisement
2004 ರಲ್ಲಿ ವಾಜಪೇಯಿ ನಿರ್ಗಮಿಸಿದಾಗ ಜಿಡಿಪಿ 8.8% ಇತ್ತು. 2014ರಲ್ಲಿ ಯುಪಿಎ ಸರ್ಕಾರ ಪತನವಾದಾಗಲೂ 8.2% ಇತ್ತು. 10 ವರ್ಷದಲ್ಲಿ ಭಾರತದ ಆರ್ಥಿಕತೆ ಹೆಚ್ಚು ಬೆಳವಣಿಗೆ ಆಗಲಿಲ್ಲ ಎಂಬುದರ ಸಂಕೇತ ಇದು. ದೇಶಕ್ಕೆ ನಾಯಕತ್ವ ಕೊರತೆ ಇತ್ತು. ಇದರಿಂದ ರಕ್ಷಣಾ ಕ್ಷೇತ್ರ ದುರ್ಬಲಗೊಂಡಿತ್ತು.
Advertisement
ಯುಪಿಎ ವೇಳೆ ಎರಡಂಕಿಗೆ ಏರಿದ್ದ ಹಣದುಬ್ಬರವನ್ನು ಮೋದಿ ಸರ್ಕಾರ 5%-6% ತಂದಿದೆ. ಮೇಕ್ ಇನ್ ಇಂಡಿಯಾ ಮೂಲಕ ಎನ್‌ಡಿಎ ಔದ್ಯಮಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮಾಡಿದೆ. ಕಳೆದ 10 ವರ್ಷಗಳಲ್ಲಿ ಯುಪಿಎ ಸರ್ಕಾರ ನೀಡಿದ ಸವಾಲುಗಳನ್ನು ಎನ್‌ಡಿಎ ಸರ್ಕಾರ ಯಶಸ್ವಿಯಾಗಿ ಎದುರಿಸಿದೆ. 2014ರಲ್ಲಿ ಯುಪಿಎ ಅವಧಿ ಮುಗಿಯುವ ಹೊತ್ತಿಗೆ ಆರ್ಥಿಕತೆ ಅಚೇತನ ಸ್ಥಿತಿಯಲ್ಲಿತ್ತು. ಎನ್‌ಡಿಎ ಸರ್ಕಾರದಿಂದ ಕಠಿಣ ಕ್ರಮದಿಂದ ದೇಶದ ಆರ್ಥಿಕತೆ ಚೇತರಿಸಿದೆ. ಇದನ್ನೂ ಓದಿ: ಈ ಬಾರಿ SSLC, PUC ಪರೀಕ್ಷೆ ವೇಳೆ ಹಿಜಬ್‍ಗೆ ಇರುತ್ತಾ ಅವಕಾಶ?
Advertisement
These newspaper headlines speak volumes about the management of inflation in the past versus the present! pic.twitter.com/FeBjuNtWor
— BJP (@BJP4India) February 8, 2024
ಶ್ವೇತ ಪ್ರತದಲ್ಲಿರುವ ಅಂಕಿ ಸಂಖ್ಯೆಯಲ್ಲಿ ಏನಿದೆ?
ಹಣದುಬ್ಬರ
ಯುಪಿಎ – 8.2%
ಎನ್‌ಡಿಎ -5.0%
ಬಂಡವಾಳ ವೆಚ್ಚ
ಯುಪಿಎ – 1.7%
ಎನ್‌ಡಿಎ – 3.2%
ಹೆದ್ದಾರಿ ನಿರ್ಮಾಣ – ಪ್ರತಿ ದಿನ/ ಕಿ.ಮೀ
ಯುಪಿಎ – 12
ಎನ್‌ಡಿಎ – 28.3
ಜಾಗತಿಕ ಆರ್ಥಿಕತೆಯಲ್ಲಿ ಸ್ಥಾನ
ಯುಪಿಎ – 10
ಎನ್‌ಡಿಎ – 5
ಟೋಲ್‌ನಲ್ಲಿ ಕಾಯುವ ಸಮಯ
ಯುಪಿಎ – 12.2 ನಿಮಿಷ
ಎನ್‌ಡಿಎ – 47 ಸೆಕೆಂಡ್
ಒಟ್ಟು ವಿಮಾನ ನಿಲ್ದಾಣಗಳು
ಯುಪಿಎ -74
ಎನ್‌ಡಿಎ -149
ಒಟ್ಟು ಬ್ರಾಡ್‌ಬ್ಯಾಂಡ್ ಸಬ್‌ಸ್ಕ್ರೈಬರ್ಸ್
ಯುಪಿಎ – 6 ಕೋಟಿ
ಎನ್‌ಡಿಎ – 90 ಕೋಟಿ
ವಯರ್‌ಲೆಸ್ ಡೇಟಾ ಟ್ಯಾರಿಫ್ – 1 ಜಿಬಿ ದರ
ಯುಪಿಎ – 269 ರೂ.
