ಲಕ್ನೋ: ರಸ್ತೆಯಲ್ಲಿ ಹೋಗುತ್ತಿದ್ದಾಗ ಚುಡಾಯಿಸಿದ್ದಕ್ಕೆ ವ್ಯಕ್ತಿಯೋರ್ವನಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ (slippers) ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶದ (Uttar Pradesh) ಜಲೌನ್ ಜಿಲ್ಲೆಯ (Jalaun district) ಓರೈ ನಗರದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕುಡಿತ ಮತ್ತಿನಲ್ಲಿ ವ್ಯಕ್ತಿ ಮಹಿಳೆಯನ್ನು ಅಸಭ್ಯವಾಗಿ ಚುಡಾಯಿಸಿದ್ದಾನೆ. ಇದರಿಂದ ಚಪ್ಪಲಿಯಿಂದ ಮಹಿಳೆ (Women) ರಪರಪನೇ ಬಾರಿಸಿದ್ದಾಳೆ. ಇದನ್ನೂ ಓದಿ: ಟೆಕ್‍ಆಫ್ ಆಗಿದ್ದ ವಿಮಾನದಲ್ಲಿ ಕಿಟಕಿ ಒದ್ದು ದಾಂಧಲೆ- ಪಾಕ್ ಪ್ರಯಾಣಿಕ ಅರೆಸ್ಟ್
20 सेकेंड में 40 चप्पल| हर सेकेंड 2 चप्पल मार
उतारा छेड़खानी का भूत।
यूपी के उरई जिले के कोंच कस्बे के एक मोहल्ले में
एक युवक को युवती से छेड़खानी करना भारी पड़ गया। पहले लड़की ने की ज़बरदस्त पिटाई फिर पुलिस ने लिया हिरासत में। pic.twitter.com/x0WoKfy69E
— Shubhankar Mishra (@shubhankrmishra) September 18, 2022
- Advertisement
ವೀಡಿಯೋದಲ್ಲಿ ಆರೋಪಿ ಕುಕ್ಕರುಗಾಲಿನಲ್ಲಿ ಕುಳಿತಿದ್ದು, ಮಹಿಳೆ ತನ್ನ ಎರಡು ಕಾಲಿನ ಚಪ್ಪಲಿಯನ್ನು ಎರಡು ಕೈಯಲ್ಲಿ ಹಿಡಿದು ಬಿಟ್ಟುಬಿಡದೇ ಆತನ ಮುಖಕ್ಕೆ ಹೊಡೆದಿದ್ದಾಳೆ. 20 ಸೆಕೆಂಡ್ ಇರುವ ವೀಡಿಯೋದಲ್ಲಿ ಮಹಿಳೆ 40 ಬಾರಿ ಚಪ್ಪಲಿಯಿಂದ ಆತನಿಗೆ ಬಾರಿಸಿರುವುದನ್ನು ಕಾಣಬಹುದಾಗಿದೆ. ನಂತರ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ-ಪಿಯು ಮಂಡಳಿ ವಿಲೀನಕ್ಕೆ ನಿರ್ಧಾರ – ಸಂಪುಟ ಸಭೆಯಲ್ಲಿ ಅನುಮೋದನೆ
- Advertisement
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸುಮಾರು 50,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 530ಕ್ಕೂ ಹೆಚ್ಚು ರೀ ಟ್ವೀಟ್‍ಗಳು ಬಂದಿದೆ. ಅನೇಕ ಮಂದಿ ಮಹಿಳೆಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದು, ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.