ಲಕ್ನೋ: ಮಕ್ಕಳಾಗುತ್ತಿಲ್ಲವೆಂದು ಪಾಪಿ ಅತ್ತೆಯೊಬ್ಬಳು ಸೊಸೆಯಿದ್ದ ಕೋಣೆಗೆ ತನ್ನ ಮತ್ತಿಬ್ಬರ ಪುತ್ರರಿಬ್ಬರನ್ನು ಕಳುಹಿಸಿ ಅತ್ಯಾಚಾರ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ.
Advertisement
ಪಾಪಿ ಅತ್ತೆಗೆ ಮೂವರು ಗಂಡು ಮಕ್ಕಳು. ಓರ್ವ ಮಗನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಆಕೆ ತನ್ನ ಸೊಸೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾಳೆ. ಇದರ ಸಲುವಾಗಿ ಸೊಸೆ ಮಲಗಿದ್ದ ಸಂದರ್ಭದಲ್ಲಿ ತನ್ನ ಇಬ್ಬರು ಪುತ್ರರನ್ನು ಆಕೆಯ ಕೋಣೆಗೆ ಕುಳಹಿಸಿದ್ದಾಳೆ. ಈ ಮೂಲಕ ಸೊಸೆಯ ಮೇಲೆ ಅತ್ಯಾಚಾರ ಮಾಡಲು ಪ್ರೇರೇಪಿಸಿದ್ದಾಳೆ. ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ ತನಿಖೆ CBIಗೆ ವಹಿಸುವಂತೆ ಬಿಜೆಪಿ ಒತ್ತಾಯ
Advertisement
ಘಟನೆಯ ಬಳಿಕ ಸೊಸೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರಿನಲ್ಲಿ ನನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮೈದುನರಿಬ್ಬರು 2 ದಿನ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ- ಕೊಲೆ ಆರೋಪ
Advertisement
Advertisement
ಈ ಬಗ್ಗೆ ತನಿಖೆ ನಡೆಸಿದಾಗ ಮೊಮ್ಮಗ ಬೇಕೆಂಬ ಆಸೆಗೆ ಮಹಿಳೆ ತನ್ನ ಸೊಸೆಯೊಂದಿಗೆ ಈ ದುಷ್ಕøತ್ಯ ಎಸಗಿರುವುದು ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಎಸ್ಪಿ ಸಿಟಿ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.