ಉಡುಪಿ| ಹೊಸ ಮಾರಿಗುಡಿಗೆ ಬಾಲಿವುಡ್‌ ಖ್ಯಾತ ನಟ ಸುನೀಲ್‌ ಶೆಟ್ಟಿ ಭೇಟಿ

Public TV
1 Min Read
sunil shetty kapu hosa marigudi temple

ಉಡುಪಿ: ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ (Sunil Shetty) ಕುಟುಂಬ ಸಮೇತ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೊಸ ಮಾರಿಗುಡಿಗೆ ಭೇಟಿ ಕೊಟ್ಟರು.

ಇತ್ತೀಚೆಗಷ್ಟೇ ಬ್ರಹ್ಮಕಲಶೋತ್ಸವದ ಮೂಲಕ ಹೊಸ ಮೆರುಗು ಪಡೆದಿರುವ ದೇವಾಲಯವನ್ನು ಕಂಡು ಖುಷಿಪಟ್ಟರು. ದೇವಾಲಯದ ನಿರ್ಮಾಣ ಹಾಗೂ ಇಲ್ಲಿನ ಶಿಲ್ಪಗಳ ರಚನೆಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡಿನಲ್ಲಿ ನಡೆಯುತ್ತಿರುವ ಉತ್ಸವದ ಪ್ರಯುಕ್ತ ತಾಯಿಯ ಜೊತೆ ಸುನೀಲ್ ಶೆಟ್ಟಿ ತುಳುನಾಡಿಗೆ ಬಂದಿದ್ದರು. ಮೂಲತಃ ಮುಲ್ಕಿಯವರಾದ ಸುನೀಲ್ ಶೆಟ್ಟಿ ಇದೇ ವೇಳೆ ಕಾಪು ಕ್ಷೇತ್ರಕ್ಕೆ ಭೇಟಿಕೊಟ್ಟು, ತಾಯಿಗೆ ಮಾರಿಯಮ್ಮನ ದರ್ಶನ ಮಾಡಿಸಿದರು.

ಈ ವೇಳೆ ಸುನೀಲ್ ಶೆಟ್ಟಿಯ ಅನೇಕ ಬಂಧುಗಳು ಜೊತೆಗಿದ್ದರು. ಅವರು ದೇಗುಲಕ್ಕೆ ಭೇಟಿ ಕೊಟ್ಟ ವೇಳೆಯಲ್ಲಿ ಪೂಜೆ ಕೂಡ ನಡೆದು, ಅದರಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು. ದೇಗುಲದ ವತಿಯಿಂದ ಸುನೀಲ್ ಶೆಟ್ಟಿ ಹಾಗೂ ಅವರ ತಾಯಿಯನ್ನು ಗೌರವಿಸಲಾಯಿತು.

Share This Article