ಎನ್‌ಡಿಎ – 10.1 ರೂ.
ವೈದ್ಯಕೀಯ ಕಾಲೇಜ್
ಯುಪಿಎ – 387
ಎನ್‌ಡಿಎ – 706
ವೈದ್ಯಕೀಯ ಸೀಟುಗಳು
ಯುಪಿಎ – 51,348
ಎನ್‌ಡಿಎ – 1,08,940
ವಿಶ್ವವಿದ್ಯಾಲಯಗಳು
ಯುಪಿಎ – 676
ಎನ್‌ಡಿಎ – 1168
ಎಲೆಕ್ಟ್ರಾನಿಕ್ ರಫ್ತು
ಯುಪಿಎ – 7.6 ಶತಕೋಟಿ ಡಾಲರ್
ಎನ್‌ಡಿಎ – 22.7 ಶತಕೋಟಿ ಡಾಲರ್
ವಿದೇಶಿ ನೇರ ಹೂಡಿಕೆ
ಯುಪಿಎ – 305 ಶತಕೋಟಿ ಡಾಲರ್
ಎನ್‌ಡಿಎ – 596 ಶತಕೋಟಿ ಡಾಲರ್
ರೈಲು ಅಪಘಾತ – ಅಪಘಾತದ ಸರಾಸರಿ ಸಂಖ್ಯೆ
ಯುಪಿಎ – 233
ಎನ್‌ಡಿಎ – 34
ಒಟ್ಟು ಸ್ಥಾಪಿತ ವಿದ್ಯುತ್ ಸಾಮರ್ಥ್ಯ
ಯುಪಿಎ – 249 ಗಿಗಾವ್ಯಾಟ್
ಎನ್‌ಡಿಎ – 429 ಗಿಗಾವ್ಯಾಟ್
ಒಟ್ಟು ಸ್ಥಾಪಿತ ನವೀಕರಿಸಬಹುದಾದ ಶಕ್ತಿ
ಯುಪಿಎ – 76 ಗಿಗಾವ್ಯಾಟ್
ಎನ್‌ಡಿಎ – 181 ಗಿಗಾವ್ಯಾಟ್
ಪರೋಕ್ಷ ತೆರಿಗೆ ದರ
ಯುಪಿಎ – 15%
ಎನ್‌ಡಿಎ -12.2%
ಬಡತನ ಪ್ರಮಾಣ
ಯುಪಿಎ – 29%
ಎನ್‌ಡಿಎ -11%
ಸ್ಟಾರ್ಟಪ್ ಸಂಖ್ಯೆ
ಯುಪಿಎ – 350
ಎನ್‌ಡಿಎ -1,17,257
ಎಲ್‌ಪಿಜಿ ಸಂಪರ್ಕ
ಯುಪಿಎ -14.5 ಕೋಟಿ
ಎನ್‌ಡಿಎ – 31.4 ಕೋಟಿ
ಜಾಗತಿಕ ನಾವಿನ್ಯ ಸೂಚ್ಯಂಕ
ಯುಪಿಎ – 81
ಎನ್‌ಡಿಎ – 40
ಮೆಟ್ರೋ ರೈಲು
ಯುಪಿಎ – 5 ನಗರ
ಎನ್‌ಡಿಎ – 20 ನಗರ