InternationalLatestMain Post

ಟೇಕ್‍ಆಫ್ ಆಗಿದ್ದ ವಿಮಾನದಲ್ಲಿ ಕಿಟಕಿ ಒದ್ದು ದಾಂಧಲೆ- ಪಾಕ್‌ ಪ್ರಯಾಣಿಕ ಅರೆಸ್ಟ್‌

ಇಸ್ಲಾಮಾಬಾದ್: ಪ್ರಯಾಣಿಕನೊಬ್ಬ ವಿಮಾನ ಟೇಕ್‍ಆಫ್‍ಗೊಳ್ಳುತ್ತಿದ್ದಂತೆ ವಿಮಾನದ ಕಿಟಕಿಗೆ (Window) ಒದ್ದು ಹಾನಿಗೊಳಿಸಿದ ಘಟನೆ ಪಾಕಿಸ್ತಾನ (Pakistan) ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನಲ್ಲಿ ನಡೆದಿದೆ.

ಪಾಕಿಸ್ತಾನಿ ಪ್ರಯಾಣಿಕನೊಬ್ಬ (Passenger) ಪೇಶಾವರದಿಂದ ದುಬೈಗೆ ತೆರಳುತ್ತಿದ್ದ ವಿಮಾನವನ್ನು ಹತ್ತಿದ್ದ. ಅದು ಟೇಕ್ಆಫ್ ಆಗುತ್ತಿದ್ದಂತೆ ಕ್ಯಾಬಿನ್ ಸಿಬ್ಬಂದಿಯನ್ನು ವಿಮಾನದಿಂದ (Flight) ಕೆಳಗಿಳಿಸಲು ಹೇಳಿದ್ದಾನೆ. ಆಗ ಸಿಬ್ಬಂದಿಯು ಆತನ ಮನವೊಲಿಸಲು ಪ್ರಯತ್ನಿಸುತ್ತಾರೆ. ಆದರೆ ಆತ ಈ ಮಾತಿಗೆ ಬೆಲೆ ಕೊಡದೆ ಸೀಟ್ ಮೇಲೆ ಹತ್ತಿ ವಿಮಾನದ ಕಿಟಕಿಯ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಾನೆ. ಈ ವೇಳೆ ವಿಮಾನದ ಕಿಟಕಿಗೆ ಸ್ವಲ್ಪ ಹಾನಿ ಆಗುತ್ತದೆ. ಇದರಿಂದಾಗಿ ಕೆಲಕಾಲ ಪ್ರಯಾಣಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.

ಇನ್ನೊಂದು ವೀಡಿಯೋದಲ್ಲಿ ಆ ವ್ಯಕ್ತಿಯನ್ನು ವಿಮಾನ ಸಿಬ್ಬಂದಿ ಶಾಂತಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಆತ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಬದಲಿಗೆ ಆತ ವಿಮಾನದಲ್ಲೇ ಕೆಳಗೆ ಮಲಗುವುದು, ಮಲಗುವ ಮೊದಲು ಆಜಾನ್ ಕೂಗುತ್ತಾನೆ. ಇದನ್ನೂ ಓದಿ: IAS ಅಧಿಕಾರಿ ಅನುರಾಗ್ ತಿವಾರಿ ಸಾವು ಕೇಸ್ – ಸಹಜ ಸಾವು ಎಂದ ಸಿಬಿಐ ವರದಿ ತಿರಸ್ಕೃತ

ಘಟನೆಗೆ ಸಂಬಂಧಿಸಿ ವಿಮಾನವು ದುಬೈಗೆ ಬರುತ್ತಿದ್ದಂತೆ ಆ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ಬುಗಿಲೆದ್ದ ಹಿಂದೂ, ಮುಸ್ಲಿಂ ಗಲಾಟೆ – ಹಿಂದೂ ದೇಗುಲಗಳ ಧ್ವಂಸಕ್ಕೆ ಭಾರತ ಖಂಡನೆ

Live Tv

Leave a Reply

Your email address will not be published.

Back to top button