ಲಕ್ನೋ: ವರದಕ್ಷಿಣೆ ಕಿರುಕುಳದಿಂದ ಕೊಲೆಗೀಡಾಗಿದ್ದ ಮಹಿಳೆಯೊಬ್ಬಳು ಮತ್ತೊಬ್ಬನನ್ನು ಮದುವೆಯಾಗಿರುವ ಪ್ರಕರಣವೊಂದು ಉತ್ತರಪ್ರದೇಶದ ಫಾಜೀಯಾಬಾದ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ರೂಬಿ ಹಾಗೂ ಆಕೆಯ ಇನ್ನೊಬ್ಬ ಪತಿ ರಾವುನನ್ನು ಸಫ್ದರ್ಜಂಗ್ ಪೊಲೀಸರು ಬಂಧಿಸಿದ್ದಾರೆ. ರೂಭಿಯು ಬಾರಾಬಂಕಿಯ ನಿವಾಸಿಯಾಗಿದ್ದು, ಅದೇ ಪ್ರದೇಶದ ನಿವಾಸಿಯಾಗಿದ್ದ ರಾಹುಲ್ ಎಂಬಾತನನ್ನು 2016ರ ಜನವರಿಯಲ್ಲಿ ಮದುವೆಯಾಗಿದ್ದಳು. 2017ರ ಜೂನ್ ನಲ್ಲಿ ರೂಬಿ ತಂದೆ ಹರಿಪ್ರಸಾದ್ ನನ್ನ ಮಗಳನ್ನು ಪತಿ ರಾಹುಲ್, ಆಕೆಯ ಮಾವ ರಾಮಹರ್ಷ ಹಾಗೂ ಅತ್ತೆ ಬಾರ್ಕಿ ವರದಕ್ಷಿಣೆ ಕಿರುಕುಳ ನೀಡಿ ಕೊಂದುಹಾಕಿದ್ದಾರೆ ಎಂದು ದೂರು ನೀಡಿದ್ದರು.
Advertisement
Advertisement
ಈ ಕುರಿತು ತನಿಖೆ ಆರಂಭಿಸಿದ ಸಫ್ದರ್ಜಂಗ್ ಪೊಲೀಸ್ ಠಾಣೆಯ ಪೊಲೀಸರು ಕೊಲೆ ಆರೋಪ ಸಾಬೀತು ಮಾಡುವಂತಹ ಯಾವುದೇ ಸಾಕ್ಷ್ಯಗಳು ಸಿಗದೇ ಕಾರಣ ದೂರನ್ನು ದಾಖಲಿಸಿಕೊಳ್ಳಲಿಲ್ಲ. ಪೊಲೀಸರು ದೂರು ದಾಖಲಿಕೊಳ್ಳದ್ದಕ್ಕೆ ಹರಿಪ್ರಸಾದ್‍ರವರು ಕೋರ್ಟ್ ಮೊರೆ ಹೋಗಿದ್ದರು. 2018ರ ಜುಲೈ ತಿಂಗಳಲ್ಲಿ ಕೋರ್ಟ್ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆ ಆದೇಶ ನೀಡಿತ್ತು.
Advertisement
ಈ ಕುರಿತು ತನಿಖೆ ಕೈಗೊಂಡ ಪೊಲೀಸರಿಗೆ ಮಹಿಳೆಯ ಫೇಸ್ಬುಕ್ ಹಾಗೂ ಆಕೆಯ ದೂರವಾಣಿ ಕರೆಗಳ ಮೇಲೆ ಅನುಮಾನ ಬಂದು, ತೀವ್ರ ತನಿಖೆ ನಡೆಸಿದಾಗ, ಆಕೆಯು ದೆಹಲಿಯಲ್ಲಿ ಮತ್ತೊಬ್ಬನೊಂದಿಗೆ ಮದುವೆಯಾಗಿ ಜೀವನ ನಡೆಸುತ್ತಿರುವ ವಿಚಾರ ತಿಳಿದು ಬಂದಿದೆ. ಕೂಡಲೇ ದೆಹಲಿಗೆ ತೆರಳಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿದ ಬಾರಾಬಂಕಿ ಜಿಲ್ಲಾ ವರಿಷ್ಠಾಧಿಕಾರಿ ವಿ.ಪಿ.ಶ್ರೀವಾತ್ಸವ್, ಕೊಲೆಯಾದ ಮಹಿಳೆಯ ಮೃತದೇಹ ಸಿಗದ ಕಾರಣ, ದೂರನ್ನು ದಾಖಲಿಸಿಕೊಂಡಿರಲಿಲಲ್ಲ. ಕೋರ್ಟ್ ಆದೇಶದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗಿಳಿದಾಗ, ಆಕೆಯು ಜೀವಂತವಾಗಿದ್ದಾಳೆಂದು ತಿಳಿದು ಬಂತು. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಆಕೆಯು ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ಈ ರೀತಿಯ ನಾಟಕವಾಡಿರುವುದಾಗಿ ಒಪ್ಪಿಕೊಂಡಿದ್ದಾಳೆಂದು ತಿಳಿಸಿದ್ದಾರೆ.
ನ್ಯಾಯಾಲಯದ ದಿಕ್ಕು ತಪ್ಪಿಸಿದ ರೂಭಿ, ಪತಿ ರಾಹುಲ್ ಹಾಗೂ ತಂದೆ ಹರಿಪ್ರಸಾದ್ ವಿರುದ್ಧ ಐಪಿಸಿ ಸೆಕ್ಷನ್ 182ರ ಅಡಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv